ಹಾಸನ : ಕೆಲ ಹೊತ್ತು ಭೂಮಿ ಕಂಪಿಸಿರುವಂತಹ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮುತ್ತಿಗೆ, ಹನೇಮಾರನಹಳ್ಳಿ, ಮಲ್ಲಿಪಟ್ಟಣ, ನಿಲುವಾಗಿಲು,ರಾಮನಾಥಪುರ,ಕಾಳೇನಹಳ್ಳಿ,ಕೇರಳಾಪುರ,ಸೋಂಪುರ ಇನ್ನೂ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಕಾಳೇನಹಳ್ಳಿ ಸೇರಿ ಹಲವು ಕಡೆ ಭೂಮಿ ಕಂಪಿಸಿದೆ. ಮನೆಯಲ್ಲಿದ್ದ ಪಾತ್ರೆ ಮತ್ತು ಗೃಹೋಪಯೋಗಿ ವಸ್ತುಗಳು ಅಲುಗಾಡಿವೆ. ಮನೆಯಲ್ಲಿದ್ದ ಕುಟುಂಬಸ್ಥರು ಆತಂಕದಿಂದ ಮನೆಯಿಂದ ಹೊರಗೆ ಬಂದಿದ್ದಾರೆ.
ಈ ಘಟನೆ ಇಂದು ಸಂಜೆ ಐದು ಗಂಟೆಯ ಸಮಯದಲ್ಲಿ ಜರುಗಿದೆ. ಇದರಿಂದಾಗಿ ಗ್ರಾಮದ ಹಲವರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಮತ್ತು ತಾಲೂಕು ಆಡಳಿತದ ವಿವಿಧ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.