ಹಾಸನ: ಪ್ರವಾಹ ಸಂತ್ರಸ್ತರ ನೋವಿಗೆ ಶ್ರವಣಬೆಳಗೋಳದ ಜೈನಮಠ ಸ್ಪಂದಿಸಿದೆ. ಮಠದ ಅಧೀನ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ 10 ಲಕ್ಷ ರೂ. ದೇಣಿಗೆಯನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ.
ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಮೂಲಕ ದೇಣಿಗೆಯ ಚೆಕ್ನ್ನು ಮಠದ ಪ್ರತಿನಿಧಿಗಳು ಸರ್ಕಾರಕ್ಕೆ ಹಸ್ತಾಂತರ ಮಾಡಿದರು.
ಈ ವೇಳೆ ಶ್ರವಣಬೆಳಗೋಳ ಜೈನ ಸಮಾಜದ ಹೆಚ್.ಪಿ. ಅಶೋಕ್ ಕುಮಾರ್, ಗೊಮ್ಮಟೇಶ್ವರ ರಾವಣ್ಣನವರ್, ಪದ್ಮರಾಜ್ ಜೈನ್, ಎಸ್.ಪಿ. ಮಹೇಶ್, ಸತ್ಯನಾರಾಯಣ, ಪ್ರದೀಪ್ ಕುಮಾರ್ ಹಾಜರಿದ್ದರು.