ETV Bharat / state

ಮದ್ಯದಂಗಡಿ ತೆರೆಯಲು ಅವಕಾಶ ಕೊಡಬೇಡಿ: ಮಹಿಳೆಯರಿಂದ ಜಿಲ್ಲಾಡಳಿಕ್ಕೆ ಮನವಿ - ಮದ್ಯದಂಗಡಿ ತೆರೆಯಲು ಅವಕಾಶ ಕೊಡಬೇಡಿ

ಹಾಸನ ತಾಲೂಕಿನ ಗಾಡೇನಹಳ್ಳಿಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಕೊಡದಂತೆ ಒತ್ತಾಯಿಸಿ ಮಹಿಳೆಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.​

Do not let to open new liquor store
ಮದ್ಯದಂಗಡಿ ತೆರೆಯಲು ಅವಕಾಶ ಕೊಡಬೇಡಿ
author img

By

Published : Aug 29, 2020, 8:21 AM IST

ಹಾಸನ: ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಕೊಡದಂತೆ ಒತ್ತಾಯಿಸಿ ತಾಲೂಕಿನ ಗಾಡೇನಹಳ್ಳಿಯ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.​

ಮದ್ಯದಂಗಗಡಿ ಪ್ರಾರಂಭಕ್ಕೆ ವಿರೋಧ

ಗಾಡೇನಹಳ್ಳಿ ಗ್ರಾಮದಿಂದ ಹಾಸನಕ್ಕೆ ಹಾದು ಹೋಗುವ ರಸ್ತೆ ಪಕ್ಕದಲ್ಲಿ 8 ಗುಂಟೆ ಜಮೀನಿನಲ್ಲಿ ಅನಿಲ್ ಕುಮಾರ್ ಎಂಬುವವರು ಬಾರ್ ಮತ್ತು ರೆಸ್ಟೋರೆಂಟ್ ತೆರೆಯುವುದಾಗಿ ಊರಿನ ಹಿರಿಯರು ಮತ್ತು ಕೆಲವರಿಗೆ ಮಾತ್ರ ತಿಳಿಸಿದ್ದಾರೆ ಎಂದು ಮಹಿಳೆಯರು ದೂರಿದರು. ಆದರೆ ಇವರು ಮದ್ಯದ ಅಂಗಡಿ ತೆರೆಯುವ ಸ್ಥಳದ ಎದುರಿಗೆ ಪ್ರಸಿದ್ಧ ಕುಂಟು ಮಾರಮ್ಮ ಎಂಬ ದೇವಸ್ಥಾನ, ಪಕ್ಕದಲ್ಲಿ ಒಂದು ಮಹಿಳಾ ಬೆಥನಿ ವಿದ್ಯಾ ಶಿಕ್ಷಣ ಸಂಸ್ಥೆ ಇದೆ. ಅದೇ ಮಾರ್ಗದಲ್ಲಿ ಚರ್ಚ್​ ಮತ್ತು ಪೊಲೀಸ್ ತರಬೇತಿ ಶಾಲೆಯಿದ್ದು, ಮದ್ಯದ ಅಂಗಡಿ ಪ್ರಾರಂಭವಾದರೆ ಎಲ್ಲರಿಗೂ ತೊಂದರೆಯಾಗಲಿದೆ ಎಂದಿದ್ದಾರೆ.

ಅತಿಯಾದ ಮದ್ಯ ಸೇವನೆ ಅಶಾಂತಿ ಮತ್ತು ಅನಾರೋಗ್ಯಕ್ಕೆ ಕಾರಣವಾಗುವುದಲ್ಲದೆ ಮುಂದೆ ಕಾನೂನು ಬಾಹಿರ ಚಟುವಟಿಕೆಗಳಾದ ಕಳ್ಳತನ, ದರೋಡೆ ಎಲ್ಲವೂ ಕೂಡ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಮದ್ಯದಂಗಡಿ ತೆರೆಯಲು ಅವಕಾಶ ಕೋಡಬಾರದು ಎಂದು ಮನವಿ‌ ಮಾಡಿದರು.

ಕಳೆದ ಮೂರು ದಿನಗಳ ಹಿಂದೆ ಹಾಸನ ನಗರದ ಬಿ.ಎಂ. ರಸ್ತೆ ಬದಿಯಲ್ಲೇ ತಡರಾತ್ರಿ ನಿರ್ಗತಿಕ ಮಹಿಳೆಯನ್ನು ಕೊಲೆ ಮಾಡಿ ನಂತರ ಅತ್ಯಾಚಾರ ಮಾಡಿರುವುದು ಮಹಿಳಾ ಕುಲವೇ ತಲೆ ತಗ್ಗಿಸುವ ವಿಚಾರ ಎಂದು ವಿಷಾದಿಸಿದ ಅವರು, ಕೂಡಲೇ ಈ ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಿ ಸಮಾಜದಲ್ಲಿ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.​ ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.