ETV Bharat / state

ವಿಶ್ವಾಸ ಬೇರೆ, ರಾಜಕೀಯವೇ ಬೇರೆ.. ಎರಡಕ್ಕೂ ಒಂದೇ ಅರ್ಥ ಕಲ್ಪಿಸಬೇಡಿ.. ಭವಾನಿ ರೇವಣ್ಣ - ಭವಾನಿ ರೇವಣ್ಣ ಇತ್ತೀಚಿನ ಸುದ್ದಿ

ರಾಜಕೀಯ ಎಂದಾಗ ಒಬ್ಬರನ್ನು ತುಳಿದು ಇನ್ನೊಬ್ಬ ಮೇಲೆ ಬರುವುದೇ ರಾಜಕೀಯ. ಮಂಡ್ಯದ ಸಂಸದೆ ಸುಮಲತಾ ಮಗ ಅಭಿಷೇಕ್ ಕೂಡ ನಮ್ಮ ಮನೆಗೆ ಬರ್ತಾ ಇದ್ರು. ಅವರ ಕುಟುಂಬ ನಮ್ಮ ಜೊತೆ ಸ್ನೇಹ, ವಿಶ್ವಾಸದಿಂದ ಈಗಲೂ ಇದೆ..

ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷೆ ಭವಾನಿ ರೇವಣ್ಣ

author img

By

Published : Mar 17, 2021, 7:37 PM IST

ಹಾಸನ : ನೋಡಿ ಇದರಲ್ಲಿ ರಾಜಕೀಯ ಅಂತೂ ಇಲ್ಲವೇ ಇಲ್ಲ. ನನ್ನ ಮಗ ಮತ್ತು ದರ್ಶನ್ ಇಬ್ಬರು ಸ್ನೇಹಿತರು. ಇದನ್ನು ಖುದ್ದು ದರ್ಶನ್ ಅವರೇ ಹೇಳಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷೆ ಭವಾನಿ ರೇವಣ್ಣ

ಇಂದು ಮಧ್ಯಾಹ್ನ ಹಾಸನದ ಸಂಸದರ ವಸತಿಗೃಹದಲ್ಲಿ ಮಾತನಾಡಿದ ಅವರು, ಚಲನಚಿತ್ರ ಬಿಡುಗಡೆ ಸಂದರ್ಭ ಮತ್ತೆ ಮಹಿಳಾ ದಿನಾಚರಣೆ ಒಟ್ಟಿಗೆ ಬಂದಿದ್ದರಿಂದ ಅವರ ಅಭಿಮಾನಿಗಳು ನಮ್ಮ ಕಾರ್ಯಕ್ರಮಕ್ಕೆ ದರ್ಶನ್ ಕರೆಸೋಣ ಎಂದರು. ನಾನು ಬೇಡ ಎಂದರೆ ಅವರಿಗೆ ಬೇಜಾರಾಗುತ್ತೆ.

ಹಾಗಾಗಿ, ಅಭಿಮಾನಿಗಳಿಗೆ ಬೇಸರವಾಗಬಾರದೆಂದು, ನಾವು ಸುಮ್ಮನಾದೆವು. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಹಲವು ಮಂದಿ ಭಾಗಿಯಾಗಿದ್ದರು. ರಾಜಕೀಯ ಬೇರೆ, ಸಂಬಂಧಗಳು ಬೇರೆ ಎಂದು ಸ್ಪಷ್ಟಪಡಿಸಿದರು.

ಓದಿ:ಸಕಲೇಶಪುರ.. ಚಲಿಸುತಿದ್ದ ಸಿಮೆಂಟ್ ತುಂಬಿದ ಲಾರಿಗೆ ಬೆಂಕಿ, ತಪ್ಪಿದ ಅನಾಹುತ

ರಾಜಕೀಯ ಎಂದಾಗ ಒಬ್ಬರನ್ನು ತುಳಿದು ಇನ್ನೊಬ್ಬ ಮೇಲೆ ಬರುವುದೇ ರಾಜಕೀಯ. ಮಂಡ್ಯದ ಸಂಸದೆ ಸುಮಲತಾ ಮಗ ಅಭಿಷೇಕ್ ಕೂಡ ನಮ್ಮ ಮನೆಗೆ ಬರ್ತಾ ಇದ್ರು. ಅವರ ಕುಟುಂಬ ನಮ್ಮ ಜೊತೆ ಸ್ನೇಹ, ವಿಶ್ವಾಸದಿಂದ ಈಗಲೂ ಇದೆ.

ಹಾಗಂತಾ, ರಾಜಕೀಯ ಪಕ್ಷಗಳು ಬೇರೆ ಬೇರೆ ಎಂದು ಅವರೊಂದಿಗೆ ಮಾತನಾಡಬಾರದು ಅಂದರೆ ಹೇಗೆ? ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಒಂದೇ ಒಂದು ಪದ ರಾಜಕೀಯ ಬಳಸಿಲ್ಲ.

ದರ್ಶನ್ ಇದ್ದಿದ್ದೇ ಕೇವಲ ಸ್ವಲ್ಪ ಸಮಯ ಮಾತ್ರ. ಮಾರ್ಚ್‌ 19ರಂದು ನಾವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ. ಅದಕ್ಕಾಗಿ ಸುಧಾ ಮೂರ್ತಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನ ಮಾಡಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.