ಹಾಸನ: ಚುನಾವಣೆ ಸಂದರ್ಭ ಮತ್ತು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ನ್ಯಾಯಾಲಯದ ಆದೇಶದ ಮೇರೆಗೆ ಅಬಕಾರಿ ಇಲಾಖೆ ಸಿಬ್ಬಂದಿ ನಾಶಪಡಿಸಿದರು.
ಲೋಕಸಭಾ ಚುನಾವಣೆ ಜೊತೆಗೆ ಕಳೆದ ಆರು ತಿಂಗಳ ಹಿಂದೆ ಹಾಸನ ವಲಯ- 2ರ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಸುಮಾರು 18 ಪ್ರಕರಣಗಳನ್ನು ಬೇಧಿಸಿದ ಅಬಕಾರಿ ಪೊಲೀಸರು ಸುಮಾರು 25 ಸಾವಿರ ಮೌಲ್ಯದ 96 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದರು.