ETV Bharat / state

ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ತಂದೆಗೆ ಮುಹೂರ್ತವಿಟ್ಟ ಮಗಳು

author img

By

Published : Aug 31, 2019, 10:13 PM IST

ಅನೈತಿಕ ಸಂಬಂಧ ಮತ್ತು ಹಣದ ವಿಚಾರವಾಗಿ ಸ್ವಂತ ಮಗಳೆ ಅಪ್ಪನಿಗೆ ಮುಹೂರ್ತವಿಟ್ಟು ಕೊಲೆ ಮಾಡಿಸಿದ ಸಂಗತಿ ಜಿಲ್ಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿದೆ ಬಂದಿದೆ.

ಕೊಲೆ ಆರೋಪಿಗಳು

ಹಾಸನ : ತನ್ನ ಅನೈತಿಕ ಸಂಬಂಧಕ್ಕೆ ಎರವಾದ ಎಂದು ಮತ್ತು ಹಣದ ವಿಚಾರಕ್ಕಾಗಿ ಮಗಳೇ ಸುಪಾರಿ ಕೊಟ್ಟು ಅಪ್ಪನನ್ನು ಕೊಲೆ ಮಾಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಾರು ಚಾಲಕ ಮುನಿರಾಜು(48) ತನ್ನ ಸ್ವಂತ ಮಗಳಿಂದಲೇ ಕೊಲೆಯಾದ ನತದೃಷ್ಟ ಅಪ್ಪ. ವಿದ್ಯಾ ಕೊಲೆ ಮಾಡಿದ ಪಾಪಿ ಮಗಳು. ಮೊದಲ ಗಂಡನಿಂದ ವಿಚ್ಛೇದನ ಪಡೆದಿದ್ದ ಈತನ ಮಗಳು ವಿದ್ಯಾ ಇನ್ನೊಂದು ಮದುವೆಯಾಗಿದ್ದಳು, ಅದೂ ಸಾಲದೆಂಬಂತೆ , ಚಿದಾನಂದ ಎಂಬಾತನೊಂದಿಗೆ ಅನೈತಿಕ ಸಂಬಂಧವನ್ನಿಟ್ಟುಕೊಂಡಿದ್ದಳು ಎನ್ನಲಾಗಿದೆ.

ಈ ವಿಚಾರ ತಂದೆ ಮುನಿರಾಜುವಿಗೆ ಗೊತ್ತಾಗಿತ್ತು. ಹೀಗಾಗಿ ತಂದೆ, ಮಗಳಿಗೆ ನಡತೆಗೆಟ್ಟ ಕೆಲಸಕ್ಕೆ ಕೈ ಹಾಕಬೇಡ. ಮನೆಯ ಮಾನ ಹೋಗುತ್ತೆ. ಈ ಅಳಿಯನೊಂದಿಗಾದರೂ ಚೆನ್ನಾಗಿ ಸಂಸಾರ ಮಾಡಿಕೊಂಡು ಇರು ಎಂದು ಹೇಳಿದರೆನ್ನಲಾಗಿದೆ. ಈ ಬಗ್ಗೆ ಸಂಬಂಧಿಕರ ಸಮ್ಮುಖದಲ್ಲಿಯೇ ನ್ಯಾಯ ಪಂಚಾಯ್ತಿ ಕೂಡಾ ನಡೆದಿದ್ದು, ಯಾರ ಮಾತು ಕೇಳದ ವಿದ್ಯಾ ತನ್ನ ಹಳೇ ಚಾಳಿ ಮುಂದುವರೆಸಿದ್ದಳು.

ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ತಂದೆಗೆ ಮುಹೂರ್ತವಿಟ್ಟ ಮಗಳು

ಹಣವೇ ಎಲ್ಲದ್ದಕ್ಕೂ ಕಾರಣವಾಯ್ತು

ಈ ಮಧ್ಯೆ 2018ರಲ್ಲಿ ವಿದ್ಯಾಗೆ ಅಪಘಾತವಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿತ್ತು. ಬಳಿಕ ಈ ವರ್ಷ ಸುಮಾರು 7 ಲಕ್ಷ ಪರಿಹಾರವಾಗಿ ಹಣವೂ ಬಂದಿತ್ತು. ಇದರ ಜೊತೆಗೆ ಮೊದಲ ಗಂಡನಿಂದ ವಿಚ್ಛೇದನದ ಪರಿಹಾರ ಹಣವೂ ಬಂದಿದ್ದು, ಎಲ್ಲ ಸೇರಿ ಸುಮಾರು 20 ಲಕ್ಷಕ್ಕೂ ಅಧಿಕ ಹಣ ವಿದ್ಯಾ ಬಳಿ ಇತ್ತು. ಈ ಸಂದರ್ಭದಲ್ಲಿ ತಂದೆ ತನಗೂ ಸ್ವಲ್ಪ ಹಣ ನೀಡುವಂತೆ ಆಕೆಯನ್ನು ಕೇಳಿದ್ದಾರೆ. ಆದರೆ ಅದಕ್ಕೆ ಒಪ್ಪದ ಆಕೆ ಹಣ ಕೇಳಿದ ತಂದೆಗೆ ಮುಹೂರ್ತವಿಟ್ಟಿದ್ದಾಳೆ.

ತಂದೆಯ ಹತ್ಯೆಗೆ ಮುಹೂರ್ತ ಫಿಕ್ಸ್​ ಮಾಡಿದ ಮಗಳು

ಇತ್ತ ತಂದೆಗೆ ಹಣ ನೀಡಲು ಒಪ್ಪದ ಮಗಳು ಆತನನ್ನು ಮುಗಿಸಲು ನೀಡಿದ ಹಣ ಬರೋಬರಿ 15 ಲಕ್ಷ. ಹೌದು ತಂದೆಗೆ ಬಿಡಿಗಾಸು ಕೊಡಲು ಒಪ್ಪದ ಮಗಳು ಆತನ ಹತ್ಯೆ ಮಾಡುವಂತೆ ತನ್ನ ಗೆಳೆಯ ಚಿದಾನಂದ್​ ಹಾಗೂ ಆತನ ಗೆಳೆಯ ರಘುವಿಗೆ 15 ಲಕ್ಷದ ಆಫರ್​ ನೀಡಿದ್ದಾಳೆ. ಬಳಿಕ ಚಿದಾನಂದ ಹಾಗೂ ರಘು ಸೇರಿ ಕಾರು ಚಾಲಕನೂ ಆಗಿರುವ ವಿದ್ಯಾಳ ತಂದೆ ಮುನಿರಾಜುವಿಗೆ ಕರೆ ಮಾಡಿದ್ದಾರೆ. ತಮ್ಮವರೊಬ್ಬರನ್ನು ಹಾಸನದಿಂದ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಬೇಕು. ನೀವು ಚಾಲಕರಾಗಿ ಬನ್ನಿ ಎಂದು ನಂಬಿಸಿದ್ದಾರೆ. ಇವರ ಮಾತು ನಂಬಿ ಬಂದ ಮುನಿರಾಜುವನ್ನು ಆತನ ಕಾರಿನಲ್ಲಿಯೇ ಹಾಸನದ ಆಲೂರಿನ ಮಣಿಗನಹಳ್ಳಿ ಬಳಿ ಮರ್ಡರ್​ ಮಾಡಿ ಮೃತದೇಹವನ್ನು ಹೇಮಾವತಿ ಹಿನ್ನೀರಿಗೆ ಎಸೆದು ಹೋಗಿದ್ದಾರೆ.

ಬಳಿಕ ಹಿನ್ನೀರಿನಲ್ಲಿ ಮೃತದೇಹ ನೋಡಿದ ಸ್ಥಳೀಯರೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಆ ಸಂದರ್ಭದಲ್ಲಿ ಮೃತನ ಸುಳಿವು ಸಿಗದ ಕಾರಣ ಮೃತನ ಭಾವಚಿತ್ರವನ್ನು ಎಲ್ಲಾ ಪೊಲೀಸ್ ಠಾಣೆಗಳಿಗೂ ರವಾನಿಸಿ ಪತ್ತೆಹಚ್ಚುವ ಕಾರ್ಯದಲ್ಲಿದ್ದರು. ಈ ವೇಳೆ ಹಾಸನದ ಹಿರೀಸಾವೆ ಪೊಲೀಸ್ ಠಾಣೆಗೆ ಬಂದ ಮಗಳು ವಿದ್ಯಾ ತಂದೆ ಕಾಣೆಯಾದ ಬಗ್ಗೆ ದೂರು ನೀಡಿದ್ದಾಳೆ. ಈ ವೇಳೆ ಆಲೂರು ಠಾಣಾ ವ್ಯಾಪ್ತಿಯಲ್ಲಿ ಸಿಕ್ಕ ಅನಾಮಧೇಯ ಮೃತ ವ್ಯಕ್ತಿಯ ಪೋಟೋವನ್ನ ತೋರಿಸಿದಾಗ ನನಗೇನು ಗೊತ್ತಿಲ್ಲವೆಂದು ನಾಟಕವಾಗಿ ಇವರು ನಮ್ಮ ತಂದೆ ಎಂದು ಕಣ್ಣಿರಿಡುತ್ತಾಳೆ ವಿದ್ಯಾ. ವಿಚಾರಣೆ ಕೈಗೊಂಡ ಪೊಲೀಸರು ಮೊಬೈಲ್ ಆಧಾರದ ಮೇಲೆ ಆರೋಪಿ ಚಿದಾನಂದನನ್ನು ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿಯೇ ಬಾಯ್ಬಿಡಿಸಿದಾಗ ಮಗಳು ವಿದ್ಯಾಳೇ ಕೊಲೆ ಆರೋಪಿ ಎಂಬುದು ಬಯಲಾಗಿದೆ.

ನಂತರ ಕೊಲೆಯಾದ ಮುನಿರಾಜು ಮಗಳು ವಿದ್ಯಾ (23), ಆಕೆಯ ಪ್ರಿಯಕರ ಮತ್ತು ಕಾರು ಚಾಲಕ ಚಿದಾನಂದ್ (25) ಮತ್ತು ರಘು (24) ಎಂಬುವರನ್ನ ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Intro:ಅಪ್ಪನ ಕೊಲ್ಲೋದಿಕ್ಕೆ ಮಿಂಡನಿಗೆ ಸುಫಾರಿ ಕೊಟ್ಟ ಮಗಳು

ಹಾಸನ: ಅನೈತಿಕ ಸಂಬಂಧ ಮತ್ತು ಹಣದ ವಿಚಾರಕ್ಕಾಗಿ ಮಗಳೇ ಸುಪಾರಿ ಕೊಟ್ಟು ಅಪ್ಪನನ್ನ ಕೊಲೆ ಮಾಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಾರು ಚಾಲಕ ಮುನಿರಾಜು (48) ಕೊಲೆಯಾದ ದುರ್ದೈವಿಯಾಗಿದ್ದು, ತನ್ನ ಸ್ವಂತ ಮಗಳಿಂದಲೇ ಕೊಲೆಯಾದ ನತದೃಷ್ಠ ಅಪ್ಪ. ಮೊದಲ ಗಂಡನಿಂದ ವಿಚ್ಚೇಧನ ಪಡೆದಿದ್ದ ವಿದ್ಯಾ ಚಿದಾನಂದ ಎಂಬುವನೊಂದಿಗೆ ಅನೈತಿಕ ಸಂಬಂದವನ್ನಿಟ್ಟು ಹಣಕ್ಕಾಗಿ ಅಪ್ಪನನ್ನ ಕೊಲೆ ಮಾಡಿಸಿದ ಕೊಲೆ ಪಾತಕಿ.

ಡಿವೋರ್ಸ ಆಗಿ ಎರಡನೇ ಗಂಡನೊಂದಿಗೆ ಸಂಸಾರ. ಮಿಂಡನೊಂದಿಗೆ ಲವ್ವಿ-ಡವ್ವಿ

ಮೊದಲ ಗಂಡನಿಗೆ ಡಿವೋರ್ಸ್, ಎರಡನೇ ಗಂಡನೊಂದಿಗೆ ಸಂಸಾರ ಮಾಡಿಕೊಂಡಿದ್ದ ವಿದ್ಯಾ ಜೊತೆಗೊಂದಿರಲಿ ಅಂತ ಚಿದಾನಂದ ಎಂಬುವನ್ನ ಮಿಂಡನನ್ನಾಗಿ ಇಟ್ಟುಕೊಂಡಿದ್ಲು. ಈ ವಿಚಾರ ತಂದೆ ಮುನಿರಾಜುವಿಗೆ ಗೊತ್ತಾಗಿತ್ತು. ತಂದೆ ನಡತೆಗೆಟ್ಟ ಕೆಲಸಕ್ಕೆ ಕೈಹಾಕಬೇಡ. ಮನೆಯ ಮಾನ ಹೋಗುತ್ತೆ. ಅಳಿಯನೊಂದಿಗೆ ಚನ್ನಾಗಿ ಸಂಸಾರ ಮಾಡಿಕೊಂಡು ಇರು ಎಂದು ಹೇಳಿದ್ರು ಕೇಳದ ವಿದ್ಯಾ ಲೈಂಗಿಕ ತೃಪ್ತಿಗಾಗಿ ಹೆತ್ತವರನ್ನ ಎದುರಾಕಿಕೊಂಡು ಎರಡನೇ ಗಂಡನಿಗೆ ಮೋಸ ಮಾಡಿ ಮಿಂಡನೊಂದಿಗೆ ಸುಖ ಅನುಭವಿಸುತ್ತಿದ್ದಳು. ಈ ಬಗ್ಗೆ ಸಂಬಂಧಿಕರ ಸಮ್ಮುಖದಲ್ಲಿಯೇ ನ್ಯಾಯ ಪಂಚಾಯ್ತಿ ಕೂಡಾ ನಡೆದಿದ್ದು, ಯಾರ ಮಾತು ಕೇಳದ ವಿದ್ಯಾ ತನ್ನ ಹಳೇ ಚಾಳಿಯನ್ನ ಮುಂದುವರೆಸಿದ್ಲು.

ಹಣವೇ ಎಲ್ಲದ್ದಕ್ಕೂ ಕಾರಣವಾಯ್ತು:

ಈ ಮಧ್ಯೆ 2018ರಲ್ಲಿ ವಿದ್ಯಾಗೆ ಅಪಘಾತವಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿತ್ತು. ಬಳಿಕ ಈ ವರ್ಷ ಸುಮಾರು 7 ಲಕ್ಷ ಪರಿಹಾರವಾಗಿ ಹಣವೂ ಬಂದಿತ್ತು. ಅದ್ರ ಜೊತೆಗೆ ಮೊದಲ ಗಂಡನ ವಿಚ್ಚೇಧನದ ಹಣವೆಲ್ಲಾ ಸೇರಿ 20 ಲಕ್ಷಕ್ಕೂ ಅಧಿಕ ಮೌಲ್ಯ ಬಂದಿದ್ದು, ಅದನ್ನ ತಂದೆ ನನಗೂ ಕೊಡಬೇಕೆಂದು ಒತ್ತಾಯ ಮಾಡಿದ್ರಂತೆ. ಇದ್ರಿಂದ ಬೇಸತ್ತಿದ್ದ ವಿದ್ಯಾ ತಂದೆಗೆ ಹಣವನ್ನ ಕೊಡಲು ಒಪ್ಪದೇ ಆತನನ್ನ ಮುಗಿಸಲು ಸ್ಕೆಚ್ ಹಾಕಿದ್ಲು.

ಅಪ್ಪನನ್ನ ಮುಗಿಸೋಕೆ ಮಿಂಡನಿಗೆ ಕೊಟ್ಲು 15 ಲಕ್ಷಕ್ಕೆ ಸುಫಾರಿ:

ಹಣವನ್ನ ಕೊಡಲು ಒಪ್ಪದ ವಿದ್ಯಾ ಕೊನೆಗೆ ತನ್ನೊಂದಿಗೆ ಅಕ್ರಮ ಸಂಬಂಧವನ್ನ ಇಟ್ಟುಕೊಂಡಿದ್ದ ಚಿದಾನಂದ್ ಗೆ 15 ಲಕ್ಷ ಕೊಟ್ಟು ಮುಗಿಸಲು ಸುಫಾರಿ ಕೊಡ್ತಾಳೆ. ಅದ್ರಂತೆ ಚಿದಾನಂದ್ ಮತ್ತು ಆತನ ಸ್ನೇಹಿತ ರಘು ಸೇರಿ ಮುನಿರಾಜುವಿಗೆ ಪೋನ್ ಮಾಡಿ ನಮ್ಮ ಕಡೆಯವರೊಬ್ಬರನ್ನ ಹಾಸನದಿಂದ ಬೆಂಗಳೂರಿನ ಆಸ್ಪತ್ರೆಗೆ ಕರೆತರಬೇಕು ನೀವು ಡ್ರೈವರ್ ಆಗಿ ಬನ್ನಿ ಎಂದು ಪೋನ್ ಮೂಲಕ ನಂಬಿಸಿ ಆತನನ್ನ ತನ್ನ ಕಾರಿನಲ್ಲಿಯೇ ಬೆಂಗಳೂರಿನಿಂದ ಹಾಸನಕ್ಕೆ ಬಂದು ಅಲ್ಲಿಂದ ಆಲೂರಿನ ಮಣಿಗನಹಳ್ಳಿಯ ಗ್ರಾಮದ ಹತ್ತಿರ ಮುನಿರಾಜುವಿನ ಕುತ್ತಿಗೆಗೆ 2ನೇ ಆರೋಪಿ ರಘು ಕೇಬಲ್ ವೈರ್ ನಿಂದ ಬಿಗಿದಿಟ್ಟುಕೊಳ್ಳುತ್ತಿದ್ದಂತೆ ಪಕ್ಕದಲ್ಲಿ ಕುಳಿತಿದ್ದ ಚಿದಾನಂದ್ ತನ್ನ ಜೇಬಿನಲ್ಲಿದ್ದ ಚಾಕುವನ್ನ ತೆಗೆದು ಮುನಿರಾಜುವಿನ ಎದೆಗೆ 2 ಬಾರಿ ಇರಿದು ನಂತ್ರ ಕುತ್ತಿಗೆ ಭಾಗಕ್ಕೆ ಚುಚ್ಚಿ ಚುಚ್ಚಿ ಕೊಲೆಗೈದು ಮೃತದೇಹವನ್ನ ಮಣಿಗನಹಳ್ಳಿಯ ಹೇಮಾವತಿ ಹಿನ್ನೀರಿಗೆ ಎಸೆದು ಹೋಗಿದ್ರು.

ಇನ್ನು ಈ ಸಂಬಂಧ ಮೃತದೇಹವನ್ನ ನೋಡಿದ ಸ್ಥಳೀಯರೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸ್ರು ಸ್ಥಳಕ್ಕೆ ಬಂದು ಮೃತದೇಹವನ್ನ ಹೊರತೆಗೆದು ಪ್ರಕರಣ ದಾಖಲು ಮಾಡಿದ್ರು. ಮೃತ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಮೃತನ ಭಾವಚಿತ್ರವನ್ನ ಎಲ್ಲಾ ಪೊಲೀಸ್ ಠಾಣೆಗಳಿಗೂ ರವಾನಿಸಿ ಪತ್ತೆಹಚ್ಚುವ ಕಾರ್ಯದಲ್ಲಿದ್ದಾಗ, ಹಿರೀಸಾವೆ ಪೊಲೀಸ್ ಠಾಣೆಗೆ ಬಂದು ವಿದ್ಯಾ ತಂದೆ ಕಾಣೆಯಾದ ಬಗ್ಗೆ ದೂರು ನೀಡಲು ಬಂದಾಗ, ಆಲೂರು ಠಾಣೆಯಲ್ಲಿ ಅನಾಮದೇಯ ಮೃತ ವ್ಯಕ್ತಿಯ ಪೋಟೋವನ್ನ ತೋರಿಸಿದಾಗ ನನಗೇನು ಗೊತ್ತಿಲ್ಲವೆಂದು ನಾಟಕವಾಗಿ ಇವರು ನಮ್ಮ ತಂದೆ ಎಂದು ಕಣ್ಣಿರಿಡುತ್ತಾಳೆ ವಿದ್ಯಾ.

ಬೆಂಗಳೂರಿನಿಂದ ದೂರು ನೀಡಲು ಬಂದು ತಗಲಾಕಿಕೊಂಡ್ಲು:

ಈ ಮೊದಲೇ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ತಂದೆಯ ಕಾಣೆಯ ಬಗ್ಗೆ ದೂರು ನೀಡಿದ್ದರೂ, ಯಾರಿಗೂ ಸಂಶಯ ಬರಬಾರದು ಎಂದು ತಿಳಿದು ಹಾಸನದ ಗಡಿ ಭಾಗದ ಹಿರಿಸಾವೆಗೆ ಬಂದು ಮತ್ತೊಂದು ದೂರು ದಾಖಲು ಮಾಡೋಕೆ ಮುಂದಾದಾಗ ಅದೇ ಅವಳಿಗೆ ಮುಳುವಾಗುತ್ತೆ ಅಂತ ಆಕೆ ಅಂದುಕೊಂಡಿರಲಿಲ್ಲ. ಕೊನೆಗೆ ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದಡಿ ಮತ್ತೊಂದು ದೂರು ದಾಖಲಾಗಿ, ಕೊಲೆಯ ಆರೋಪಿಗಳನ್ನ ಹುಡುಕುತ್ತಾ ಹೋದಾಗ ಕೊಲೆಗಾರ ಬೇರ್ಯಾರು ಅಲ್ಲ. ದೂರು ನೀಡಲು ಬಂದಿದ್ದ ಮಗಳು ವಿದ್ಯಾಳೆ ಎಂಬ ಸತ್ಯ ಪೊಲೀಸ್ರಿಗೆ ಗೊತ್ತಾಗುತ್ತಿದ್ದಂತೆ. ಮೊಬೈಲ್ ಆಧಾರದ ಮೇಲೆ ಚಿದಾನಂದನನ್ನ ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿಯೇ ಬಾಯ್ಬಿಡಿಸಿದಾಗ ನಡೆದ ಎಲ್ಲವನ್ನ ಒಂದೊಂದಾಗಿ ಬಾಯ್ಬಿಡ್ತಾನೆ.

ಇನ್ನು ಈ ಪ್ರಕರಣದ ಸಂಬಂಧ ಕೊಲೆಯಾದ ಮುನಿರಾಜು ಮಗಳು ವಿದ್ಯಾ (23) ಆಕೆಯ ಪ್ರಿಯಕರ ಮತ್ತು ಕಾರು ಚಾಲಕ ಚಿದಾನಂದ್ (25) ಮತ್ತು ರಘು (24) ಎಂಬುವರನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಅನೈತಿಕ ಸಂಬಂಧದ ಜೊತೆಗೆ ಹಣಕ್ಕೆ ಆಸೆ ಪಟ್ಟು ಸ್ವಂತ ತಂದೆಯನ್ನ ಕೊಲೆ ಮಾಡಿಸಿದ್ದು, ತನಗೇನು ಗೊತ್ತೇಯಿಲ್ಲ. ನಮ್ಮ ತಂದೆಯನ್ನ ಹುಡುಕಿಕೊಡಿ ಅಂತ ಪೊಲೀಸ್ ಠಾಣೆಗೆ ಅಲೆಯುತ್ತಿದ್ದ ಈಕೆ ಗಂಡನ ಜೊತೆಯೂ ಬಾಳುವುದಕ್ಕೆ ಆಗದೇ, ಪ್ರಿಯಕರನೊಂದಿಗೆಯೂ ಸುಖವಾಗಿರಲು ಸಾಧ್ಯವಾಗದೇ, ಬಂದ ಹಣದಿಂದ ಸುಖವಾಗಿ ಇರಲು ಸಾಧ್ಯವಾಗದೇ ಹೆತ್ತಪ್ಪನನ್ನ ಕೊಲ್ಲಿಸಿ ತನ್ನ ಜೀವನವನ್ನ ಹಾಳುಮಾಡಿಕೊಂಡು ಜೈಲಿಗೋಗಿದ್ದಾಳೆ. ದುರಂತ ಅಂದ್ರೆ ಇದೇ ಅಲ್ವಾ.

•         ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.