ETV Bharat / sports

ಗಾಲ್ಫ್​ ಅಂಕಗಳಿಗಿದೆ ವಿಶೇಷ ಹೆಸರು; ಇಲ್ಲಿ ಪ್ಲಸ್​ಗಿಂತ ಮೈನಸ್ ಅಂಕ ಗಳಿಸಿದವರೇ ವಿನ್ನರ್! ​ - Golf Scores names - GOLF SCORES NAMES

ವಿಶ್ವದ ಶ್ರೀಮಂತ ಕ್ರೀಡೆಗಳಲ್ಲಿ ಒಂದಾಗಿರುವ ಗಾಲ್ಫ್​ನಲ್ಲಿ ಅಂಕಗಳನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಅದರ ಕುರಿತಾದ ಸಂಪೂರ್ಣ ಮಾಹಿತಿ ಈ ಸುದ್ದಿಯಲ್ಲಿದೆ.

ಗಾಲ್ಫ್​ ಆಟ
ಗಾಲ್ಫ್​ ಆಟ (IANS)
author img

By ETV Bharat Sports Team

Published : Sep 24, 2024, 1:56 PM IST

ಹೈದರಾಬಾದ್​: ವಿಶ್ವದ ಶ್ರೀಮಂತ ಆಟಗಳಲ್ಲಿ ಗಾಲ್ಫ್​ ಕೂಡ ಒಂದಾಗಿದೆ. ಈ ಕ್ರೀಡೆ ಯಾವಾಗ ಆರಂಭವಾಯಿತು ಎಂಬುದರ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದ್ರೆ ಈ ಆಟ ಹುಟ್ಟಿದ್ದು ಸ್ಕಾಟ್ಲೆಂಡಿನಲ್ಲಿ ಎಂದು ಹೇಳಲಾಗುತ್ತದೆ. ಈ ಆಟವು ವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಆದ್ರೆ ಇದರಲ್ಲಿನ ಕೆಲ ವಿಷಯಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅಂಕಗಳಿಗಿರುವ ಹೆಸರುಗಳು ಕೂಡ ಒಂದಾಗಿದೆ. ಹೌದು, ಗಾಲ್ಫ್​ನಲ್ಲಿ ಗಳಿಸುವ ಅಂಕಗಳಿಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಹಾಗಾದ್ರೆ ಈ ಸುದ್ದಿಯಲ್ಲಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ..

ಗಾಲ್ಫ್​ ಅಂಕಗಳನ್ನು ಹೇಗೆ ಅಳೆಯಲಾಗುತ್ತದೆ: ಗಾಲ್ಫ್​ ಆಟವು ನಾಲ್ಕು ದಿನಗಳ ಕಾಲ ನಡೆಯುತ್ತದೆ. ದಿನಕ್ಕೆ ಒಂದರಂತೆ ಒಟ್ಟು ನಾಲ್ಕು ಕೋರ್ಸ್​ಗಳು ನಡೆಯುತ್ತವೆ. ಒಂದು ಕೋರ್ಸ್​ನಲ್ಲಿ 18 ರಂಧ್ರಗಳಿರಲಿದ್ದು 72 ಅವಕಾಶಗಳು ಇರುತ್ತವೆ. ಅಂದರೆ ಒಂದು ರಂಧ್ರವನ್ನು ಪೂರ್ಣಗೊಳಿಸಲು ಆಟಗಾರನಿಗೆ 4 ಅವಕಾಶಗಳು ಇರುತ್ತವೆ. ಕೆಲವೊಮ್ಮೆ ಇದು ಹೆಚ್ಚು ಕೂಡ ಆಗುತ್ತದೆ. ಒಂದು ರಂಧ್ರಕ್ಕೆ ಚೆಂಡನ್ನು ಹಾಕಲು ಎಷ್ಟು ಅವಕಾಶ ತೆಗೆದುಕೊಳ್ಳುತ್ತಾರೋ ಅದರ ಮೇಲೆ ಅಂಕಗಳನ್ನು ಅಳೆಯಲಾಗುತ್ತದೆ.

ಡಬಲ್​ ಬೋಗಿ: ಗಾಲ್ಫ್​ ಆಟದಲ್ಲಿ ಎರಡು ಸ್ಟ್ರೋಕ್​ ಅಥವಾ 4ಕ್ಕಿಂತ ಹೆಚ್ಚಿನ ಅವಕಾಶ ತೆಗೆದುಕೊಂಡರೆ ಅದನ್ನು ಡಬಲ್​ ಬೋಗಿ ಎಂದು ಕರೆಯಲಾಗುತ್ತದೆ. ಇದನ್ನು +2 ಅಥವಾ ಅದಕ್ಕಿಂತ ಹೆಚ್ಚು ಎಂದು ಪರಿಗಣಿಸಲಾಗುತ್ತದೆ.

ಬೋಗಿ: ಚೆಂಡನ್ನು ರಂಧ್ರಕ್ಕೆ ಹಾಕಲು 5 ಅವಕಾಶಗಳನ್ನು​ ಪಡೆದರೆ ಅದನ್ನು ಬೋಗಿ ಎಂದು ಕರೆಯಲಾಗುತ್ತದೆ. ಬೋಗಿ ಅಂದರೆ +1 ಎಂದು ಕರೆಯಲಾಗುತ್ತದೆ.

ಪಾರ್​: ಒಂದು ಪಾರ್ ಅಂದರೆ 4 ಅವಕಾಶಗಳಲ್ಲಿ ಚೆಂಡನ್ನು ರಂಧ್ರಕ್ಕೆ ಹಾಕಿದರೆ ಅದನ್ನು ಪಾರ್​ ಎಂದು ಕರೆಯುತ್ತಾರೆ. ಇದರರ್ಥ 0 ಎಂದು ಹೇಳಲಾಗುತ್ತದೆ.

ಬರ್ಡಿ: 3 ಅವಕಾಶಗಳಲ್ಲಿ ಚೆಂಡನ್ನು ರಂಧ್ರಕ್ಕೆ ಹಾಕಿದರೆ ಬರ್ಡಿ ಎಂದು ಕರೆಯಲಾಗುತ್ತದೆ. ಇದರರ್ಥ -1 ಅಂಕ ಆಗಿದೆ.

ಈಗಲ್​: ಕೇವಲ ಎರಡೇ ಅವಕಾಶಗಳಲ್ಲಿ ಚೆಂಡನ್ನು ರಂಧ್ರಕ್ಕೆ ಹಾಕಿದರೆ ಅದಕ್ಕೆ ಈಗಲ್​ ಎನ್ನುತ್ತಾರೆ. ಇದರರ್ಥ -2 ಆಗಿದೆ.

ಡಬಲ್​ ಈಗಲ್​: ಮೊದಲ ಅವಕಾಶದಲ್ಲೇ ಚೆಂಡನ್ನು ರಂಧ್ರಕ್ಕೆ ಕಳಿಸಿದರೆ, ಅದನ್ನು ಡಬಲ್​ ಈಗಲ್​ ಎಂದು ಕರೆಯಲಾಗುತ್ತದೆ. ಇದರರ್ಥ -3 ಆಗಿದೆ.

ಕಾಂಡೋರ್: ಕೆಲ ವೇಳೆ ಆಟದಲ್ಲಿನ ಚೆಂಡನ್ನು ಹೋಲ್​ಗೆ ಹಾಕಲು 4ಕ್ಕಿಂತ ಹೆಚ್ಚಿನ ಅವಕಾಶಗಳು ನೀಡಲಾಗುತ್ತದೆ. ಈ ವೇಳೆ 4ಕ್ಕಿಂತ ಕಡಿಮೆ ಅವಕಾಶದಲ್ಲಿ ಚೆಂಡನ್ನು ರಂಧ್ರಕ್ಕೆ ಹಾಕಿದರೆ ಅದನ್ನು -4 ಎಂದು ಕರೆಯಲಾಗುತ್ತದೆ. ಇದು ಹೆಚ್ಚಿನ ಅಂಕವಾಗಿದೆ.

ಈ ಪಂದ್ಯದಲ್ಲಿ ಪ್ಲಸ್​(+)ಗಿಂತಲೂ ಮೈನಸ್​ (-) ಅಂಕಗಳನ್ನು ಗಳಿಸಿದವರೇ ವಿಜೇತರಾಗುತ್ತಾರೆ. ಇದರರ್ಥ ಪ್ಲಸ್​ ಎಂದರೆ ಚೆಂಡನ್ನು ರಂಧ್ರಕ್ಕೆ ಹಾಕಲು ಹೆಚ್ಚಿನ ಅವಕಾಶಗಳನ್ನು ತೆಗೆದುಕೊಂಡಿರುವುದಾಗುತ್ತದೆ. ಮೈನಸ್​ ಎಂದರೇ ಕಡಿವೆ ಅವಕಾಶದ್ದಾಗಿದೆ.

ಡಬಲ್​ ಬೋಗಿ: +2 ಅಥವಾ ಅದಕ್ಕಿಂತ ಹೆಚ್ಚು

ಬೋಗಿ: +1

ಪಾರ್​: 0

ಬರ್ಡಿ: -1

ಈಗಲ್​: -2

ಡಬಲ್​ ಈಗಲ್​: -3

ಕಾಂಡೋರ್​: -4

ಇದನ್ನೂ ಓದಿ: W,W,W,W,W,W,.. ಒಂದೇ ಇನ್ನಿಂಗ್ಸ್​ನಲ್ಲಿ ಹತ್ತು ವಿಕೆಟ್​ ಉರುಳಿಸಿದ ಯುವ ಬೌಲರ್: ಭವಿಷ್ಯದ ಅನಿಲ್​ ಕುಂಬ್ಳೆ ಎಂದ ನೆಟ್ಟಿಗರು! - Ten wickets

ETV Bharat Logo

Copyright © 2024 Ushodaya Enterprises Pvt. Ltd., All Rights Reserved.