ಹಾಸನ: ಕರ್ತವ್ಯದಲ್ಲಿದ್ದ ಹಾಸನ ಮೂಲದ ಸಿಆರ್ಪಿಎಫ್ ಯೋಧ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ನಡೆದಿದೆ.
ಹಾಸನ ತಾಲೂಕಿನ ಈಚಲಹಳ್ಳಿ ಗ್ರಾಮದ ಹೇಮಂತ್ ಕುಮಾರ್ (42) ಕಳೆದ 19 ವರ್ಷಗಳಿಂದ ಛತ್ತೀಸ್ಗಢದ ಸುಕ್ಮಾದಲ್ಲಿ ಸಿಆರ್ಪಿಎಫ್ನ 150ನೇ ಬೆಟಾಲಿಯನ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕರ್ತವ್ಯದಲ್ಲಿ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಇದ್ದಕ್ಕಿದ್ದ ಹಾಗೆ ಹೃದಯಾಘಾತವಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಎರಡು ತಿಂಗಳು ನಾನು ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಬರುವುದಾಗಿ ಕುಟುಂಬಸ್ಥರಿಗೆ ಹೇಮಂತ್ ತಿಳಿಸಿದ್ದರಂತೆ.
ಆದರೆ, ಅಷ್ಟರಲ್ಲೇ ಯೋಧ ಹೇಮಂತ್ ಮೃತಪಟ್ಟಿದ್ದಾರೆ. ಕುಟುಂಬದಲ್ಲಿ ದುಃಖದ ಛಾಯೆ ಮಡುಗಟ್ಟಿದ್ದು, ಶೋಕ ಆವರಿಸಿದೆ. ಮೃತದೇಹವನ್ನು ನಾಳೆ ಮಧ್ಯಾಹ್ನ ಸ್ವಗ್ರಾಮ ಈಚಲ ಹಳ್ಳಿ ಗ್ರಾಮಕ್ಕೆ ತರುವುದಾಗಿ ಸಿಆರ್ಪಿಎಫ್ನ ಉನ್ನತ ಅಧಿಕಾರಿಗಳು ಕುಟುಂಬದವರಿಗೆ ತಿಳಿಸಿದ್ದಾರೆ.