ಹಾಸನ: ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಫಸಲಿಗೆ ಬಂದ ಬೆಳೆಗಳೆಲ್ಲ ಜಲಾವೃತಗೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಬೇಲೂರು ತಾಲೂಕು ಅರೆಹಳ್ಳಿ ಹೋಬಳಿಯ ವಾಟೆಹಳ್ಳಿ ನಿವಾಸಿ ಚಂದ್ರಶೇಖರ್ ಎಂಬುವರು ತಮ್ಮ ಒಂದು ಎಕರೆ ಭೂಮಿಯಲ್ಲಿ ಕಾಫಿ ಗಿಡ ಹಾಕಿದ್ದರು. ಆದರೆ, ಮಳೆಗೆ ಕಾಫಿ ಗಿಡದ ಕೆಳಗೆ ನೀರು ತುಂಬಿಕೊಂಡಿದ್ದು, ಕೆಲ ಗಿಡಗಳು ಕೊಚ್ಚಿ ಹೋಗಿವೆ.
ಭತ್ತ ನಾಟಿ ಮಾಡಿದ್ದ ರೈತರ ಗದ್ದೆಗಳು ಕೆರೆಗಳಾಗಿವೆ. ಇಬ್ಬರು ರೈತರಿಗೆ ಅಂದಾಜು 4 ಲಕ್ಷ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ. ಕೂಡಲೇ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದರು.
ಸರ್ಕಾರಿ ಭೂಮಿಯಲ್ಲಿರುವ ಕೆರೆಯ ಕೋಡಿ ಒಡೆದು, ನಮ್ಮ ಹೊಲ ಮತ್ತು ಗದ್ದೆ ಪೂರ್ಣ ಜಲಾವೃತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನ್ಯಾಯ ದೊರಕಿಸಬೇಕು ಎಂದು ರೈತ ಗುಂಡ ಅರಸ್ ವಿನಂತಿಸಿಕೊಂಡರು.