ETV Bharat / state

ಹಾಸನ​​: ಐಫೋನ್​ಗಾಗಿ ಕೊರಿಯರ್​ ಬಾಯ್​ ಕೊಲೆ, 3 ದಿನ ಮನೆಯ ಬಾತ್​ರೂಮ್​ನಲ್ಲಿ ಶವ ಇಟ್ಟಿದ್ದ ಆರೋಪಿ - ಡೆಲವರಿ ಬಾಯ್

ಹಾಸನದ ಅರಸೀಕೆರೆಯಲ್ಲಿ ಇತ್ತೀಚಿಗೆ ಪತ್ತೆಯಾದ ಅಪರಿಚಿತ ಶವ ಪತ್ತೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ - ಐಫೋನ್​ಗಾಗಿ ಕೊರಿಯರ್​ ಬಾಯ್​ ಕೊಲೆ - ಗೋಣಿ ಚೀಲದಲ್ಲಿ ಸುತ್ತಿ ನಾಲ್ಕು ದಿನಗಳ ಕಾಲ ಮನೆಯಲ್ಲೇ ಇರಿಸಿಕೊಂಡಿದ್ದ ಆರೋಪಿ

courier-boy-killed-for-iphone-in-hassan
ಹಾಸನ​​: ಐಫೋನ್​ಗಾಗಿ ಕೊರಿಯರ್​ ಬಾಯ್​ ಕೊಲೆ, 4 ದಿನ ಮನೆಯಲ್ಲೇ ಶವ ಇಟ್ಟಿದ್ದ ಹಂತಕ
author img

By

Published : Feb 19, 2023, 10:10 PM IST

Updated : Feb 20, 2023, 2:56 PM IST

ಹಾಸನ​​: ಐಫೋನ್​ಗಾಗಿ ಕೊರಿಯರ್​ ಬಾಯ್​ ಕೊಲೆ, 3 ದಿನ ಮನೆಯ ಬಾತ್​ರೂಮ್​ನಲ್ಲಿ ಶವ ಇಟ್ಟಿದ್ದ ಆರೋಪಿ

ಹಾಸನ: ಐಫೋನ್ ಆಸೆಗಾಗಿ ಕೊರಿಯರ್​ ಬಾಯ್​ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ. ಹೇಮಂತ್ ನಾಯಕ್ (23) ಎಂಬಾತನೇ ಕೊಲೆಯಾದ ಕೊರಿಯರ್​ ಬಾಯ್ ಆಗಿದ್ದು, ಹೇಮಂತ್​ ದತ್ತ (20) ಕೊಲೆ ಮಾಡಿದ ಆರೋಪಿ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಹಿನ್ನೆಲೆ: ಇತ್ತೀಚೆಗೆ ಅರಸೀಕೆರೆ ತಾಲೂಕಿನ ಹೊರವಲಯದ ಕೊಪ್ಪಲು ರೈಲ್ವೆ ಗೇಟ್ ಸಮೀಪಯ ಅಪರಿಚಿತ ಯುವಕನ ಶವ ಸುಟ್ಟು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣದ ದಾಖಲಿಸಿಕೊಂಡಿದ್ದ ಪೊಲೀಸರು ಮೃತದೇಹದ ಗುರುತು ಪತ್ತೆ ಕಾರ್ಯವನ್ನು ಕೈಗೊಂಡಿದ್ದರು. ಇದರ ನಡುವೆ ಪೆಟ್ರೋಲ್​ ಬಂಕ್​ವೊಂದರಲ್ಲಿ ಬೈಕ್​ ಮೇಲೆ ಚೀಲವೊಂದನ್ನು ಸಾಗಿಸುವುದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಮೇಲೆ ತನಿಖೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.

ಐಫೋನ್ ಕೊಡಲು ಹೋದಾಗ ಕೊಲೆ: ಅರಸೀಕೆರೆಯ ಹಳೆ ಕಲ್ಲನಾಯಕನ ಹಳ್ಳಿ ಗ್ರಾಮದ ಆರೋಪಿ ಹೇಮಂತ್​ ದತ್ತ ಡೆಲಿವರಿ ಬಾಯ್ ಆಗಿದ್ದ. ಆನ್​​ಲೈನ್​ನಲ್ಲಿ ಅಂದಾಜು 46 ಸಾವಿರ ರೂಪಾಯಿ ಬೆಲೆಯ ಸೆಕೆಂಡ್ ಹ್ಯಾಂಡ್​​ ಐಫೋನ್ ಬುಕ್​ ಮಾಡಿದ್ದ. ಇದು ಫೆಬ್ರವರಿ 7ರಂದು ಕೊರಿಯರ್ ಬಂದಿದ್ದರಿಂದ ಹೇಮಂತ್ ನಾಯಕ್ ಡೆಲಿವರಿ ಮಾಡಲೆಂದು ಲಕ್ಷ್ಮೀಪುರ ಬಡಾವಣೆಯಲ್ಲಿರುವ ಹೇಮಂತ ದತ್ತ ಮನೆಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಐಫೋನ್​ಗಾಗಿ ಕೊರಿಯರ್​ ಬಾಯ್​ ಕೊಲೆ

ಈ ವೇಳೆ ಹೇಮಂತ್​ ದತ್ತ ನನ್ನ ಬಳಿ ಅಷ್ಟೊಂದು ಹಣ ಇಲ್ಲ. ಹಾಗೆಯೇ ಐಫೋನ್ ಬಾಕ್ಸ್​​​​ ಓಪನ್​ ಮಾಡು ಎಂದು ಹೇಳಿದ್ದಾನೆ. ಆದರೆ, ಆಗ ಹೇಮಂತ್​ ನಾಯಕ್​ ಹಣ ನೀಡದೆ ಬಾಕ್ಸ್ ಓಪನ್ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ಧಾನೆ. ಇದರಿಂದ ಕೋಪಗೊಂಡಿದ್ದ ಆರೋಪಿ ಹೇಮಂತ್​ ದತ್ತನು ಹೇಮಂತ್​ ನಾಯಕನನ್ನು ಮನೆ ಒಳಗೆ ಕರೆದಿದ್ದಾನೆ. ನನ್ನ ಸ್ನೇಹಿತ ಹಣ ತರುತ್ತಿದ್ದಾನೆ ಸ್ವಲ್ಪ ಹೊತ್ತು ಕುಳಿತುಕೊಳ್ಳುವಂತೆ ಹೇಳಿದ್ದಾನೆ ಎಂದು ಎಸ್​ಪಿ ಹರಿರಾಮ್​ ಶಂಕರ್​ ಮಾಹಿತಿ ನೀಡಿದ್ದಾರೆ.

ಗೋಣಿಚೀಲದಲ್ಲಿ ಶವ ಸುಟ್ಟಿದ್ದ ಹಂತಕ: ಅಂತೆಯೇ, ಹೇಮಂತ್ ನಾಯಕ್ ಮೊಬೈಲ್​​ ನೋಡುತ್ತಾ ಮನೆಯಲ್ಲಿ ಕುಳಿತಿದ್ದಾನೆ. ಇದೇ ಸಮಯ ಸಾಧಿಸಿದ ಆರೋಪಿ ಹೇಮಂತ್​​ ದತ್ತ ಹಿಂದಿನಿಂದ ಬಂದು ಚಾಕುವಿನಿಂದ ಹೇಮಂತ್​ ನಾಯಕನಿಗೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅಲ್ಲದೇ, ಶವವನ್ನು ಗೋಣಿ ಚೀಲದಲ್ಲಿ ಸುತ್ತಿ ಮೂರು ದಿನಗಳ ಕಾಲ ಮನೆಯ ಬಾತ್​ರೂಮ್​ನಲ್ಲೇ ಇರಿಸಿಕೊಂಡಿದ್ದಾನೆ.

ಇದಾದ ಬಳಿಕ ಫೆಬ್ರವರಿ 11ರಂದು ರಾತ್ರಿ ಬೈಕ್​ನಲ್ಲಿ ಶವ ಸಾಗಿಸಿದ್ದಾನೆ. ಅರಸೀಕೆರೆ ನಗರದ ಅಂಚೆಕೊಪ್ಪಲು ಸಮೀಪದ ರೈಲ್ವೆ ಹಳಿ ಬಳಿಗೆ ತಂದು ಶವವನ್ನು ಸುಟ್ಟು ಹಾಕಿದ್ದಾನೆ. ಆದರೆ, ಸುಟ್ಟು ಹಾಕುವ ಮೊದಲು ಪೆಟ್ರೋಲ್​ ಬಂಕ್​ನಲ್ಲಿ ಬೈಕ್​ಗೆ ಪೆಟ್ರೋಲ್​ ಹಾಕಿಸಲು ಆರೋಪಿ ಹೇಮಂತ್​​ ದತ್ತ ಹೋಗಿದ್ದ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿಸಿದ್ದಾರೆ. ಮತ್ತೊಂದೆಡೆ, ಹೇಮಂತ್ ನಾಯಕ್ ಕುಟುಂಬಸ್ಥರು ಫೆಬ್ರವರಿ 7ರಿಂದ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಇದರ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ : ಕೊಲೆ ಶಂಕೆ

Last Updated : Feb 20, 2023, 2:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.