ETV Bharat / state

ಸದ್ಯ ಏನೂ ಇಲ್ಲ ಅಂತಿದ್ದ ಹಾಸನ ಜನರಿಗೆ ಶಾಕ್​ ಕೊಟ್ರು ಮುಂಬೈನಿಂದ ಬಂದ ಆ ಯುವಕ, ಯುವತಿ

ಮಾಹಮಾರಿ ಕೊರೊನಾ ಹರಡುವ ಲಕ್ಷಣಗಳು ಕಾಣುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ಹಾಸನವನ್ನ ಲಾಕ್ ಡೌನ್ ಮಾಡಿದ್ದು, ಈಗ ಈ ಇಬ್ಬರು ಯುವಕ-ಯುವತಿಯರು ಮಾಹಿತಿಯನ್ನ ನೀಡದೇ ಸದ್ದಿಲ್ಲದೇ ಸಂಬಂಧಿಕರ ಮನೆಗೆ ಬಂದು ಆಶ್ರಯಪಡೆದಿರುವುದು ಗೊಮ್ಮಟನ ನಾಡನ್ನ ಬೆಚ್ಚಿಬೀಳಿಸಿದೆ.

author img

By

Published : Apr 2, 2020, 8:08 AM IST

corona threat to hassan from two people came from out state
ಹಾಸನಕ್ಕೆ ಕೊರೊನಾ ಭೀತಿ: ಹೊರರಾಜ್ಯದಿಂದ ಬಂದು ಸದ್ದಿಲ್ಲದಂತೆ ಇದ್ದ ಯುವಕ ಯುವತಿ

ಹಾಸನ: ದೆಹಲಿ ಮತ್ತು ಮುಂಬೈನಿಂದ ಗೊಮ್ಮಟನನಾಡಿಗೆ ಬಂದು ಸದ್ದಿಲ್ಲದಂತೆ ಇದ್ದ ಯುವಕ-ಯುವತಿಯನ್ನ ಆರೋಗ್ಯ ಇಲಾಖೆ ಮತ್ತು ಆರಕ್ಷಕ ಠಾಣಾಧಿಕಾರಿಗಳು ಇಬ್ಬರನ್ನ ಗೃಹಬಂಧನದಲ್ಲಿರಿಸಿ ಆ ಬಡಾವಣೆಯನ್ನ ರೆಡ್ ಜೋನ್ ಎಂದು ಘೋಷಣೆ ಮಾಡಿದ್ದು, ಹಾಸನ ಜಿಲ್ಲೆಗೂ ಕೊರೊನಾ ಕರಿನೆರಳಿನ ಆತಂಕ ಮನೆ ಮಾಡಿದೆ.

ಹೊಯ್ಸಳರ ಕಾಲದ ರಾಜಧಾನಿಯಾಗಿದ್ದ ಹಾಸನ ಇಂದಿಗೂ ಹಲವು ಪ್ರೇಕ್ಷಣಿಯ ಸ್ಥಳಗಳನ್ನ ಹೊಂದಿದ್ದು, ಪ್ರವಾಸೋದ್ಯಮದ ದೃಷ್ಠಿಯಿಂದ ಪ್ರತಿನಿತ್ಯ ಜಿಲ್ಲೆಗೆ ರಾಜ್ಯ, ಹೊರರಾಜ್ಯ ಮತ್ತು ದೇಶವಿದೇಶಗಳಿಂದ ಪ್ರತನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಮಾಹಮಾರಿ ಕೊರೊನಾ ಹರಡುವ ಲಕ್ಷಣಗಳು ಕಾಣುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ಹಾಸನವನ್ನ ಲಾಕ್ ಡೌನ್ ಮಾಡಿದ್ದು, ಈಗ ಈ ಇಬ್ಬರು ಯುವಕ-ಯುವತಿಯರು ಮಾಹಿತಿಯನ್ನ ನೀಡದೇ ಸದ್ದಿಲ್ಲದೇ ಸಂಬಂಧಿಕರ ಮನೆಗೆ ಬಂದು ಆಶ್ರಯಪಡೆದಿರೋದು ಗೊಮ್ಮಟನ ನಾಡನ್ನ ಬೆಚ್ಚಿಬೀಳಿಸಿದೆ.

ಕಳೆದ ತಿಂಗಳು 18 ರಂದು ದೆಹಲಿಯಿಂದ ಬಂದ ಯುವಕ ಮತ್ತು ಮುಂಬೈನಿಂದ ಬಂದ ಯುವತಿಯ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಸಂಬಂಧಿಕರ ಮನೆಯಲ್ಲಿ ಬಂದು ಉಳಿದುಕೊಂಡಿದ್ದಾರೆ. ಇವರು ಬಂದಿರುವ ಮಾಹಿತಿಯನ್ನ ಯಾರು ಸಹ ಜಿಲ್ಲಾಡಳಿತ, ತಾಲ್ಲೂಕು ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡದೇ 14 ದಿನದಿಂದ ಪಟ್ಟಣದ ಮಸೀದಿ ಬೀದಿಯಲ್ಲಿ ವಾಸವಿದ್ದು, ಖಚಿತ ಮಾಹಿತಿಯನ್ನ ಆಧಾರಿಸಿ ಸದ್ಯ ಅವರಿಬ್ಬರನ್ನ ಗೃಹಬಂಧನದಲ್ಲಿಡಲಾಗಿದೆ. ಇನ್ನು ಅವರುಗಳನ್ನ ತಪಾಸಣೆಗೊಳಪಡಿಸುವ ಉದ್ದೇಶದಿಂದ ಅವರಿಬ್ಬರ ರಕ್ತದ ಮಾದರಿಯನ್ನ ಪಡೆದಿದ್ದು, ಲ್ಯಾಬ್ ಗೆ ಕಳುಹಿಸಿಕೊಡಲಾಗಿದ್ದು, ಸದ್ಯ ಪಟ್ಟಣದ ಮಸೀದಿ ಬಡಾವಣೆಯನ್ನ ರೆಡ್ ಜೋನ್ ಎಂದು ಘೋಷಿಸಲಾಗಿದೆ.

ಸರ್ಕಾರ ಮಾದ್ಯಮಗಳ ಮೂಲಕ, ಕರಪತ್ರದ ಮೂಲಕ, ಮನೆ ಮನೆಗೆ ತೆರೆಳಿ ಸ್ಪಷ್ಟವಾಗಿ ಹೇಳುತ್ತಿದ್ರು ನಾಗರೀಕರ ನಿರ್ಲಕ್ಷ್ಯ ಮಾತ್ರ ನಿಂತಿಲ್ಲ. ಹೊರ ರಾಜ್ಯದಿಂದ ಬಂದ್ರು ಕೂಡಾ ಯಾವುದೇ ಮಾಹಿತಯನ್ನ ನೀಡದೇ ತಮ್ಮ ಸಂಬಂಧಿಕರುಗಳಿಗೆ ಆಶ್ರಯ ನೀಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇಷ್ಟು ದಿನಗಳ ಕಾಲ ಇವರಿಬ್ಬರು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿರುವ ಉದ್ದೇಶವೇನು....? ಎಂಬ ಅನುಮಾನ ಕಾಡುತ್ತಿದೆ.

ಈ ಪ್ರಕರಣದಿಂದ ಸದ್ಯ ಜಿಲ್ಲೆಯಲ್ಲಿ ಸ್ಪಲ್ಪ ಕೊರೊನಾದ ಕರಿನೆರಳು ಕಂಡಂತಾಗಿದ್ದು, ಇವರಿಬ್ಬರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ದೆಹಲಿಗೆ ಹೋಗಿದ್ದ ಆ ಯುವಕ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲಿಗ್ ಜಮಾತ್ ಪ್ರಾರ್ಥನಾ ಮಂದಿರಕ್ಕೆ ಹೋಗಿ ಬಂದಿದ್ದಾನಾ? ಎಂಬ ಅನುಮಾನ ಶುರುವಾಗಿದ್ದು, ಸದ್ಯ ಶ್ರವಣಬೆಳಗೊಳದ ಆರೋಗ್ಯಾಧಿಕಾರಿ ಯುವರಾಜ್ ಅವರು ಶ್ರವಣಬೆಳಗೊಳದ ಮಸೀದಿ ಬಡಾವಣೆಗೆ ತಮ್ಮ ಸಿಬ್ಬಂದಿಗಳೊಂದಿಗೆ ತೆರಳಿ ಆ ಪ್ರದೇಶವನ್ನ ರೆಡ್ ಜೋನ್ ಎಂದು ಪರಿಗಣಿಸಿದ್ದು, ರಕ್ತದ ಮಾದರಿ ಬರುವ ತನಕ ಯಾರು ಕೂಡಾ ಮನೆಯಿಂದ ಹೊರಬಾರದಂತೆ ಲಾಕ್ ಡೌನ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.