ಹಾಸನ: ಜಗತ್ತಿನ ಬಹುತೇಕ ರಾಷ್ಟ್ರಗಳ ಮೇಲೆ ಮಾರಣಾಂತಿಕ ದಾಳಿ ಮಾಡಿರುವ ಕೊರೊನಾ, ರಾಜ್ಯದ ಕುಕ್ಕುಟೋದ್ಯಮಕ್ಕೆ ದೊಡ್ಡ ಹೊಡೆತ ಕೊಟ್ಟಿದೆ. ಇದರಿಂದಾಗಿ ಉದ್ಯಮಿಗಳು ಕಂಗಾಲಾಗಿದ್ದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ರಾಜ್ಯದ ಪ್ರಮುಖ ವರಮಾನ ಮೂಲಗಳಲ್ಲಿ ಕುಕ್ಕುಟೋದ್ಯಮವೂ ಒಂದು. ಅಂತಹ ಉದ್ಯಮದ ಮೇಲೆ ಕೊರೊನಾ ಕೆಂಗಣ್ಣು ಬೀರಿದ್ದು ವ್ಯಾಪಾರಿಗಳ ನಿದ್ದೆ ಕದ್ದಿದೆ. ಈ ಹಿಂದೆ ಹಾಸನ ಜಿಲ್ಲೆಯಲ್ಲಿ ಪ್ರತಿ ಕೆ.ಜಿ. ಕೋಳಿಗೆ 100 ರಿಂದ 130 ರೂಪಾಯಿ ಇತ್ತು. ಆದ್ರೆ, ಕೋಳಿಯಿಂದ ಕೊರೊನಾ ಬರುತ್ತೆ ಅಂತಾ ಯಾರೋ ಹಬ್ಬಿಸಿದ ವದಂತಿಯ ಪರಿಣಾಮ ಸಗಟು ದರ ಕೇವಲ 15 ರೂಪಾಯಿಗೆ ಇಳಿದಿದೆ. ಇದರಿಂದಾಗಿ ದಿನಕ್ಕೆ 10 ಕೆ.ಜಿ. ಮಾರಾಟವೂ ಕಷ್ಟವಾಗಿದೆ ಎಂದು ವ್ಯಾಪಾರಸ್ಥರೊಬ್ಬರು ಅಳಲು ತೋಡಿಕೊಂಡರು.