ETV Bharat / state

ಡ್ರೀಮ್ ಸ್ಟುಡಿಯೋ ಎಂಟರ್​ಟೈನ್​ಮೆಂಟ್​​ ವತಿಯಿಂದ ಕೊರೊನಾ ಜಾಗೃತಿ ಹಾಡು - ಹಾಸನ ಲೇಟೆಸ್ಟ್ ನ್ಯೂಸ್

ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ತಿಳಿಸುವ ಸಲುವಾಗಿ ನಿಸ್ವಾರ್ಥತೆಯಿಂದ ಈ ಹಾಡನ್ನು ಕಂಪೋಸ್ ಮಾಡಲಾಗಿದೆ. ನಾನು ಒಬ್ಬ ಸಂಗೀತ ನಿರ್ದೇಶಕ, ಈ ಕಲೆಯನ್ನು ಭಗವಂತ ನನಗೆ ಕರುಣಿಸಿದ್ದಾನೆ. ನಿಸ್ವಾರ್ಥ ಸೇವೆಯಿಂದ ಈ ರೀತಿಯ ಹಾಡುಗಳ ಮುಖಾಂತರ ಜನರಿಗೆ ಎಚ್ಚರ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ..

Corona awareness song by Dream Studio Entertainment
ಡ್ರೀಮ್ ಸ್ಟುಡಿಯೋ ಎಂಟರ್​ಟೈನ್​ಮೆಂಟ್​​ ವತಿಯಿಂದ ಕೊರೊನಾ ಜಾಗೃತಿ ಹಾಡು
author img

By

Published : Jul 9, 2021, 10:37 AM IST

ಹಾಸನ : ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್‌ನಿಂದ ಸಂಗೀತ ನಿರ್ದೇಶಕರಾದ ಶಕೀಲ್ ಅಹಮದ್ ಅವರು ಇಂಗ್ಲಿಷ್​​ ಹಾಗೂ ಹಿಂದಿ ಹಾಡನ್ನು ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಮಾಡಿದ್ದರೆ. ಸ್ಟೇ ಅಟ್ ಹೋಮ್ ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷ್ ಹಾಡು ಬಹಳ ಸೊಗಸಾಗಿ ಮೂಡಿ ಬಂದಿದೆ.

ಪ್ರತಿ ದಿನ ಇರುಳು ಸರಿದು ಹಗಲು ಮೂಡುವ ರೀತಿ ನಮಗೆ ಕಷ್ಟಗಳು ಬಂದು ಹೋಗುತ್ತವೆ. ಆದ್ರೆ, ಧೈರ್ಯಗೆಡದೆ ಆತ್ಮವಿಶ್ವಾಸದಿಂದಿರಿ. ಎಲ್ಲರಿಗಾಗಿ ಕೊರೊನಾ ಯೋಧರು ಶ್ರಮಿಸುತ್ತಿದ್ದಾರೆ. ದಯವಿಟ್ಟು ಮನೆಯಲ್ಲೇ ಸುರಕ್ಷಿತರಾಗಿ ಇರಿ ಎಂಬ ಸಂದೇಶವನ್ನು ಈ ಹಾಡು ಸಾರುತ್ತದೆ. ಇದಕ್ಕೆ ಸಂಗೀತ, ಸಾಹಿತ್ಯ ರಚಿಸಿರುವುದು ಶಕೀಲ್ ಅಹಮದ್. ಇನ್ನು, ಈ ಹಾಡನ್ನು ಬಲ್ಗೇರಿಯಾದ ಪ್ರಸಿದ್ಧ ಗಾಯಕಿ ಮಾರ್ಟಿನಾ ಐವನೊವಾ ಹಾಡಿರುವುದು ಬಹಳ ವಿಶೇಷವಾಗಿದ್ದು, ಅವರೊಂದಿಗೆ ಶಕೀಲ್ ಅಹ್ಮದ್ ಅವರು ಕೂಡ ಧ್ವನಿಯಾಗಿದ್ದಾರೆ.

ಕೊರೊನಾ ಜಾಗೃತಿ ಹಾಡು

ಶಕೀಲ್ ಅಹಮದ್ ಈ ಹಾಡಿನ ನಿರ್ಮಾಪಕರು. ಛಾಯಾಗ್ರಾಹಣ ಶಶಾಂಕ್ ನಿರ್ವಹಿಸಿದ್ರೆ, ಸುಹಾಸ್ ಎನ್. ಸಂಕಲನ ಮಾಡಿದ್ದಾರೆ. ಅರ್ಷಾದ್ ಅಹಮದ್ ವಿಡಿಯೋ ಎಡಿಟಿಂಗ್ ಮಾಡಿದ್ರೆ, ಶರತ್ ಎಂ ಆರ್ ಕಲರ್ ಗ್ರೇಡಿಂಗ್ ಮಾಡಿದ್ದಾರೆ. ಈ ಹಾಡನ್ನು ಹಾಸನದ ಸುತ್ತಮುತ್ತಲಿನ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಮತ್ತೆ ಕೆಲ ದೃಶ್ಯ ಹಾಸನದ ಹೆಸರಾಂತ ಹಿಮ್ಸ್ ಆಸ್ಪತ್ರೆಯಲ್ಲಿ ಶೂಟ್ ಮಾಡಲಾಗಿದೆ. ಇದರ ಜೊತೆಗೆ ವಿದೇಶದಿಂದ ಹಲವಾರು ದೃಶ್ಯ ತರಿಸಿ ವಿಡಿಯೋ ಸಂಯೋಜನೆ ಮಾಡಲಾಗಿದೆ. ಇದಕ್ಕೆ ಬಲ್ಗೇರಿಯಾದ ಮಾರ್ಟಿನಾ ಐವನೂವ ಅವರು ಸಹಕರಿಸಿದ್ದಾರೆ.

ಈ ಹಾಡಿನ ಸಾಹಿತ್ಯ, ಸಂಗೀತ, ಮಿಕ್ಸಿಂಗ್ ಅಂಡ್ ಮಾಸ್ಟರಿಂಗ್ ಜೊತೆಗೆ ನಿರ್ಮಾಪಕರಾಗಿ ಶಕೀಲ್ ಅಹ್ಮದ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಕಾರ್ತಿಕ್ ಭಾರದ್ವಾಜ್ ಕೊಳಲು ನುಡಿಸಿದ್ದಾರೆ. ಶಕೀಲ್ ಅಹಮದ್ ಅವರು ಡಿಸೈನ್, ಅರ್ಷಾದ್ ಅಹಮದ್ ಅವರು ಲಿರಿಕಲ್ ವಿಡಿಯೋ ಮಾಡಿದ್ದಾರೆ. ಇದ್ರೊಂದಿಗೆ ಈ ಎರಡು ಹಾಡುಗಳನ್ನು(ಹಿಂದಿ, ಇಂಗ್ಲೀಷ್​​) ಎಲ್ಲ ಕೊರೊನಾ ವಾರಿಯರ್ಸ್​​​ಗಳಿಗೆ ಅರ್ಪಿಸಿದ್ದಾರೆ.

ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ತಿಳಿಸುವ ಸಲುವಾಗಿ ನಿಸ್ವಾರ್ಥತೆಯಿಂದ ಈ ಹಾಡನ್ನು ಕಂಪೋಸ್ ಮಾಡಲಾಗಿದೆ. ನಾನು ಒಬ್ಬ ಸಂಗೀತ ನಿರ್ದೇಶಕ, ಈ ಕಲೆಯನ್ನು ಭಗವಂತ ನನಗೆ ಕರುಣಿಸಿದ್ದಾನೆ. ನಿಸ್ವಾರ್ಥ ಸೇವೆಯಿಂದ ಈ ರೀತಿಯ ಹಾಡುಗಳ ಮುಖಾಂತರ ಜನರಿಗೆ ಎಚ್ಚರ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎನ್ನುತ್ತಾರೆ ಶಕೀಲ್ ಅಹಮದ್.

ಇದಕ್ಕೂ ಮೊದಲು ಶಕೀಲ್ ಅಹಮದ್ ಅವರು ಮಾಜಿ ರಾಷ್ಟ್ರಪತಿ ದಿವಂಗತ ಡಾಕ್ಟರ್ ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಗೀತೆಯನ್ನು ರಚಿಸಿದ್ದರು. ದೇಶಭಕ್ತಿ ಗೀತೆಗಳಾದ ಐ ಆಮ್ ಇಂಡಿಯನ್, ತುಮ್ ಜಿಹಾನ್ ಬೀ, ರಾಹೋ ಹಾಡುಗಳನ್ನು ರಚಿಸಿದ್ದಾರೆ. ಕ್ರಿಸ್ಮಸ್ ಪ್ರಯುಕ್ತ ಓ ಮರಿಯ ಹಾಡು, ಹುತಾತ್ಮರ ದಿನಾಚರಣೆಯ ಪ್ರಯುಕ್ತ ಸುಖದೇವ್, ಭಗತ್ ಸಿಂಗ್, ರಾಜ್ ಗುರು ಇವರ ಹೆಸರಿನಲ್ಲಿ ಎಸ್ ಬಿ ಆರ್ ಎಂಬ ಹಾಡು, ಭಾರತದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತಿಯಂದು ದಿ ಲೀಡರ್ ಎಂಬ ಹಾಡುನ್ನು ಮಾಡಿದ್ದಾರೆ. ಹಾಗೂ ಚಲನಚಿತ್ರಗಳಾದ ನಮ್ಮೂರ ಹೈಕ್ಳು, ಚೌಕಿ ಸಿನಿಮಾಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ನಮ್ಮ ಈಟಿವಿ ಭಾರತದಿಂದಲೂ ಡ್ರೀಮ್ಸ್ ಕ್ರಿಯೇಷನ್ ತಂಡಕ್ಕೆ ಅಭಿನಂದನೆಗಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.