ETV Bharat / state

ಗಜ ಪಡೆಗಳ ಹಾವಳಿ: ಜೋಳ, ರಾಗಿ, ಭತ್ತದ ಬೆಳೆ ಆನೆ ತುಳಿತಕ್ಕೆ ನಾಶ - ಅರಕಲಗೂಡು ಸುದ್ದಿ

ಜಿಲ್ಲೆಯಲ್ಲಿ ಪ್ರತಿವರ್ಷವೂ ಕೊಡಗಿನ ಭಾಗದ ಸಕಲೇಶಪುರ, ಮಲ್ಲಿಪಟ್ಟಣ ಭಾಗದಿಂದ, ಪಾರಸನಹಳ್ಳಿ ತಾಲೂಕುಗಳ ವಿವಿಧ ಹಳ್ಳಿಗಳ ಮಾರ್ಗದಲ್ಲಿ ಪಕ್ಕದ ಕಾಡುಗಳ ಕಡೆಯಿಂದ ತಾಲೂಕಿನವರೆಗೆ ಆನೆಗಳ ಹಿಂಡು ಹಾದುಹೋಗುತ್ತವೆ. ಈ ವೇಳೆ ಆಸುಪಾಸಿನ ಹೊಲ, ಗದ್ದೆ, ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ.

ಜೋಳ, ರಾಗಿ, ಭತ್ತದ ಬೆಳೆ ಆನೆ ತುಳಿತಕ್ಕೆ ನಾಶ
ಜೋಳ, ರಾಗಿ, ಭತ್ತದ ಬೆಳೆ ಆನೆ ತುಳಿತಕ್ಕೆ ನಾಶ
author img

By

Published : Sep 9, 2020, 12:48 PM IST

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಕೊಡಗಿನ ಗಡಿಗೆ ಹೊಂದಿಕೊಂಡಿರುವ ಪಾರಸನ ಹಳ್ಳಿ ಗ್ರಾಮದಲ್ಲಿ ಆನೆ ಹಾವಳಿ ಮಿತಿ ಮೀರಿದ್ದು, ಗ್ರಾಮದಲ್ಲಿ ರೈತರು ಬೆಳೆದಿದ್ದ ಜೋಳ, ರಾಗಿ ಹಾಗೂ ಭತ್ತ ಆನೆ ತುಳಿತದಿಂದ ನಾಶವಾಗಿವೆ.

ಅರಣ್ಯ ಭಾಗದ ಹಳ್ಳಿಗಳಲ್ಲಿ ಗಜ ಪಡೆಗಳ ಹಾವಳಿ ಮುಂದುವರಿದಿದ್ದು, ಕಷ್ಟಪಟ್ಟು ಬೆಳೆದ ಬೆಳೆಗಳು ನಾಶವಾಗುತ್ತಿವೆ. ಬೆಳೆಯ ಹಂಗಾಮಿನಲ್ಲಿಯೇ ಹೀಗೆ ಆನೆಗಳ ಹಾವಳಿ ಹೆಚ್ಚುತ್ತಿರುವುದು ರೈತರನ್ನ ಚಿಂತಾಕ್ರಾಂತರನ್ನಾಗಿ ಮಾಡಿದೆ.

ಜಿಲ್ಲೆಯಲ್ಲಿ ಪ್ರತಿವರ್ಷವೂ ಕೊಡಗಿನ ಭಾಗದ ಸಕಲೇಶಪುರ, ಮಲ್ಲಿಪಟ್ಟಣ ಭಾಗದಿಂದ, ಪಾರಸನಹಳ್ಳಿ ತಾಲೂಕುಗಳ ವಿವಿಧ ಹಳ್ಳಿಗಳ ಮಾರ್ಗದಲ್ಲಿ ಪಕ್ಕದ ಕಾಡುಗಳ ಕಡೆಯಿಂದ ತಾಲೂಕಿನವರೆಗೆ ಆನೆಗಳ ಹಿಂಡು ಹಾದುಹೋಗುತ್ತವೆ. ಈ ವೇಳೆ ಆಸುಪಾಸಿನ ಹೊಲ, ಗದ್ದೆ, ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಈ ಬಾರಿಯೂ ಅಡಕೆ, ಭತ್ತ, ಕಬ್ಬು, ಬಾಳೆ ಬೆಳೆಗಳನ್ನು ತಿಂದು, ತುಳಿದು ನಷ್ಟವನ್ನು ಉಂಟುಮಾಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.