ಹಾಸನ: ಕಾಂಗ್ರೆಸ್ ಪಕ್ಷದ ಸ್ಥಿತಿ ಹೇಗಾಗಿದೆ ಎಂದರೆ ಸಿದ್ದರಾಮಯ್ಯ ಗುಂಪಿಗೆ ಎಷ್ಟು ಮಂದಿ? ಡಿಕೆಶಿ ಗುಂಪಿನಲ್ಲಿ ಎಷ್ಟು ಮಂದಿ? ಎನ್ನುವ ಚರ್ಚೆ ಆಗ್ತಾಯಿದೆ. ಒಳ ಜಗಳ ನಡೀತಾ ಇದೆ. ಸಿದ್ದರಾಮೋತ್ಸವ ಮೂಲಕ ತಮ್ಮ ಇರುವಿಕೆ ಮತ್ತು ಅಸ್ತಿತ್ವ ತೋರಿಸಲು ಜಾತ್ರೆ ಮಾಡುತ್ತಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಹಾಸನದಲ್ಲಿ ನಡೆಯುತ್ತಿರುವ ಬಿಜೆಪಿ ಪದಾಧಿಕಾರಿಗಳ ಸಭೆಗೂ ಮುನ್ನ ಮಾತನಾಡಿದ ಅವರು, ಸಿದ್ದರಾಮ ಉತ್ಸವ ಆಚರಣೆಯಿಂದ ಡಿಕೆಶಿ ದುಃಖದಲ್ಲಿದ್ದರೆ ಇದನ್ನ ತಡೆಯಲು ವರಿಷ್ಠರು ತೇಪೆ ಹಾಕಲು ಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ನ ಸಿಎಂ ಹುದ್ದೆಯ ಜಗಳದಿಂದ ಪಕ್ಷ ಇಬ್ಭಾಗವಾಗುತ್ತದೆ. ಇವರ ಆಂತರಿಕ ಕಚ್ಚಾಟವೇ ಪಕ್ಷಕ್ಕೆ ಮುಳುವಾಗಲಿದ್ದು, ಬಳಿಕ ಬಿಜೆಪಿ 150 ಸ್ಥಾನವನ್ನು ಪಡೆಯುತ್ತೆ.
ಆಂತರಿಕ ಸಮೀಕ್ಷೆ ಮಾಡಿದ್ದು, ಕಾಂಗ್ರೆಸ್ ಜನರ ದೃಷ್ಟಿಯನ್ನು ಬೇರೆ ಕಡೆ ಸೆಳೆಯಲು ಈ ರೀತಿ ಸಮೀಕ್ಷೆ ನಡೆಸುತ್ತಿದ್ದಾರೆ. ಗುಪ್ತಚರ ವರದಿ, ಕೇಂದ್ರದ ಇಲಾಖೆ ವರದಿ, ಸುದ್ದಿ ಮಾಧ್ಯಮದ ವರದಿ ಪ್ರಕಾರ ಬಿಜೆಪಿ 150 ಸ್ಥಾನ ಪಡೆಯುತ್ತದೆ ಎಂದು ಎಲ್ಲರಿಗೂ ಗೊತ್ತಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.
ಜಮೀರ್ ಅಹಮ್ಮದ್ ಮನೆ ಮೇಲೆ ಎಸಿಬಿ ರೈಡ್ ವಿಚಾರ, ಅತ್ಯಾಚಾರ ಆರೋಪ ಬಂದರೆ ತಕ್ಷಣ ಅದನ್ನು ಇನ್ನೊಂದು ಪಕ್ಷದ ಮೇಲೆ ಹಾಕೋದು ಕಾಂಗ್ರೆಸ್ನ ಜಾಯಮಾನ. ಸೋನಿಯಾ ಗಾಂಧಿ ರಾಹುಲ್ ಮೇಲೆ ತನಿಖೆ ಆದರೆ ಅದಕ್ಕೆ ಬಿಜೆಪಿ ಕಾರಣ ಅನ್ನುತ್ತೆ. ಸ್ವಾಮಿ, ಇಡಿ ಮತ್ತು ಐಟಿ ಅವರು ನಮ್ಮ ಎಂಪಿಗಳ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಜನಪ್ರತಿನಿಧಿಗಳ ಮೇಲು ಆಗಿದೆ. ಆದರೆ ಯಾರು ಭಯಭೀತರಾಗಿಲ್ಲ.
ಗೋದ್ರಾ ಗಲಭೆ ಕಾರಣ ನರೇಂದ್ರ ಮೋದಿಯವರನ್ನು ಆರೇಳು ಗಂಟೆ ತನಿಖೆ ಮಾಡಿದರು. ಅಮಿತ್ ಶಾ ಅವರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಿದ್ರು. ನಾವೆಲ್ಲೂ ಆರೋಪ ಮಾಡಲಿಲ್ಲ. ಇವರು ತಮ್ಮ ಮುಖ ಉಳಿಸಿಕೊಳ್ಳಲು ವಿಪಕ್ಷಗಳ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಇಡಿ, ಲೋಕಾಯುಕ್ತ ಮುಚ್ಚು ಹಾಕುವ ಕೆಲಸ ಬಿಜೆಪಿ ಮಾಡಲಿಲ್ಲ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೇ ಲೋಕಾಯುಕ್ತದ ಹಲ್ಲು ಕಿತ್ತು ಹಾಕಿದ್ದಾರೆ ಎಂದರು.
ನೋಡಿ, ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು. ಇದೆಲ್ಲಾ ಅವರಿಗೆ ಗೊತ್ತಿತ್ತು ಬಿಜೆಪಿ ಇಂಥ ಕೆಲಸ ಮಾಡಲ್ಲ ಬಿಜೆಪಿ ದ್ವೇಷದ ರಾಜಕಾರಣ ಮಾಡಲ್ಲ ಈಡಿಗೆ ಸ್ವತಂತ್ರ ಶಕ್ತಿಯನ್ನು ಎಸಿಬಿಗೆ ಬಿಗು ಸ್ವತಂತ್ರ ಶಕ್ತಿಯನ್ನು ಬಿಜೆಪಿ ಕಲ್ಪಿಸಿದೆ. ಅವರು ಸ್ವತಂತ್ರವಾಗಿ ತನಿಖೆ ಮಾಡಬಹುದು.
ನಮ್ಮ ಸರ್ಕಾರ ಸುಭದ್ರವಾಗಿದೆ ಇನ್ನು 10 ತಿಂಗಳು ಪೂರೈಸುತ್ತೆ. ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಯಾರ್ಯಾರು ನಮ್ಮ ಸಿದ್ಧಾಂತವನ್ನು ವಿಚಾರಧಾರೆಯನ್ನು ಒಪ್ಪಿ ಬಿಜೆಪಿ ಪಕ್ಷಕ್ಕೆ ಸೇರಲು ಬರ್ತಾರೋ ಅವರಿಗೆ ಪಕ್ಷ ಸೇರಲು ಅವಕಾಶವಿದೆ. ಮುಂದಿನ ಚುನಾವಣೆಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪಕ್ಷ ಚುನಾವಣೆ ಎದುರಿಸುತ್ತದೆ. ಯಡಿಯೂರಪ್ಪ ನಮ್ಮ ಸರ್ವ ಸಮ್ಮತಿ ನಾಯಕ ಅವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಸಾಮೂಹಿಕ ನಾಯಕತ್ವದ ಅಡಿ ಚುನಾವಣೆ ಮಾಡುತ್ತೇವೆ
ಇದನ್ನೂ ಓದಿ : ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಆಯ್ಕೆ ಸಂತಸ ತಂದಿದೆ: ಡಿಕೆಶಿ