ಅರಕಲಗೂಡು: ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ತಾಲೂಕು ಕುರುಬ ಸಮಾಜದ ಯುವಕರು ಇಂದು ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿ, ಆಗ್ರಹಿಸಿದರು.
![Man insult a siddaramaiah](https://etvbharatimages.akamaized.net/etvbharat/prod-images/08:06_kn-hsn-ark-05-complaint-av-kac10024_05062020195635_0506f_1591367195_927.jpg)
ಕುರುಬ ಸಮುದಾಯದ ಹಿರಿಯರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬೆಂಗಳೂರಿನ ಪುನೀತ್ ಕೆರೆಹಳ್ಳಿ ಎಂಬಾತ ಏಕವಚನದಲ್ಲಿ ಮಾತನಾಡಿ ಅವಮಾನಿಸಿದ್ದಾನೆ. ಇದು ಸಮುದಾಯದ ಜನರ ಭಾವನೆಗೆ ಧಕ್ಕೆ ತಂದಿದೆ. ಈತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಮಾಜದ ಯುವಕರು ಒತ್ತಾಯಿಸಿದರು.
ಈ ವೇಳೆ ರಾಜ್ಯ ಕುರುಬ ಸಂಘದ ನಿರ್ದೇಶಕ ಕಿರಣ್ ಕುಮಾರ್, ಮಾಜಿ ನಿರ್ದೇಶಕ ಅನಿಲ್ ಕುಮಾರ್, ಮುಖಂಡರಾದ ಪುಟ್ಟರಾಜು, ರಾಮೇಗೌಡ, ರವಿಕುಮಾರ್, ಮಾದೇಶ್, ನವೀನ್, ಕೋನಾಪುರ ರಾಜೇಶ್, ಕುಮಾರ್, ಮಧು ಮತ್ತಿತರರು ಉಪಸ್ಥಿತರಿದ್ದರು.