ETV Bharat / state

ಅರಕಲಗೂಡು: ಒತ್ತುವರಿ ಕೆರೆ ಜಾಗ ತೆರವು ಮಾಡಿ ಗ್ರಾ. ಪಂಚಾಯತಿಗೆ ಹಸ್ತಾಂತರ

ಒತ್ತುವರಿಯಾಗಿದ್ದ ಕೆರೆ ಜಾಗವನ್ನು ತೆರವುಗೊಳಿಸಿ ಆ ಭೂಮಿಯನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಗಿದೆ.

author img

By

Published : Jun 27, 2020, 1:41 AM IST

arakalagudu hassan
ಒತ್ತುವರಿ ಕೆರೆ ಜಾಗ ತೆರವು

ಹಾಸನ (ಅರಕಲಗೂಡು): ಗ್ರಾಮದ ಕುಡಿಯುವ ನೀರಿನ ಮೂಲವಾಗಿರುವ ಕೆರೆ ಜಾಗವನ್ನು ಅಳತೆ ಮಾಡಿ ಸಂರಕ್ಷಣೆ ಮಾಡುವುದು ಪಂಚಾಯತಿಯ ಆದ್ಯತೆಯ ಕರ್ತವ್ಯಗಳಲ್ಲೊಂದು. ಆದರೆ, ಗ್ರಾ. ಪಂಚಾಯಿತಿ ಅನುಸರಿಸುತ್ತಿರುವ ವಿಳಂಬ ನೀತಿಯಿಂದಾಗಿ ಒತ್ತುವರಿ ಹಾಗೆಯೇ ಮುಂದುವರಿದಿತ್ತು. ಇವತ್ತು ಒತ್ತುವರಿಯಾಗಿದ್ದ ಕೆರೆ ಜಾಗವನ್ನು ತೆರವುಗೊಳಿಸಿ ಆ ಭೂಮಿಯನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಗಿದೆ.

ಒತ್ತುವರಿ ಕೆರೆ ಜಾಗ ತೆರವು ಮಾಡಿ ಗ್ರಾ. ಪಂಚಾಯತಿಗೆ ಹಸ್ತಾಂತರ

ತಾಲೂಕಿನ ರಾಮನಾಥಪುರ ಹೋಬಳಿಯ ಲಕ್ಕೂರು ಗ್ರಾಮದ ಸ.ನಂ 7ರಲ್ಲಿ 8-32 ಎಕರೆ ಸರ್ಕಾರಿ ಕೆರೆ ಮತ್ತು ಸ.ನಂ.111ರಲ್ಲಿ 8-28 ಎಕರೆ ಹಾಗೂ ಸ.ನಂ 151 ರಲ್ಲಿ 3-06 ಎಕರೆ ಒತ್ತುವರಿ ಜಾಗವನ್ನು ತೆರವು ಮಾಡಲಾಗಿದೆ.

ರಾಮನಾಥಪುರ ಹೋಬಳಿ ರಾಜಸ್ವ ನಿರೀಕ್ಷಕ ಸಿ.ಸ್ವಾಮಿ ನೇತೃತ್ವದಲ್ಲಿ ತಾಲೂಕು ಮೋಜಿಣಿದಾರ ಸಂತೋಷ ಹಾಗೂ ರಾಜರಾಜೇಶ್ವರಿ ಅವರಿಂದ ಅಳತೆ ಕಾರ್ಯ ಮಾಡಿಸಲಾಯಿತು. ಈ ವೇಳೆ ಒತ್ತುವರಿಯಾಗಿದ್ದ ಭೂಮಿಯನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರಿಸಿದರು.

ಲಕ್ಕೂರು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶೇಖರ್ ಗ್ರಾಮ ಲೆಕ್ಕಿಗರಾದ ಮಧುಕುಮಾರ್ ಪಂಚಾಯಿತಿ ಕಾರ್ಯದರ್ಶಿ ದೊರೆಸ್ವಾಮಿ ಗ್ರಾಮ ಸಹಾಯಕ ಮೋಹನ ಹಾಗೂ ಗ್ರಾಮಸ್ಥರು ಈ ವೇಳೆ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.