ETV Bharat / state

ಚುನಾವಣೆ ವೇಳೆ ಆಹಾರ, ಮದ್ಯ ಕೊಡ್ಬೇಡಿ ಎಂದಿದ್ದೇ ತಪ್ಪಾಯ್ತು! ಪೊಲೀಸರಿಗೆ ಜನರಿಂದಲೇ ಧಮ್ಕಿ

ಮತಗಟ್ಟೆಯ ಸಮೀಪ ಮತದಾರರಿಗೆ ಉಪಹಾರ ಮತ್ತು ಮದ್ಯ ಹಂಚದಂತೆ ಹೇಳಿದ್ದಕ್ಕೆ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಗ್ರಾಮಸ್ಥರು ಪೊಲೀಸರಿಗೆ ಧಮ್ಕಿ ಹಾಕಿದ್ದಾರೆ.

clash between police and villagers during election
ಅರಕಲಗೂಡು
author img

By

Published : Dec 23, 2020, 11:58 AM IST

ಹಾಸನ: ಮತಗಟ್ಟೆಯ ಸಮೀಪ ಮತದಾರರಿಗೆ ಉಪಹಾರ ಮತ್ತು ಮದ್ಯ ಹಂಚುತ್ತಿದ್ದ ವೇಳೆ ಪೊಲೀಸರು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.

ಅರಕಲಗೂಡಿನಲ್ಲಿ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆ
ಅರಕಲಗೂಡು ತಾಲೂಕಿನ ರಾಮನಾಥಪುರ ಸಮೀಪದ ಬಸವನಹಳ್ಳಿ ಎಂಬ ಗ್ರಾಮದಲ್ಲಿ ಮತಗಟ್ಟೆಯ ಸಮೀಪ ಮತದಾರರಿಗೆ ಉಪಹಾರ ಮತ್ತು ಮದ್ಯ ಹಂಚಬಾರದು ಎಂದು ಕೊಣನೂರು ಪೊಲೀಸ್ ಠಾಣೆಯ ಪಿಎಸ್ಐ ಅರುಣ್ ಕುಮಾರ್ ಹೇಳಿದ್ದಾರೆ.
ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪಿಎಸ್ಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರ ಕೂಗಿ ರಸ್ತೆಯ ಮಧ್ಯೆ ಕುಳಿತು ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಪಿಎಸ್ಐ ಮೇಲೆ ಹಲ್ಲೆಗೆ ಮುಂದಾಗಿದ್ದರು.
ಅಲ್ಲದೆ ಪೊಲೀಸ್ ವಾಹನವನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದರಿಂದ ಸ್ಥಳದಲ್ಲಿ ಉದ್ವಿಘ್ನ ವಾತಾವರಣ ಉಂಟಾಗಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಸಂಘರ್ಷ ನಡೆದು ತಳ್ಳಾಟ ನೂಕಾಟವಾಗಿದ್ದರಿಂದ ತಕ್ಷಣ ಸ್ಥಳಕ್ಕೆ ಬಂದ ವೃತ್ತ ನಿರೀಕ್ಷಕ ಹಾಗೂ ತಹಶೀಲ್ದಾರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕರ್ತವ್ಯಕ್ಕೆ ಅಡ್ಡಿ ಹಾಗೂ ಪೊಲೀಸ್ ವಾಹನವನ್ನು ಸುಟ್ಟುಹಾಕುವ ಬೆದರಿಕೆ ಹಾಕಿದ್ದ ಸುಮಾರು ಐದು ಮಂದಿಯನ್ನು ವಶಕ್ಕೆ ಪಡೆದು ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಓದಿ: ಪೊಲೀಸರಿಗೇ ಭವಿಷ್ಯ ಹೇಳಲು ಮುಂದಾದ ಸ್ವಾಮಿ : 'ಯುವರಾಜ'ನ ಉತ್ತರಕ್ಕೆ ಬೆಚ್ಚಿಬಿದ್ದ ಸಿಸಿಬಿ​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.