ಹಾಸನ: ರಸ್ತೆ ಬದಿ ಕಸ ಹಾಕದಂತೆ ಅನೇಕ ಬಾರಿ ಸೂಚನೆ ನೀಡಿದರೂ ಲೆಕ್ಕಿಸದವರಿಗೆ ಬುದ್ದಿ ಕಲಿಸಲು ಮುಂದಾದ ಪೌರಕಾರ್ಮಿಕರು ಕಸವನ್ನು ಅಂಗಡಿ ಮುಂದೆ ಮತ್ತೆ ತಂದು ಹಾಕಿದ್ದಾರೆ.
ನಗರದ 7ನೇ ವಾರ್ಡ್ನ ಬಸಟ್ಟಿಕೊಪ್ಪಲು ಮುಖ್ಯ ರಸ್ತೆಯ ಬದಿಯಲ್ಲೇ ಮೊಬೈಲ್ ಅಂಗಡಿಯವರು ಕಸವನ್ನು ಹಾಕುತ್ತಿದ್ದರು. ಈ ಬಗ್ಗೆ ನಗರಸಭೆ ಸಿಬ್ಬಂದಿ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಮಾತಿಗೂ ಗಮನ ಕೊಡದೇ ಅದೇ ರೀತಿ ಕಸ ಸುರಿಯುತ್ತಿದ್ದರು. ಬುಧವಾರ ಕಸ ಎತ್ತುವ ಟ್ರ್ಯಾಕ್ಟರ್ ಬಂದಾಗ ಕಸ ರಸ್ತೆ ಬದಿಯಲ್ಲೇ ಇರುವುದನ್ನು ಕಂಡು ಕೋಪಗೊಂಡ ಪೌರ ಕಾರ್ಮಿಕರು ಅಂಗಡಿ ಮುಂದೆಯೇ ಕಸ ಸುರಿಯುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಮತ್ತೆ ಇದೇ ರೀತಿ ರಸ್ತೆ ಬದಿ ಕಸ ಹಾಕದಂತೆ ಎಚ್ಚರಿಕೆ ನೀಡಿದ್ದು, ಇಲ್ಲಿನ ಅಂಗಡಿ ಮಾಲೀಕರು ಹಾಗೂ ನಿವಾಸಿಗಳಿಗೂ ಎಚ್ಚರಿಕೆ ನೀಡಲಾಗಿದೆ. ನಿತ್ಯ ವಾರ್ಡ್ಗೆ ಬರುವ ನಗರಸಭೆ ಕಸದ ವಾಹನಕ್ಕೆ ಕಸ ಹಾಕುವಂತೆ ಕಿವಿಮಾತು ಹೇಳಿದ್ದಾರೆ.