ETV Bharat / state

ಪೊದೆಯಲ್ಲಿ ಸಿಕ್ಕ ನವಜಾತ ಹೆಣ್ಣುಮಗು, ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರ

ಪೊದೆಯಲ್ಲಿ ಸಿಕ್ಕ ಹೆಣ್ಣು ಶಿಶುವನ್ನು ಸಾಕುತ್ತಿದ್ದವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ, ಹೀಗೆ ಸಿಕ್ಕ ಮಗು ಸಾಕುವುದು ಕಾನೂನಾತ್ಮಕವಾಗಿ ಸರಿಯಲ್ಲ ಎಂದು ತಿಳಿ ಹೇಳಿ ಮಗುವನ್ನು ಪಡೆದು ಮಕ್ಕಳ ಕಲ್ಯಾಣ ಇಲಾಖೆಯ ಸಮಿತಿಗೆ ಹಸ್ತಾಂತರಿಸಿದ ಘಟನೆ ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ನಡೆದಿದೆ..

INFANT
INFANT
author img

By

Published : May 28, 2021, 6:40 PM IST

ಅರಕಲಗೂಡು : ತಾಲೂಕಿನ ಮಾದಿಹಳ್ಳಿ ಕಾಲೋನಿಯಲ್ಲಿ ಪತ್ತೆಯಾದ ನವಜಾತ ಹೆಣ್ಣು ಮಗುವನ್ನು ಅರಕಲಗೂಡು ಮಕ್ಕಳ ಕಲ್ಯಾಣ ಇಲಾಖೆ ಪಡೆದುಕೊಂಡಿದೆ.

ಮಾದಿಹಳ್ಳಿ ಗ್ರಾಮದ ಸಂತೋಷ್ ಮತ್ತು ಖುಷಿ ದಂಪತಿ ಹಾಸನ ತಾಲೂಕಿನ ದುದ್ದ ಗ್ರಾಮದಲ್ಲಿ ಶುಂಠಿ ಕೆಲಸಕ್ಕೆಂದು ಹೋಗಿದ್ದರು. ಹಿಂತಿರುಗಿ ಬರುವಾಗ ಆಗ ತಾನೇ ಜನಿಸಿದ ಹೆಣ್ಣು ಶಿಶು ಅಳುವ ಸದ್ದು ಕೇಳಿ, ಹುಡುಕಿದ್ದಾರೆ. ಆ ವೇಳೆ, ಗಿಡದ ಪೊದೆಯಲ್ಲಿ ಮಗು ಸಿಕ್ಕಿದ್ದು, ಆ ಮಗುವನ್ನು ದಂಪತಿ ಮನೆಗೆ ತಂದು ಸಾಕುತ್ತಿದ್ದರು.

ಮಕ್ಕಳ ಸಹಾಯವಾಣಿಗೆ ದಾರಿಯಲ್ಲಿ ಹೆಣ್ಣು ಶಿಶು ಸಿಕ್ಕ ಬಗ್ಗೆ ಮಾಹಿತಿ ಬಂದ ಮೇರೆಗೆ, ಶಿಶು ಅಭಿವೃದ್ಧಿ ಅಧಿಕಾರಿ, ಯೋಜನಾಧಿಕಾರಿ ಹರಿಪ್ರಸಾದ್, ಪಿಎಸ್ಐ ಎಂ. ಮಾಲಾ ಮತ್ತು ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಎಲ್ಲಿಯೋ ಸಿಕ್ಕಿದ ನವಜಾತ ಶಿಶುವನ್ನು ತಂದು ಸಾಕುವುದು ಕಾನೂನಾತ್ಮಕವಾಗಿ ಸರಿಯಲ್ಲ. ನಮ್ಮ ವಶಕ್ಕೆ ಕೊಡಿ ಎಂದು ಶಿಶು ಅಭಿವೃದ್ದಿ ಅಧಿಕಾರಿ ಯೋಜಾನಾಧಿಕಾರಿ ಹರಿಪ್ರಸಾದ್ ತಿಳಿಸಿದರು. ಅವರ ಸಲಹೆ ಮೇರೆಗೆ ದಂಪತಿ ತಾವು ವಾರದಿಂದ ಪಾಲನೆ ಮಾಡಿದ್ದ, ನವಜಾತ ಶಿಶುವನ್ನು ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.

ಅಧಿಕಾರಿಗಳ ನಿಲುವಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಪೊಲೀಸರು ತಿಳಿ ಹೇಳಿ ಶಿಶು ವಶಕ್ಕೆ ಪಡೆದು ತೆರಳಿದರು. ನಂತರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಆರೋಗ್ಯ ಪರೀಕ್ಷೆ ಮಾಡಿಸಿ, ನಂತರದಲ್ಲಿ ಹಾಸನ ಮಕ್ಕಳ ಕಲ್ಯಾಣ ಇಲಾಖೆ ಸಮಿತಿಗೆ ನೀಡಲು ವ್ಯವಸ್ಥೆ ಮಾಡಲಾಯ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.