ETV Bharat / state

ಕೊರೊನಾ ನಿರ್ವಹಣೆಯ ವೆಚ್ಚದ ಕುರಿತು ಶ್ವೇತಪತ್ರ ಹೊರಡಿಸಿ.. ಕೇಂದ್ರಕ್ಕೆ ಸಲೀಂ ಅಹ್ಮದ್ ಆಗ್ರಹ - White paper on Corona management

20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿ ಜನರಿಗಾಗಿ ಸ್ಪಂದಿಸುವ ನಾಟಕವಾಡಿದ್ದಾರೆ. ಕೇಂದ್ರ ಸರ್ಕಾರ ಜುಮ್ಲಾ ಸರ್ಕಾರ, ಭೋಗಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

Centre must release Corona Management Expenditure details: Salim Ahmed
ಕೇಂದ್ರ ಕೊರೊನಾ ನಿರ್ವಹಣೆಯ ಖರ್ಚು ವೆಚ್ಚದ ಶ್ವೇತಪತ್ರ ಬಿಡುಗಡೆ ಮಾಡಲಿ: ಸಲೀಂ ಅಹಮದ್
author img

By

Published : Jun 1, 2020, 8:30 PM IST

ಹಾಸನ: ಕೊರೊನಾ ನಿರ್ವಹಣೆಗೆ ಈವರೆಗೂ ಆಗಿರುವ ಖರ್ಚು ವೆಚ್ಚ ಕುರಿತ ಶ್ವೇತಪತ್ರವನ್ನು ಕೂಡಲೇ ಹೊರಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಸಲೀಂ ಅಹ್ಮದ್ ಗುಡುಗು..

ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ, ಅವರು ಹೇಳುವುದೆಲ್ಲ ಸುಳ್ಳು. ಕೊರೊನಾ ರೋಗವನ್ನು ಮುಂದಿಟ್ಟುಕೊಂಡು ಜನರ ಜೀವನದೊಂದಿಗೆ ಹುಡುಗಾಟವಾಡುತ್ತಿದ್ದಾರೆ. 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿ ಜನರಿಗಾಗಿ ಸ್ಪಂದಿಸುವ ನಾಟಕವಾಡಿದ್ದಾರೆ. ಕೇಂದ್ರ ಸರ್ಕಾರ ಜುಮ್ಲಾ ಸರ್ಕಾರ, ಭೋಗಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ನಾಯಕರು ಉಮೇಶ್ ಕತ್ತಿ ನೇತೃತ್ವದಲ್ಲಿ ನಡೆಸಿದ ಪ್ರತ್ಯೇಕ ಸಭೆ ವಿಚಾರವಾಗಿ ಮಾತನಾಡಿದ ಅವರು, ಇದು ಬಿಜೆಪಿಯವರ ಆಂತರಿಕ ವಿಚಾರ. ಆದರೆ, ಕೊರೊನಾದಂತ ಸಂಕಷ್ಟದ ಸಮಯದಲ್ಲೂ ಅಧಿಕಾರಕ್ಕಾಗಿ ಸಭೆ ಮಾಡುತ್ತಿದ್ದಾರೆ. ಅಧ್ಯಕ್ಷ, ಎಂಪಿ, ಮಂತ್ರಿಯಾಗಲು ಹವಣಿಸುತ್ತಿದ್ದಾರೆ ಎಂದರು.

ಜೂನ್ 7ರಂದು ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡಯಲಿದೆ. ದೇಶದಲ್ಲೇ ಪ್ರಥಮ ಬಾರಿಗೆ ಪ್ರತಿ ಪಂಚಾಯತ್‌ನಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಬೆಂಗಳೂರಿನಲ್ಲಿ ಕೇವಲ 150 ಜನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಆದರೆ, ಕಾರ್ಯಕ್ರಮ ವೀಕ್ಷಣೆ ಮಾಡಲು ಸಹಕಾರಿಯಾಗುವಂತೆ ಸುಮಾರು 8 ಸಾವಿರ ಸ್ಥಳದಲ್ಲಿ ಝೂಮ್ ಆ್ಯಪ್ ಮೂಲಕ ಎಲ್ಇಡಿ ಸ್ಕ್ರೀನ್ ಹಾಕಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರು ಪತ್ರಿಜ್ಞಾವಿದಿ ಓದುತ್ತಾರೆ. ಅದರ ಮೂಲಕ ಪಕ್ಷದವರು ಸಿದ್ದಾಂತದ ಪ್ರತಿಜ್ಞೆ ತಗೆದುಕೊಳ್ಳಲಿದ್ದಾರೆ. ಇದಾದ ಬಳಿಕ ಜಿಲ್ಲಾ, ತಾಲೂಕು ಹಾಗೂ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ಕೊಡಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.