ETV Bharat / state

ಪಿಎಫ್​ಐ ಬಾಲ ಬಿಚ್ಚಿದರೆ ತಲೆ ಕಟ್ಟಾಗುತ್ತೆ ಹುಷಾರ್: ಸಿ ಟಿ ರವಿ - Popular Front of India

ದೇಶ ಭಕ್ತ ಮತ್ತು ದೇಶ ದ್ರೋಹಿ, ದೇಶ ಭಕ್ತನ ಜೊತೆ ದೇಶ ದ್ರೋಹಿ ಕೆಲಸ ಮಾಡೋದು ಅಕ್ಷ್ಯಮ್ಯ ಅಪರಾಧ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ

author img

By

Published : Sep 29, 2022, 3:37 PM IST

ಹಾಸನ: ದೇಶ ಕಟ್ಟುವ ಕಾರ್ಯವನ್ನು ಭಾರತದ ಉದ್ದಕ್ಕೂ ಮಾಡ್ತಿರೋದು, ಮುಂದೆಯೂ ಭಾರತ ಭಾರತವಾಗಿ ಉಳಿಯಬೇಕೆಂದು ಬಯಸೋದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಅಂತ ಸಂಘದ ವಿರುದ್ಧ ಮಾತನಾಡಿದರೆ ಮುಂದೆ ತಲೆನೇ ಕಟ್ಟಾಗುತ್ತೆ ಎಂದು ಪಿಎಫ್​ಐ ಸಂಘಟನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಖಡಕ್ ವಾರ್ನಿಂಗ್​ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಮಾತನಾಡಿದರು

ಬೇಲೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಭಕ್ತ ಮತ್ತು ದೇಶ ದ್ರೋಹಿ, ದೇಶ ಭಕ್ತನ ಜೊತೆ ದೇಶ ದ್ರೋಹಿ ಕೆಲಸ ಮಾಡೋದು ಅಕ್ಷ್ಯಮ್ಯ ಅಪರಾಧ. ಆರ್​ಎಸ್‍ಎಸ್ ಒಂದು ದೇಶ ಭಕ್ತ ಸಂಘಟನೆ. ಭಾರತವನ್ನ ಮೊಘಲರ ಸ್ಥಾನ ಮಾಡಿ ಹಿಂದೂಗಳಲ್ಲ ಸರ್ವನಾಶ ಮಾಡಬೇಕು ಎಂದು ಬಯಸೋದು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ. ಇಂತಹ ಹೋಲಿಕೆ ಮಾಡುವವರಿಗೆ ಏನು ಹೇಳಬೇಕು. ಯಾರಾದರೂ ತಲೆ ಸರಿ ಇದ್ದರೆ ಹೋಲಿಕೆ ಮಾಡ್ತಾರಾ? ಎಂದು ಪ್ರಶ್ನಿಸಿದರು.

ಆರ್​ಎಸ್‍ಎಸ್ ಬೈದರೆ ಓಟು ಸಿಗುತ್ತೆ ಅನ್ನುವ ದುರಾಸೆ. ಇವರಿಗೂ ಪಿಎಫ್‍ಐಗೂ ವ್ಯತ್ಯಾಸ ಏನು..? ಪಿಎಫ್‍ಐ, ಕಾಂಗ್ರೆಸ್‍ನವರು ಆರ್​ಎಸ್‍ಎಸ್‍ನೇ ಟಾರ್ಗೆಟ್ ಮಾಡ್ತಾರೆ. ಹಾಗಾದ್ರೆ ಇವರಿಬ್ಬರಿಗೂ ಒಳ ಹೊಂದಾಣಿಕೆ ಇರುವ ಸಾಧ್ಯತೆ ಇದೆ. ಮೊಘಲ್ ಸ್ತಾನ್ ಮಾಡಲು ನೀವು ನಮಗೆ ಸಹಾಯ ಮಾಡಿ ನಿಮಗೆ ನಾವು ಓಟು ಹಾಕ್ತೀವಿ ಅಂತ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದರು.

ವಿಭಜನೆಗೆ ತಡೆಗೋಡೆ: ಅಧಿಕಾರದ ದುರಾಸೆಗೆ ಭಾರತ ವಿಭಜನೆ ಮಾಡೋದು. ಇಂದಿನ ಕಾಂಗ್ರೆಸ್ - ಪಿಎಫ್‍ಐ ಜೊತೆಗೆ ಕೈ ಜೋಡಿಸಿದ್ದಾರೆ ಅನ್ನುವ ಅನುಮಾನ ನನಗೆ ಬರುತ್ತಿದೆ. ಆರ್​ಎಸ್​ಎಸ್​ ಮುಗಿಸುತ್ತೀನಿ ಅಂತಾರೆ. ವಿಭಜನೆಗೆ ತಡೆಗೋಡೆ ಆಗಿರುವುದು ಆರ್ ಎಸ್‍ಎಸ್. ಹಾಗಾಗಿ ಆರ್​ಎಸ್​ಎಸ್​ ಮುಗಿಸಿದರೆ ಅವರು ಮೊಘಲ್ ಸ್ತಾನ್ ಮಾಡೋದು ಬಹಳ ಸುಲಭ ಎಂದು ಸಿ. ಟಿ ರವಿ ವಾಗ್ದಾಳಿ ನಡೆಸಿದರು.

ನಾನಂತೂ ತಯಾರಿಲ್ಲ: ಸಿದ್ದರಾಮಯ್ಯನವರೇ ನೀವು ಸುನ್ನಿ ಮಾಡಿಸಿಕೊಳ್ಳಲು ರೆಡಿ ಇದ್ದೀರಾ..? ಬಹುಶಃ ಸಿದ್ದರಾಮಯ್ಯ ಅವರು ಓಟು ಸಿಗುತ್ತೆ ಅಂತ ತಯಾರು ಇರಬಹುದು. ನಾನಂತೂ ತಯಾರಿಲ್ಲ ಎಂದರು.

ಇದೇ ವೇಳೆ, ದಸರಾ ಹಬ್ಬದ ಬಗ್ಗೆ ಮಾತನಾಡಿದ ಅವರು, ಆ ತಾಯಿ ವರವನ್ನು ಕೊಡ್ತಾಳೆ. ಹಾಗೆಯೇ ದುಷ್ಟ ನಿಗ್ರಹಿಸುವಂತೆ ದುರ್ಗೆಯೂ ಹೌದು. ಆಕೆಯ ಬಳಿ ಶಸ್ತ್ರವೂ ಇದೆ, ಶಾಸ್ತ್ರವೂ ಇದೆ. ಯಾರೂ ಶಾಸ್ತ್ರದ ಮೂಲಕ ಸಂಧಾನಕ್ಕೆ ಬರ್ತಾರೆ ಸಂಧಾನ, ಯಾರೂ ಶಸ್ತ್ರದ ಮೂಲಕ ಬರ್ತಾರೆ ಅವರ ಸಂಹಾರ ಎಂದರು.

ಓದಿ: ಆರ್​ಎಸ್​ಎಸ್​ನವರ ಪಾಪದ ಕೂಸು ಬಿಜೆಪಿ.. ಬಿಎಸ್​ವೈ ಏಟಿಗೆ ಸಿದ್ದರಾಮಯ್ಯ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.