ETV Bharat / state

ಹಾಸನದಲ್ಲಿ ಬಸ್​ ಪಲ್ಟಿ: ಒಬ್ಬ ಸಾವು, 25 ಮಂದಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್​ ಪಲ್ಟಿಯಾದ ಪರಿಣಾಮ ಒಬ್ಬ ಸಾವಿಗೀಡಾಗಿದ್ದು, 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ  ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಪಟ್ಟಣದ ಶ್ರೀಕಂಠಯ್ಯ ಸರ್ಕಲ್ ಬಳಿ ಜರುಗಿದೆ.

ಹಾಸನದಲ್ಲಿ ಬಸ್​ ಪಲ್ಟಿ: ಓರ್ವ ಸಾವು, 25 ಮಂದಿಗೆ ಗಾಯ
author img

By

Published : Nov 25, 2019, 10:18 AM IST

Updated : Nov 25, 2019, 11:18 AM IST

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್​ ಪಲ್ಟಿಯಾದ ಪರಿಣಾಮ ಒಬ್ಬ ಸಾವಿಗೀಡಾಗಿದ್ದು, 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಪಟ್ಟಣದ ಶ್ರೀಕಂಠಯ್ಯ ಸರ್ಕಲ್ ಬಳಿ ಜರುಗಿದೆ.

ಹಾಸನದಲ್ಲಿ ಬಸ್​ ಪಲ್ಟಿ: ಓರ್ವ ಸಾವು, 25 ಮಂದಿಗೆ ಗಾಯ

ಅಭಿಷೇಕ್ (29) ಮೃತ ಯುವಕ. ಈತ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಯುವಕ ಎಂದು ಗುರುತಿಸಲಾಗಿದೆ. ಇನ್ನು ಕೆಎಸ್​ಆರ್​ಟಿಸಿ ಬಸ್ ನಲ್ಲಿದ್ದ 46 ಮಂದಿ ಪ್ರಯಾಣಿಕರಲ್ಲಿ 25ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಸಾರಿಗೆ ಚಾಲಕನ ನಿರ್ಲಕ್ಷ್ಯ ಕೂಡ ಕಾರಣ ಎನ್ನಲಾಗುತ್ತಿದೆ. ಶ್ರೀಕಂಠಯ್ಯ ವೃತ್ತದ ಬಳಿ ಹಾಕಲಾಗಿರುವ ಸ್ಪೀಡ್ ಬ್ರೇಕರ್ ಮೇಲೆ ನಿಧಾನವಾಗಿ ಚಲಿಸದೇ ಏಕಾಏಕಿ ರಭಸವಾಗಿ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಕಳೆದ 5 ದಿನಗಳ ಹಿಂದೆ ಇದೇ ಜಾಗದಲ್ಲಿ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿ ಬಸ್ ಜೋಳದ ಹೊಲದ ಪಕ್ಕದ ಗುಂಡಿಗೆ ಪಲ್ಟಿಯಾಗಿ ಬಿದ್ದಿತ್ತು. ಪರಿಣಾಮ 10 ಮಂದಿ ಗಾಯಗೊಂಡಿದ್ದರು. ಆ ಪ್ರಕರಣ ಮಾಸುವ ಮುನ್ನವೇ ಮತ್ತೆ ಇಂತಹ ಘಟನೆ ನಡೆದಿದೆ. ಅಪಘಾತ ಹಿನ್ನೆಲೆ ಮಧ್ಯರಾತ್ರಿ ಎರಡು ಗಂಟೆಯ ತನಕ ಸಂಚಾರ ದಟ್ಟಣೆ ಉಂಟಾಗಿತ್ತು. ಬಳಿಕ ಹಿರೀಸಾವೆ ಪೊಲೀಸರು ಮತ್ತು ಚನ್ನರಾಯಪಟ್ಟಣದ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್​ ಮುಕ್ತಗೊಳಿಸಲು ರಾತ್ರಿಯಿಡೀ ಹರಸಾಹಸ ಪಟ್ಟರು.

Intro:ಹಾಸನ: ಚಾಲಕನ ನಿಯಂತ್ರಣ ತಪ್ಪಿ ಮತ್ತೊಂದು ಸಾರಿಗೆ ಪಲ್ಟಿಯಾಗಿ ಬಿದ್ದ ಪರಿಣಾಮ ಓರ್ವ ಸಾವಿಗೀಡಾಗಿದ್ದು 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.

ಅಭಿಷೇಕ್ (29) ಮೃತ ದುರ್ದೈವಿ. ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಯುವಕ ಎಂದು ಗುರುತಿಸಲಾಗಿದ್ದು ಕೆಎಸ್ಆರ್ಟಿಸಿ ಬಸ್ ನಲ್ಲಿದ್ದ 46ಮಂದಿ ಪ್ರಯಾಣಿಕರಲ್ಲಿ 25ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಇಂತಹದೊಂದು ಘಟನೆ ತಾಲೂಕಿನ ಹಿರೀಸಾವೆ ಪಟ್ಟಣದ ಶ್ರೀಕಂಠಯ್ಯ ಸರ್ಕಲ್ ಬಳಿ ನಡೆದಿದೆ. ಇನ್ನೂ ಅಪಘಾತಕ್ಕೆ ಸಾರಿಗೆ ಚಾಲಕನ ನಿರ್ಲಕ್ಷ್ಯ ಕೂಡ ಕಾರಣ ಎಂಬುದು ಗಾಯಾಳುಗಳ ಮಾತಾಗಿದೆ

ಶ್ರೀಕಂಠಯ್ಯ ವೃತ್ತದ ಬಳಿ ಹಾಕಲಾಗಿರುವ ಸ್ಪೀಡ್ ಬ್ರೇಕರ್ ಮೇಲೆ ನಿಧಾನವಾಗಿ ಚಲಿಸದೇ ಏಕಾಏಕಿ ರಭಸವಾಗಿ ಚಾಲನೆ ಮಾಡಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ನಿ ಕಳೆದ 5 ದಿನಗಳ ಹಿಂದೆ ಚಾಲಕನ ಅಜಾಗರೂಕತೆಯಿಂದ ವಾಹನವನ್ನ ಇಳಿಜಾರಿನಲ್ಲಿ ನ್ಯೂಟ್ರಲ್ ನಲ್ಲಿ ಬಂದ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ ಜೋಳದ ಹೊಲದ ಪಕ್ಕದ ಗುಂಡಿಗೆ ಪಲ್ಟಿಯಾಗಿ ಬಿದ್ದ 10 ಮಂದಿ ಗಾಯಗಳಾಗಿತ್ತು.

ಆ ಪ್ರಕರಣದ ಬೆನ್ನಲ್ಲೇ ಇಂದು ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯಲ್ಲಿ ನಡುರಾತ್ರಿ ಮತ್ತೆ ಇಂತಹದೊಂದು ಘಟನೆ ನಡೆದಿದೆ. ಬಸ್ ಚಾಲಕ ರಸ್ತೆಗೆ ಹಾಕಲಾಗಿರುವ ಹಮ್ಸ್ ಗಳಲ್ಲಿ ನಿಧಾನವಾಗಿ ಚಲಿಸದೇ ಏಕಾಏಕಿ ಚಾಲನೆ ಮಾಡುವುದರಿಂದ ವಾಹನ ಚಾಲಕನ ನಿಯಂತ್ರಣ ತಪ್ಪಿದ್ದು ಈ ಘಟನೆಗೆ ಕಾರಣ

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹಾಕಲಾಗಿರುವ ಹಮ್ಸ್ ಮೇಲೆ ಕೆಎಸ್ಆರ್ಟಿಸಿ ಚಾಲಕರು ನಿಧಾನವಾಗಿ ವಾಹನ ಚಲಾಯಿಸದೇ ರಭಸವಾಗಿ ಹೋಗುತ್ತಿರುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಚಾಲಕರಿಗೆ ಕಟ್ಟುನಿಟ್ಟಿನ ಮಾರ್ಗದರ್ಶನ ನೀಡಬೇಕು ಇಲ್ಲವಾದಲ್ಲಿ ಅಪಘಾತಗಳು ಸಂಭವಿಸುತ್ತವೆ ಎನ್ನುತ್ತಾರೆ ಸ್ಥಳೀಯರು

ಅಪಘಾತ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಎರಡು ಗಂಟೆಯ ತನಕ ಟ್ರಾಫಿಕ್ ಜಾಮ್ ಉಂಟಾಗಿದ್ದು ಬಳಿಕ ಹಿರೀಸಾವೆ ಪೊಲೀಸರು ಮತ್ತು ಚನ್ನರಾಯಪಟ್ಟಣದ ಟ್ರಾಫಿಕ್ ಪೊಲೀಸರು ವಾಹನ ಸಂಚಾರವನ್ನು ಸುಗಮಗೊಳಿಸಲು ರಾತ್ರಿಪೂರ ಹರಸಾಹಸ ಪಟ್ಟಿದ್ದಾರೆ.

ಇನ್ನು ಈ ಸಂಬಂಧ ಹಿರಿಸವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Nov 25, 2019, 11:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.