ETV Bharat / state

ಹಿಜಾಬ್, ಟಿಪ್ಪು ಸುಲ್ತಾನ್ ಕಾಂಗ್ರೆಸ್​ಗೆ ಓಟ್‌ಬ್ಯಾಂಕ್​ಗಾಗಿ ಬೇಕಾಗಿದೆ: ಛಲವಾದಿ ನಾರಾಯಣಸ್ವಾಮಿ - ಹಿಜಾಬ್ ನಿಷೇಧ

ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Etv Bharat
Etv Bharat
author img

By ETV Bharat Karnataka Team

Published : Dec 24, 2023, 5:28 PM IST

Updated : Dec 24, 2023, 7:19 PM IST

ಛಲವಾದಿ ನಾರಾಯಣಸ್ವಾಮಿ ಮಾಧ್ಯಮದವರ ಜೊತೆ ಮಾತನಾಡಿದರು.

ಹಾಸನ: ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ಕಾಂಗ್ರೆಸ್​ಗೆ ಹಿಜಾಬ್ ಮತ್ತು ಟಿಪ್ಪು ಸುಲ್ತಾನ್ ಬೇಕಾಗಿದೆ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಾಲಾ-ಕಾಲೇಜಿನಲ್ಲಿ ಸಮವಸ್ತ್ರದ ಶಿಸ್ತು ಪಾಲಿಸಬೇಕೆಂದು ಬಿಜೆಪಿ ಸರ್ಕಾರ ಆದೇಶ ನೀಡಿತ್ತು. ಆದರೆ ಬಿಜೆಪಿ ಹಿಜಾಬ್ ನಿಷೇಧ ಮಾಡಲೇ ಇಲ್ಲ. ಈ ಹಿಂದೆ ನಮ್ಮ ಸರ್ಕಾರವು ಹಿಜಾಬ್ ಶಾಲಾ ಆಡಳಿತ ಮಂಡಳಿಗಳಿಗೆ ಬಿಟ್ಟ ವಿಷಯ, ಅವರು ಏನು ಹೇಳ್ತಾರೋ ಅದನ್ನು ಪಾಲಿಸಬೇಕು ಎಂದು ಹೇಳಿತ್ತು. ನಂತರ ಆ ಸಮುದಾಯದ ಕೆಲವು ಹೆಣ್ಣುಮಕ್ಕಳು ಕೋರ್ಟ್‌ಗೆ ಹೋದರು. ಕೋರ್ಟ್​ ಸಹ ಸರ್ಕಾರ ಹೇಳಿರುವುದು ಸರಿ ಇದೆ. ಆಯಾ ಶಾಲಾ-ಕಾಲೇಜುಗಳಿಗೆ ಬಿಟ್ಟದ್ದು. ಹಿಜಾಬ್ ಧರಿಸುವುದು ಕಡ್ಡಾಯ ಧಾರ್ಮಿಕ ಪದ್ಧತಿಯಲ್ಲ, ಅದನ್ನು ನೀವೇ ಮಾಡಿಕೊಂಡಿದ್ದೀರಿ ಎಂದು ಆದೇಶಿಸಿದೆ ಎಂದು ಹೇಳಿದರು.

ಸಿಎಂ ಹಿಜಾಬ್ ಹೇಳಿಕೆಗೆ ಆಕ್ರೋಶ: ಹಿಜಾಬ್ ನಿಷೇಧ ವಾಪಸ್ ಪಡೆಯಲು ಹೇಳಿದ್ದೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, ಈಗ ಹಿಜಾಬ್ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಇದರ ನಡುವೆ ಸಿಎಂ ಹಿಜಾಬ್ ನಿಷೇಧ ಆದೇಶ ವಾಪಸ್ ತಗೊಂಡಿದ್ದೀವಿ ಎಂದರೆ, ಕಾನೂನು ಉಲ್ಲಂಘನೆ ಮಾಡಿದಂತೆ ಅಲ್ಲವೇ?. ಈ ಸರ್ಕಾರ ಕಾನೂನು ಮತ್ತು ಕೋರ್ಟ್ ಆದೇಶದ ವಿರುದ್ದ ನಡೆದುಕೊಳ್ಳುತ್ತಿದೆ. ಧರ್ಮ ಸಂಘರ್ಷ ಮಾಡಬೇಕೆನ್ನುವುದು ಕಾಂಗ್ರೆಸ್‌ ಉದ್ದೇಶ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಬರಗಾಲ ಪರಿಸ್ಥಿತಿ ಗಂಭೀರವಾಗಿದೆ. ನಾಲ್ಕು ತಿಂಗಳಿನಿಂದ ಬರ ಇದೆ ಎಂದು ಹೇಳುತ್ತಿದ್ದೀರಿ. ಆದರೆ ರೈತರಿಗೆ ಏನು ಕೊಟ್ಟಿದ್ದೀರಿ? ಒಂದು ರೂಪಾಯಿಯೂ ಅವರ ಖಾತೆಗೆ ಬಂದಿಲ್ಲ. ಮತ್ತೆ ಯಾವುದಕ್ಕೆ ಸರ್ಕಾರ ನಡೆಸುತ್ತಿದ್ದೀರಿ ಎಂದರು.

ನೀವು ಪ್ರಧಾನಿಯನ್ನು ಭೇಟಿಯಾಗಿ ಬರ ಪರಿಸ್ಥಿತಿ ಬಗ್ಗೆ ಹೇಳಬೇಕಿತ್ತು. ದೆಹಲಿಗೆ ಹೋಗುವಾಗ ಐಷಾರಾಮಿ ಖಾಸಗಿ ವಿಮಾನದಲ್ಲಿ ಹೋದಿರಿ. ಬರ ಬಂದಿರುವುದು ರೈತರಿಗೆ, ಕಾಂಗ್ರೆಸ್ ಲೀಡರ್‌ಗಳಿಗಲ್ಲ. ನಾವು ಟ್ಯಾಕ್ಸ್​ ತುಂಬುತ್ತಿದ್ದೇವಲ್ಲ. ಸಿದ್ದರಾಮಯ್ಯರಿಂದ ಹಿಡಿದು, ಜಮೀರ್ ಅಹ್ಮದ್ ಸೇರಿ ಎಲ್ಲರಿಗೂ ಜನರು ಛೀಮಾರಿ ಹಾಕಬೇಕೆಂದು ಎಂದು ಅವರು ಒತ್ತಾಯಿಸಿದರು.

ಹಿಜಾಬ್- ಸರ್ಕಾರ ತಾಳ್ಮೆ ವಹಿಸಬೇಕಿತ್ತು: ಎನ್.ಮಹೇಶ್: ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ಆದೇಶ ಬರುವವರೆಗೂ ಸರ್ಕಾರ ತಾಳ್ಮೆಯಿಂದ ಕಾಯಬೇಕಿತ್ತು. ಮುಂದೆ ಕೋರ್ಟ್‌ ಪ್ರಶ್ನೆ ಮಾಡಿದರೆ ಮುಖ್ಯಮಂತ್ರಿಗಳು ಅದಕ್ಕೆಲ್ಲ ಉತ್ತರ ಕೊಡಬೇಕಾಗುತ್ತದೆ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಿಜಾಬ್ ನಿಷೇಧ ವಾಪಸ್ ಪಡೆಯುವುದಾಗಿ ಹೇಳಿಕೆ ನೀಡಿರುವುದು ಕವ್ಲಂದೆ ಅನ್ನೋ ಊರಿನಲ್ಲಿ. ಮುಸ್ಲಿಮರೇ ಹೆಚ್ಚಿರುವ ಸ್ಥಳವದು. ಈ ಹಿಂದೆ ಇದೇ ಸ್ಥಳದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಹೇಳಿದ್ದರು. ಇಂತಹ ಹೇಳಿಕೆಯಿಂದ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದರು.

ಇದನ್ನೂಓದಿ: ದಮ್​ ಇದ್ದರೆ ಹಿಂದೂ ರಾಷ್ಟ್ರವಾಗುವುದನ್ನು ಸಿದ್ದರಾಮಯ್ಯ ತಡೆಯಲಿ: ಅನಂತಕುಮಾರ ಹೆಗಡೆ

Last Updated : Dec 24, 2023, 7:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.