ಹಾಸನ: ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ ಶಿವಯೋಗಿ ಸಿದ್ದರಾಮೇಶ್ವರ ಮತ್ತು ಮಹಾಯೋಗಿ ವೇಮನ ಜಯಂತಿ ಉದ್ಘಾಟನಾ ಸಮಾರಂಭದ ವೇಳೆ ಬೃಹತ್ ಗಾತ್ರದ ಕಬ್ಬಿಣದ ಕಟೌಟ್ ಕೆಳಗೆ ಬಿತ್ತು.
ಜಿಲ್ಲಾಧಿಕಾರಿ ಆರ್.ಗಿರೀಶ್ ಉದ್ಘಾಟನಾ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕಬ್ಬಿಣದ ಕಟೌಟ್ ದಿಢೀರನೇ ಕಲಾಭವನದ ಕೆಲಸಗಾರ ಮಹಮ್ಮದ್ ಎಂಬಾತನ ಮೇಲೆ ಬಿದ್ದು ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ತಕ್ಷಣ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಚಿಕಿತ್ಸೆಗಾಗಿ ಗಾಯಾಳುವನ್ನು ಎಎಸ್ಪಿ ನಂದಿನಿ ಅವರ ಪೊಲೀಸ್ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.
ಹಾಸನಾಂಬ ಕಲಾಕ್ಷೇತ್ರದ ದುರಸ್ತಿ ಬಗ್ಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಕೂಡ ಬೇಸರವ್ಯಕ್ತಪಡಿಸಿ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ.