ETV Bharat / state

ಬೇಲೂರು ಶಾಸಕನಿಗೆ ಕೊರೊನಾ... ಆತಂಕ ಬೇಡವೆಂದ ಲಿಂಗೇಶ್​​!

author img

By

Published : Aug 26, 2020, 1:43 PM IST

ಬೇಲೂರು ಶಾಸಕನಿಗೆ ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ ರ್ಯಾಪಿಡ್​ ಟೆಸ್ಟ್​ನಲ್ಲಿ ಕೊರೊನಾ ದೃಢಪಟ್ಟಿದ್ದು, ಬೆಂಗಳೂರಿನ ಕೋವಿಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Belur MLA tests positive for Covid, Belur MLA tests positive for Covid news, Belur MLA KS Lingesh,  Belur MLA KS Lingesh corona,  Belur MLA KS Lingesh corona news, ಬೇಲೂರು ಶಾಸಕನಿಗೆ ಕೊರೊನಾ, ಬೇಲೂರು ಶಾಸಕನಿಗೆ ಕೊರೊನಾ ದೃಢ, ಬೇಲೂರು ಶಾಸಕನಿಗೆ ಕೊರೊನಾ ಸುದ್ದಿ, ಬೇಲೂರು ಶಾಸಕ ಕೆಎಸ್​ ಲಿಂಗೇಶ್​, ಬೇಲೂರು ಶಾಸಕ ಕೆಎಸ್​ ಲಿಂಗೇಶ್​ಗೆ ಕೊರೊನಾ, ಬೇಲೂರು ಶಾಸಕ ಕೆಎಸ್​ ಲಿಂಗೇಶ್​ಗೆ ಕೊರೊನಾ ಸುದ್ದಿ,
ಬೇಲೂರು ಶಾಸಕನಿಗೆ ಕೊರೊನಾ ದೃಢ

ಹಾಸನ: ಜಿಲ್ಲೆಯ ಬೇಲೂರು ಶಾಸಕ ಕೆ.ಎಸ್.ಲಿಂಗೇಶ್​ಗೆ ಕೊರೊನಾ ತಗುಲಿದೆ.

ಈಗಾಗಲೇ ನಿನ್ನೆ ಶಾಸಕ ಶಿವಲಿಂಗೇಗೌಡಗೆ ಕೋವಿಡ್ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಬೇಲೂರು ಶಾಸಕ ಕೆ.ಎಸ್.ಲಿಂಗೇಶ್​ಗೂ ಕೊರೊನಾ ತಗುಲಿದೆ. ಸದ್ಯ ಶಾಸಕರು ಕಳೆದ ಎರಡು ದಿನಗಳಿಂದ ಬೆಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೇಲೂರು ಶಾಸಕನಿಗೆ ಕೊರೊನಾ ದೃಢ

ಶಾಸಕ ಲಿಂಗೇಶ್ ಸ್ವತಃ ತಾವೇ ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಜನತೆಗೆ ಧೈರ್ಯ ತುಂಬಿದ್ದು, ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ದೃಢಪಡಿಸಿದ್ದಾರೆ.

ನನಗೆ ಯಾವುದೇ ರೋಗ ಲಕ್ಷಣಗಳಿಲ್ಲ. ರ್ಯಾಪಿಡ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಯಾವುದೇ ರೋಗದ ಲಕ್ಷಣಗಳಿಲ್ಲದ ಕಾರಣ ಹೆಚ್ಚಿನ ಚಿಕಿತ್ಸೆ ಕೊಡುತ್ತಿಲ್ಲ. ಕ್ಷೇತ್ರದ ಜನರನ್ನು ಬಿಟ್ಟು ಇರಲು ಬೇಸರವಾಗುತ್ತಿದೆ. ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ಕರೆ ಮಾಡಿ. ನಿಮ್ಮ‌ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ನಮ್ಮ ಮನೆ ಸದಸ್ಯರೆಲ್ಲಾ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಕೊರೊನಾ ಬಗ್ಗೆ ಜಾಗೃತರಾಗಿರಿ. ಯಾರಿಗೂ ಭಯ ಬೇಡ.‌ ಮುಂದಿನ ವಾರ ಕ್ಷೇತ್ರದ ಜನರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.