ETV Bharat / state

ಹಾಸನ: ಹಳೆ ಕಾರುಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ - Arrest of old car theft thieves

ಹಾಸನ ಜಿಲ್ಲೆಯಲ್ಲಿ ಹಳೆ ಕಾರುಗಳನ್ನು ಕಳ್ಳತನ ಮಾಡಿ ದಾಖಲಾತಿಗಳನ್ನು ನಕಲಿ ಮಾಡಿ ಮಾರುತ್ತಿದ್ದ ಖದೀಮರನ್ನು ಬಂಧಿಸಲಾಗಿದೆ.

hassan
ಬಂಧನಕ್ಕೊಳಗಾದ ಆರೋಪಿಗಳು
author img

By

Published : Feb 10, 2021, 8:12 AM IST

Updated : Feb 10, 2021, 12:26 PM IST

ಹಾಸನ: ಹಳೆ ಕಾರುಗಳನ್ನು ಕಳ್ಳತನ ಮಾಡಿ ದಾಖಲಾತಿಗಳನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮೊಯ್ದು ಕುನ್ನಿ ಅಲಿಯಾಸ್ ಆರೀಫ್(38), ಮಹಮ್ಮದ್ ರಫೀಕ್(30) ಆಫ್ರೋಜ್ ಖಾನ್(36) ಖಾದರ್ ಶರೀಫ್(46) ಸೈಯದ್ ಅಜ್ಮಲ್ (39) ಹಾಗೂ ಮಹಮ್ಮದ್ ಮುಬಾರಕ್(51) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಲ್ಲಿ 3 ಮಂದಿ ಆರೋಪಿಗಳು ಮೈಸೂರು ಜಿಲ್ಲೆಯ ಕೆಆರ್​​ನಗರ ತಾಲೂಕಿನ ಹುಣಸೂರು ಮೂಲದವರಾಗಿದ್ದು, ಇನ್ನುಳಿದ ಮೂವರು ಕೆಆರ್ ನಗರ ತಾಲೂಕಿನ ಹಂಪಾಪುರ ಗ್ರಾಮದವರಾಗಿದ್ದಾರೆ.

2 ವರ್ಷಗಳ ಹಿಂದೆ ಮಾರುತಿ ಕಾರು ಕಳ್ಳತನ:

2018 ಮಾರ್ಚ್ 26 ರಂದು ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಪುರಸಭೆ ಬಳಿ ಮಾರುತಿ 800 ಕಾರನ್ನು ಮಾಲೀಕ ಹರಳಹಳ್ಳಿಯ ಸತೀಶ್ ನಿಲ್ಲಿಸಿದ್ದು ತಮ್ಮ ಕೆಲಸ ಮುಗಿದ ಮೇಲೆ ವಾಪಸ್ ಮನೆಗೆ ಹೋಗುವ ಸಂದರ್ಭದಲ್ಲಿ ಕಾರು ಕಳ್ಳತನವಾಗಿತ್ತು. ಈ ಹಿನ್ನೆಲೆಯಲ್ಲಿ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಪ್ರಕರಣ ತನಿಖೆ ಹಂತದಲ್ಲಿಯೂ ಕೂಡ ಇತ್ತು. ಚುನಾವಣೆ ಮತ್ತು ಕೋವಿಡ್ 19 ರ ಹಿನ್ನೆಲೆಯಲ್ಲಿ ಪತ್ತೆ ಹಚ್ಚುವ ಕಾರ್ಯ ಸ್ವಲ್ಪ ತಡವಾಗಿತ್ತು.

ವಾಹನ ತಪಾಸಣೆ ವೇಳೆ ಸಿಕ್ಕಿಬಿದ್ದ ಆರೋಪಿಗಳು:

ಜ. 30 ರಂದು ಸಕಲೇಶಪುರ ತಾಲೂಕಿನ ಬಾಳು ಪೇಟೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಮಂಗಳೂರಿನ ಕಡೆಯಿಂದ ಬಂದಂತಹ ನಂಬರ್ ಪ್ಲೇಟ್ ಇಲ್ಲದ ಮಾರುತಿ 800 ಕಾರಣ ಪರಿಶೀಲನೆ ಮಾಡಿದಾಗ ದಾಖಲಾತಿ ಇಲ್ಲ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ನಂತರ ಕಾರಿನ ಚಾಲಕ ಹಾಗೂ ಸಹ ಪ್ರಯಾಣಿಕನ ವಿಚಾರಣೆಗೆ ಒಳಪಡಿಸಿದಾಗ, ಕಳ್ಳತನದ ಬಗ್ಗೆ ಒಂದೊಂದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಪಾರ್ಕಿಂಗ್ ಮಾಡುವ ಗಾಡಿಗಳು ಇವರಿಗೆ ಟಾರ್ಗೆಟ್:

ಮೊದಲ ಆರೋಪಿಯಾಗಿರುವ ಮೊಯ್ದು ಕುನ್ನಿ, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು, ಹಾಸನ, ಹೊಳೆನರಸೀಪುರ ಹಾಗೂ ಯಾತ್ರಾಸ್ಥಳವಾದ ಕುಕ್ಕೆಸುಬ್ರಹ್ಮಣ್ಯ ಹಾಗೂ ಇತರ ದೇವಸ್ಥಾನಗಳಲ್ಲಿ ನಿಲುಗಡೆಯಾಗುವ ವಾಹನಗಳನ್ನು ಟಾರ್ಗೆಟ್ ಮಾಡಿ ನಕಲಿ ಕೀ ಬಳಸಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ. ಮೂರನೇ ಆರೋಪಿಯಾಗಿರುವ ಆಫ್ರೋಜ್ ಖಾನ್ ಇವನ ಮೂಲಕ ಅಂಗಡಿಗಳಲ್ಲಿ ಇರುತ್ತಿದ್ದ ಅಪಘಾತವಾದ ಕಾರುಗಳ ಚಾರ್ಸಿ ಮತ್ತು ನಂಬರ್​ಗಳನ್ನು ಮೂಲ ಮಾಲೀಕರಿಂದ ವರ್ಗಾವಣೆಗೆ ಸಂಬಂಧಿಸಿದ ಅರ್ಜಿಗೆ ಸಹಿ ಹಾಕಿಸಿಕೊಂಡು ನಂತರ ಈ ವಾಹನಗಳಿಗೆ ವಿಮೆ ಮಾಡಿಸುತ್ತಿದ್ದ.

ನಾಲ್ಕನೇ ಆರೋಪಿ ಖಾದರನು ಆರ್​​ಟಿಓ ಕಚೇರಿಯಲ್ಲಿ ಆಗಬೇಕಾದ ನೋಂದಣಿ ಕಾರ್ಯವನ್ನು ಮಾಡಿಸಿದ ಬಳಿಕ ಬೇರೆಯವರಿಗೆ ಮಾರಾಟ ಮಾಡಲು 5 ಮತ್ತು 6ನೇ ಆರೋಪಿಯಾಗಿರುವ ಸೈಯದ್ ಅಜ್ಮಲ್ ಹಾಗೂ ಮಹಮದ್ ಮುಬಾರಕ್​ರನ್ನು ಬಳಸಿಕೊಂಡು ಕಾರುಗಳನ್ನು ಮಾರಾಟ ಮಾಡುತ್ತಿದ್ದ. ಈ ಜಾಲವನ್ನು ಭೇದಿಸುವಲ್ಲಿ ಸಕಲೇಶಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಸ್ಪಿ ಆರ್​ ಶ್ರೀನಿವಾಸ ಗೌಡ

15 ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು:

hassan
15 ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ಆರೋಪಿಗಳು ಕಳ್ಳತನ ಮಾಡಿ ಇತರರಿಗೆ ಮಾರಾಟ ಮಾಡಿದ್ದ ಕಾರುಗಳನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿಗಳಿಂದ ಸುಮಾರು 15 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಕಾರುಗಳಲ್ಲಿ ಸಕಲೇಶಪುರ ನಗರ ಠಾಣೆಗೆ ಸೇರಿದ ಒಂದು ಮಾರುತಿ ಕಾರು, ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ 7 ಮಾರುತಿ ಓಮಿನಿ, ಹೊಳೆ ನಗರ ಠಾಣೆಗೆ ಸೇರಿರುವ ಒಂದು ಬುಲೆರೋ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವ್ಯಾಪ್ತಿಗೆ ಸೇರಿರುವ ಎರಡು ಮಾರುತಿ ಒಮ್ನಿ, ಪುತ್ತೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಮೂರು ಒಮಿನಿ ಕಾರು ಹಾಗೂ ಒಂದು ಮಾರುತಿ-800 ಕಾರುಗಳನ್ನು ವಶಪಡಿಸಿಕೊಳ್ಳುವ ಜೊತೆಗೆ ಇನ್ನುಳಿದಂತೆ ಸುಮಾರು 5 ವಾಹನಗಳನ್ನು ಪತ್ತೆ ಹಚ್ಚಿದ್ದಾರೆ. ಒಟ್ಟಾರೆ ಸುಮಾರು 44 ಲಕ್ಷ ರೂಪಾಯಿ ಮೌಲ್ಯದ ವಾಹನಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Last Updated : Feb 10, 2021, 12:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.