ಹಾಸನ : ಆಶ್ರಯ ಮನೆ ನೀಡುವುದಾಗಿ ಲಂಚ ಸ್ವೀಕಾರ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಪಿಡಿಒವೊಬ್ಬರು ಸಿಕ್ಕಿಬಿದ್ದ ಘಟನೆ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.
ರಂಗಸ್ವಾಮಿ ಎಸಿಬಿ ಬಲೆಗೆ ಬಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ. ಎಂಟು ಸಾವಿರಕ್ಕೆ ಬೇಡಿಕೆಯಿಟ್ಟು 2ನೇ ಕಂತಿನ ಹಣವಾಗಿ ₹5000 ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾನೆ.
ಆಲೂರು ತಾಲೂಕಿನ ಕಣತೂರು ಗ್ರಾಪಂನಲ್ಲಿ ಈ ಘಟನೆ ನಡೆದಿದೆ. ಕಣತೂರು ಗ್ರಾಮದ ರವಿ ಎಂಬುವರು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ವಸತಿ ನಿವೇಶನವನ್ನು ಮಂಜೂರಾತಿ ಮಾಡಲು ಎಂಟು ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ರಂಗಸ್ವಾಮಿ, ಮೊದಲ ಕಂತಿನಲ್ಲಿ ₹3000 ಲಂಚ ಸ್ವೀಕಾರ ಮಾಡಿದ್ದ.
2ನೇ ಕಂತಿನ ಹಣವಾಗಿ ಐದು ಸಾವಿರ ರೂಪಾಯಿಗಳನ್ನು ಪಡೆಯುವ ವೇಳೆ ಎಸಿಬಿ ಡಿವೈಎಸ್ಪಿ ಕೃಷ್ಣಮೂರ್ತಿ ಮತ್ತು ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಭರತ್ ನೇತೃತ್ವದ ತಂಡ ದಾಳಿ ನಡೆಸಿ ಅಧಿಕಾರಿಯನ್ನು ಬಲೆಗೆ ಬೀಳಿಸಿದ್ದಾರೆ.
ಓದಿ: ಮರಳು ಸುಲಭವಾಗಿ ಸಿಗುವಂತೆ ನಿಯಮಾವಳಿ ಸರಳೀಕರಣ; ಮುರುಗೇಶ್ ನಿರಾಣಿ
ಆರೋಪಿ ರಂಗಸ್ವಾಮಿಯನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು, ನೊಂದ ವ್ಯಕ್ತಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.