ETV Bharat / state

ಪ್ರೇಯಸಿಯನ್ನೇ ಕೊಂದಿದ್ದ ಪ್ರಿಯಕರ ಅಂದರ್​ - kannadanews

ರಸ್ತೆ ಬದಿ ಸಿಕ್ಕ ಅಪರಿಚಿತ ಯುವತಿಯ ಶವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರೇಯಸಿಯನ್ನೇ ಕೊಂದಿದ್ದ ಪ್ರಿಯಕರ ಅಂದರ್​
author img

By

Published : Jun 9, 2019, 7:48 PM IST

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹುಲ್ಲಹಳ್ಳಿ ಕ್ಯಾನಳ್ಳಿ ರಸ್ತೆ ಪಕ್ಕ ಮೇ 21ರಂದು ಓರ್ವ ಯುವತಿಯ ಶವವೊಂದು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಯಿಂದ ಇದೊಂದು ಕೊಲೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿಗೆ ಬಲೆ ಬೀಸಿದ್ದರು.

ಆರೋಪಿ ಮೇ 11ರಂದು ಪ್ರವಾಸಕ್ಕೆಂದು ಬಂದು ಕತ್ತು ಹಿಸುಕಿ ಯುವತಿಯನ್ನು ಕೊಲೆಗೈದು ಸಕಲೇಶಪುರ ತಾಲೂಕಿನ ಹುಲ್ಲಹಳ್ಳಿ-ಕ್ಯಾನಹಳ್ಳಿ ನಡುವಿನ ರಸ್ತೆಯ ಪಕ್ಕದಲ್ಲಿ ಮೃತ ದೇಹವನ್ನು ಎಸೆದು ಅಲ್ಲಿಂದ ಪರಾರಿಯಾಗಿದ್ದ. 21 ದಿನದ ಬಳಿಕ ಯುವತಿಯನ್ನು ಕೊಲೆ ಮಾಡಿದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದ ಯುವತಿಯ ಹೆಸರು ಸುನೀತಾ ಎಂದು ತಿಳಿದುಬಂದಿದ್ದು ಆಕೆಯ ಪ್ರಿಯಕರ ಡೇವಿಡ್ ಕುಮಾರ್ ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.

ಪ್ರೇಯಸಿಯನ್ನೇ ಕೊಂದಿದ್ದ ಪ್ರಿಯಕರ ಅಂದರ್​

ಒಟ್ಟಾರೆ ಅಪರಿಚಿತ ಯುವತಿಯ ಶವ ಸಿಕ್ಕ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಮಗುವಿನ ವಿಚಾರಕ್ಕೆ ಮಾಡಿಕೊಂಡ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂಬುದು ತನಿಖೆಯಿಂದ ಹೊರಬಿದ್ದಿದೆ. 21 ದಿನದ ಬಳಿಕ ಪ್ರಕರಣದ ಆರೋಪಿಯನ್ನು ಜೈಲಿಗಟ್ಟುವಲ್ಲಿ ಸಕಲೇಶಪುರ ಪೊಲೀಸರು ಹಾಗೂ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

Intro:ಹಾಸನ: ರಸ್ತೆಬದಿ ಸಿಕ್ಕಾ ಪರಿಚಿತ ಯುವತಿಯ ಶವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹುಲ್ಲಹಳ್ಳಿ ಕ್ಯಾ ನಳ್ಳಿ ರಸ್ತೆ ಪಕ್ಕ ಮೇ 21ರಂದು ಓರ್ವ ಯುವತಿಯ ಶವವೊಂದು ಪತ್ತೆಯಾಗಿತ್ತು ತನಿಖೆ ಮುಂದುವರಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಯಲ್ಲಿ ಇದೊಂದು ಕೊಲೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿಗೆ ಬಲೆ ಬೀಸಿದ್ದರು.

21 ದಿನದ ಬಳಿಕ ಯುವತಿಯನ್ನು ಕೊಲೆ ಮಾಡಿದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದ ಯುವತಿಯನ್ನು ಸುನೀತ ಎಂದು ತಿಳಿದುಬಂದಿದ್ದು ಆಕೆಯ ಪ್ರಿಯಕರ ಡೇವಿಡ್ ಕುಮಾರ್ ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.

ಗ್ರಾಫಿಕ್ಸ್ : ಮಗುವಿಗಾಗಿ ನಡೆದ ಜಗಳವೇ ಕೊಲೆಗೆ ಕಾರಣ

ಬೆಂಗಳೂರಿನ ಕೆ.ಜಿ.ಹಳ್ಳಿ ನಿವಾಸಿಯಾಗಿದ್ದ ಸುನೀತಾರ ವರನ್ನು ತಮಿಳುನಾಡಿನ ವ್ಯಕ್ತಿಯೊಬ್ಬನಿಗೆ ಮದುವೆ ಮಾಡಿಕೊಡಲಾಗಿತ್ತು. ಕೌಟುಂಬಿಕ ಕಲಹದಿಂದ ಬೇಸತ್ತು ಅವರ ಪತಿಯನ್ನು ತೊರೆದು ತವರು ಮನೆಗೆ ಬಂದು ವಾಸವಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ನಿವಾಸಿಯಾಗಿರುವ ಡೇವಿಡ್ ಕುಮಾರ್ ನೊಂದಿಗೆ ಸ್ನೇಹಿತಳ ಪರಿಚಯವಾಗುತ್ತದೆ. ಪರಿಚಯ ಪ್ರೀತಿ ಆಗುತ್ತೆ. ಪರಸ್ಪರ ಪ್ರೀತಿ ಹುಟ್ಟಿ ಕೆಲವು ತಿಂಗಳುಗಳ ಕಾಲ ಪ್ರತ್ಯೇಕವಾಗಿ ಒಂದು ಮನೆಯಲ್ಲಿ ಲಿವಿಂಗ್ ಟುಗೆದರ್ ಆಗಿ ವಾಸವಿದ್ರು.

ಲಿವಿಂಗ್ ಟುಗೆದರ್ ಆಗಿ 7 ತಿಂಗಳ ಹಿಂದೆ ಸುನೀತಾ ಮಗುವಿಗೆ ಜನ್ಮ ನೀಡಿದ್ದು, ಆ ಮಗು ನನ್ನದಲ್ಲ ಎಂದು ಡೇವಿಡ್ ಕ್ಯಾತೆ ತೆಗಿತಾನೆ. ಅಲ್ಲದೇ ಡೇವಿಡ್ 2 ವರ್ಷಗಳ ಹಿಂದೆ ಬೇರೊಬ್ಬ ಯುವತಿಯನ್ನ ಮದುವೆ ಆಗಿರೋ ವಿಚಾರ ತಿಳಿದ ಸುನೀತಾ ಮಗುವಿಗೆ ಹಾಗೂ ನನಗೆ ಪ್ರತ್ಯೇಕ ಮನೆ ಮಾಡಿ ಜೀವನಾಂಶ ಕೊಡಬೇಕೆಂದು ಒತ್ತಾಯ ಮಾಡ್ತಾಳೆ. ಇದರಿಂದ ಬೇಸತ್ತ ಡೇವಿಡ್ ಕೊಲೆ ಮಾಡುವ ನಿರ್ಧಾರಕ್ಕೆ ಬಂದುಬಿಡುತ್ತಾನೆ

ಕಳೆದ ತಿಂಗಳ ಮೇ 11ರಂದು ಆಕೆಯನ್ನು ಮನವೊಲಿಸಿ ಪ್ರವಾಸಕ್ಕೆಂದು ಕರೆತಂದಿದ್ದ ಡೆವೀಡ್ ಕುಮಾರ್ ರಾತ್ರಿ ಆಕೆಯೊಂದಿಗೆ ಮತ್ತೆ ಜಗಳವಾಡ್ತಾನೆ. ಜಗಳದ ಮಧ್ಯೆ ಕತ್ತು ಹಿಸುಕಿ ಆಕೆಯನ್ನು ಕೊಲೆಗೈದು ಸಕಲೇಶಪುರ ತಾಲೂಕಿನ ಹುಲ್ಲಹಳ್ಳಿ-ಕ್ಯಾನಹಳ್ಳಿ ನಡುವಿನ ರಸ್ತೆಯ ಪಕ್ಕದಲ್ಲಿ ಮೃತ ದೇಹವನ್ನು ಎಸೆದು ಅಲ್ಲಿಂದ ಪರಾರಿಯಾಕ್ತಾನೆ.

ಗ್ರಾಫಿಕ್ಸ್ : ನಾಪತ್ತೆ ದೂರುನಿಂದ ಆರೋಪಿ ಪತ್ತೆ

ಡೇವಿಡ್ ಕುಮಾರ್ ಸುನೀತಾಳನ್ನು ಕೊಂದ ನಂತರ ಜೊತೆಗಿದ್ದ ಮಗುವನ್ನು ಬೆಂಗಳೂರಿಗೆ ತಂದು ಆಕೆಯ ತಾಯಿ ರಾಣಿಯ ಕೈಗೆ ಕೊಟ್ಟು ನಿಮ್ಮ ಮಗಳು ನೆಲಮಂಗಲದಲ್ಲಿ ಮಗುವನ್ನು ನನಗೆ ಕೊಟ್ಟು ಮಂಗಳೂರಿನ ಬಸ್ ಹತ್ತಿಹೋಗಿದ್ದಾಳೆ ಎಂದಿದ್ದ. ನಾಲ್ಕೈದು ದಿನವಾದರೂ ಕೂಡ ಆಕೆ ಎಲ್ಲಿದ್ದಾಳೆ ಎಂಬ ಸುಳಿವು ಸಿಗದ ಕಾರಣ ಸುನಿತಾಳ ತಾಯಿ ರಾಣಿ, ಮಗಳು ನಾಪತ್ತೆಯಾದ ಬಗ್ಗೆ ಕೆ.ಜಿ. ಹಳ್ಳಿಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣವನ್ನು ಬೆನ್ನ ಹತ್ತಿದ ಸಿಸಿಬಿ ಪೊಲೀಸರು ಸಕಲೇಶಪುರದಲ್ಲಿ ಸಿಕ್ಕ ಅಪರಿಚಿತ ಮಹಿಳೆಯ ಶವಕ್ಕೂ ಕಾಣೆಯಾದ ಪ್ರಕರಣಕ್ಕೂ ಹೊಂದಾಣಿಕೆ ಯಾದ ಹಿನ್ನಲೆಯಲ್ಲಿ, ಡೇವಿಡ್ ಕುಮಾರನನ್ನು ವಿಚಾರಣೆಗೊಳಪಡಿಸಿದಾಗ ನಡೆದ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಬೆಂಗಳೂರು ಬ್ಯಾಟರಾಯನಪುರ ನಿವಾಸಿ ಆರೋಪಿ ಡೇವಿಡ್ ಕುಮಾರ್ ಎಂಬಾತ ಮೆಕಾನಿಕ್ ಕೆಲಸ ಮಾಡುತ್ತಿದ್ದ. ಈತ ತನ್ನ ಪ್ರೇಯಸಿ ಸುನೀತಾ ಎಂಬಾಕೆಯನ್ನು ಆಕೆಯ ಮಗುವಿನ ಸಮೇತ ಕಳೆದ ಮೇ 11 ರಂದು ಸಕಲೇಶಪುರಕ್ಕೆ ಅಪಹರಿಸಿ ಕರೆದೊಯ್ದು ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಕಾರಿನಲ್ಲಿ ತಾಲೂಕಿನ ಹುಲ್ಲಹಳ್ಳಿ ಸಮೀಪ ರಸ್ತೆ ಬದಿಯಲ್ಲಿ ಬಿಸಾಡಿದ್ದ.

ಒಟ್ಟಾರೆ ಅಪರಿಚಿತ ಯುವತಿಯ ಶವ ಸಿಕ್ಕ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಮಗುವಿನ ವಿಚಾರಕ್ಕೆ ಮಾಡಿಕೊಂಡ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, 21 ದಿನದ ಬಳಿಕ ಪ್ರಕರಣವನ್ನು ಬಿಸಿ ಆರೋಪಿಯನ್ನು ಜೈಲಿಗಟ್ಟುವ ಲ್ಲಿ ಸಕಲೇಶಪುರ ಪೊಲೀಸರು ಹಾಗೂ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.