ETV Bharat / state

ಹಾಸನದಲ್ಲಿಂದು 31 ಕೊರೊನಾ ಕೇಸ್ ಪತ್ತೆ

author img

By

Published : Jun 28, 2020, 3:30 PM IST

ಇಂದು ಒಂದೇ ದಿನ ಹಾಸನ ಜಿಲ್ಲೆಯಲ್ಲಿ 31 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

Hassan
Hassan

ಹಾಸನ: ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ 31 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

 ಪ್ರಕಟಣೆ
ಪ್ರಕಟಣೆ

ಸವಿತಾ ಸಮಾಜದ ಮೂರು ಮಂದಿ, ಹೊರ ರಾಜ್ಯದಿಂದ ಬಂದ ಮೂವರು, ಶಸ್ತ್ರಚಿಕಿತ್ಸೆಗೆ ಬಂದ ನಾಲ್ವರು ಮತ್ತು ಐದು ಮಂದಿ ಪೌರ ಕಾರ್ಮಿಕರು ಸೇರಿದಂತೆ ಒಟ್ಟು 31 ಮಂದಿಗೆ ಇಂದು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಆಲೂರು ತಾಲೂಕಿನಲ್ಲಿ 1 ಪ್ರಕರಣ ಪತ್ತೆಯಾದರೆ, ಅರಕಲಗೂಡು ತಾಲ್ಲೂಕಿನಲ್ಲಿ 2, ಅರಸೀಕೆರೆಯಲ್ಲಿ 11 ಪ್ರಕರಣಗಳು, ಹಾಸನ ತಾಲೂಕಿನಲ್ಲಿ 2 ಪ್ರಕರಣಗಳು, ಹೊಳೆನರಸೀಪುರದಲ್ಲಿ 13, ಹಾಗೂ ಇತರೆ ಜಿಲ್ಲೆಗಳಿಂದ ಹಾಸನದಲ್ಲಿ ದಾಖಲಾಗಿರುವ ಎರಡು ಪ್ರಕರಣಗಳು ಸೇರಿದಂತೆ ಒಟ್ಟು 31 ಪ್ರಕರಣಗಳು ಇಂದು ಕಂಡುಬಂದಿದೆ.

ಜಿಲ್ಲೆಯಲ್ಲಿ ಇಂದು 380 ಮಂದಿಯ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿದ್ದು, 238 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಹೋಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.