ETV Bharat / state

ಹಾಸನ ಜಿಲ್ಲೆಯಲ್ಲಿ ಇಂದು 273 ಕೊರೊನಾ ಕೇಸ್​​ : ಆರೋಗ್ಯಾಧಿಕಾರಿ ಸತೀಶ್ - ಹಾಸನ ಕೊರೊನಾ

ಹಾಸನ ಜಿಲ್ಲೆಯಲ್ಲಿ ಇಂದು 273 ಜನರಿಗೆ ಕೊರೊನಾ ಕಾಣಿಸಿಕೊಂಡಿದೆ. ಈವರೆಗೆ ಜಿಲ್ಲೆಯಲ್ಲಿ ಕೊರೊನಾದಿಂದಾಗಿ 232 ಜನ ಪ್ರಾಣ ಬಿಟ್ಟಿದ್ದಾರೆ.

273 Corona case today in Hassan district
ಹಾಸನ ಜಿಲ್ಲೆಯಲ್ಲಿ ಇಂದು 273 ಕೊರೊನಾ ಕೇಸ್​​ : ಆರೋಗ್ಯಾಧಿಕಾರಿ ಸತೀಶ್
author img

By

Published : Sep 9, 2020, 4:16 PM IST

ಹಾಸನ : ಜಿಲ್ಲೆಯಲ್ಲಿ ಇಂದು ಹೊಸದಾಗಿ 273 ಕೊರೊನಾ‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 10660 ಕ್ಕೆ ಏರಿಕೆಯಾಗಿದೆ. 4 ಸಾವಿನೊಂದಿಗೆ ಮೃತರ ಸಂಖ್ಯೆ 232 ತಲುಪಿದೆ ಎಂದು ಆರೋಗ್ಯಾಧಿಕಾರಿ ಸತೀಶ್ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಇಂದು ಬಿಡುಗಡೆಯಾದ 263 ಜನರು ಸೇರಿ ಈವರೆಗೆ 7505 ಮಂದಿ ಗುಣಮುಖರಾಗಿದ್ದಾರೆ. 2923 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 52 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ದಾಖಲಾಗಿರುವ ಕೊರೊನಾ ಪ್ರಕರಣದಲ್ಲಿ ಆಲೂರು-9, ಅರಕಲಗೂಡು-45, ಅರಸೀಕೆರೆ-35, ಬೇಲೂರು-13, ಚನ್ನರಾಯಪಟ್ಟಣ-25, ಹಾಸನ-113, ಹೊಳೆನರಸೀಪುರ-17, ಸಕಲೇಶಪುರ-13, ಇತರೆ- 3 ಒಟ್ಟು 273 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಕೊರೋನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಯಾರಿಗಾದರೂ ಉಸಿರಾಟ ತೊಂದರೆ, ಜ್ವರ, ಶೀತಾ, ನೆಗಡಿ, ಕೆಮ್ಮು ಏನಾದರೂ ಇದ್ದರೆ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಎಲ್ಲಾರು ಸಹಕರಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯ ತಾಲ್ಲೂಕುವಾರು ಕೊರೊನಾ ಪ್ರಕರಣಗಳು :
1. ಆಲೂರು - 346.
2. ಅರಕಲಗೂಡು- 1012.
3. ಅರಸೀಕೆರೆ - 1401.
4. ಬೆಲೂರು - 825.
5. ಚನ್ನರಾಯಪಟ್ಟಣ 1347.
7. ಹಾಸನ 4445.
8. ಹೊಳೆನರಸೀಪುರ 857.
9. ಸಕಲೇಶಪುರ 359.
10. ಇತರ 68 ಪ್ರಕರಣಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.