ETV Bharat / state

ಹಾಸನದಲ್ಲಿ 10 ಶಿಕ್ಷಕರಿಗೆ ಕೊರೊನಾ: ಆತಂಕದಲ್ಲಿ ವಿದ್ಯಾರ್ಥಿಗಳು - ಶಿಕ್ಷಕರಿಗೆ ಕೊರೊನಾ ಸೋಂಕು

ಹಾಸನ ಜಿಲ್ಲೆಯ ಪ್ರಾಥಮಿಕ ಶಾಲೆಯ ಏಳು ಹಾಗೂ ಪ್ರೌಢ ಶಾಲೆಯ ಮೂವರು ಶಿಕ್ಷಕರಿಗೆ ಸೋಂಕು ತಗುಲಿದೆ. ಅವರ ಸಂಪರ್ಕಕ್ಕೆ ಬಂದಿದ್ದ ಶಿಕ್ಷಕರನ್ನು ಪರೀಕ್ಷೆಗೆ ಒಳಪಡಿಸಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ಪ್ರಕಾಶ್ ಹೇಳಿದರು.

DDPI Prakash
ಡಿಡಿಪಿಐ ಪ್ರಕಾಶ್
author img

By

Published : Jan 6, 2021, 4:54 PM IST

ಹಾಸನ: ಶಾಲೆ ಪ್ರಾರಂಭವಾದಾಗಿನಿಂದ ಈವರೆಗೂ ಹತ್ತು ಶಿಕ್ಷಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಲ್ಲಿ ಆತಂಕ ಮನೆ ಮಾಡಿದೆ.

ಇದನ್ನೂ ಓದಿ...5 ವರ್ಷ ಶಾಸಕರು ಹೇಳಿದಂತೆ ಕೇಳುತ್ತೇವೆ: ಶಿವಲಿಂಗೇಗೌಡ ಸಮ್ಮುಖದಲ್ಲಿ ಗ್ರಾ.ಪಂ ಸದಸ್ಯರಿಂದ ಆಣೆ -ಪ್ರಮಾಣ

ಜಿಲ್ಲೆಯ ಪ್ರಾಥಮಿಕ ಶಾಲೆಯ ಏಳು ಹಾಗೂ ಪ್ರೌಢ ಶಾಲೆಯ ಮೂವರು ಶಿಕ್ಷಕರಿಗೆ ಸೋಂಕು ತಗುಲಿದೆ. ಅವರ ಸಂಪರ್ಕಕ್ಕೆ ಬಂದಿದ್ದ ಶಿಕ್ಷಕರನ್ನು ಪರೀಕ್ಷೆಗೆ ಒಳಪಡಿಸಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಹಾಸನ ತಾಲೂಕಿನ 6, ಚನ್ನರಾಯಪಟ್ಟಣದ ಇಬ್ಬರು, ಹೊಳೆನರಸೀಪುರದ ಇಬ್ಬರು ಶಿಕ್ಷಕರಿಗೆ ಸೋಂಕು ತಗುಲಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಕಾಶ್ ತಿಳಿಸಿದರು.

ಡಿಡಿಪಿಐ ಪ್ರಕಾಶ್

ಶಾಲೆ ಆರಂಭಕ್ಕೂ ಮುನ್ನ ಮೂವರು ಶಿಕ್ಷಕರಿಗೆ ಸೋಂಕು ಹರಡಿದ್ದ ಹಿನ್ನೆಲೆಯಲ್ಲಿ ಅವರು ಶಾಲೆಗೆ ಬಂದಿರಲಿಲ್ಲ. ಉಳಿದ ಸೋಂಕಿತ ಶಿಕ್ಷಕರ ವರದಿ ನೆಗೆಟಿವ್​ ಬಂದಿತ್ತು. ಹೀಗಾಗಿ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅದಾದ ನಂತರ ಸೋಂಕು ಕಾಣಿಸಿಕೊಂಡಿದ್ದು, ಶಾಲೆಗೆ ಸ್ಯಾನಿಟೈಸ್​ ಮಾಡಲಾಗುತ್ತಿದೆ ಎಂದರು.

ಶಾಲೆಗಳಿಗೆ ಸ್ಯಾನಿಟೈಸ್​​​ ಮಾಡುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮಕ್ಕಳಿಗೆ ರಜೆ ನೀಡಲಾಗಿದೆ. ಮತ್ತೊಮ್ಮೆ ಪರೀಕ್ಷೆಯ ಬಳಿಕ ವರದಿಯ ಆಧಾರದ ಮೇಲೆ ಶಾಲೆಗೆ ಬರಬೇಕಾ ಅಥವಾ ಬೇಡವೇ ಎಂಬುದನ್ನು ಶಿಕ್ಷಕರಿಗೆ ತಿಳಿಸಲಾಗುವುದು ಎಂದರು. ಶಿಕ್ಷಕರಿಂದ ಮಕ್ಕಳಿಗೆ ಸೋಂಕು ಹರಡಿಲ್ಲ. ಹಾಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.