ETV Bharat / state

ಸಿಎಂ ಪರಿಹಾರ ನಿಧಿಗೆ ಜೈನ ಸಮುದಾಯದಿಂದ 1 ಲಕ್ಷ ರೂ. ದೇಣಿಗೆ - ಜೈನ ಸಮುದಾಯ

ಜೈನ ಸಮುದಾಯದಿಂದ ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಶಾಲು, ಟವಲ್ ಹಾಗೂ ನಿತ್ಯ ಬಳಕೆ ಮಾಡುವ ವಸ್ತುಗಳನ್ನು ವಿತರಿಸಿದರು.

CM's relief fund
ಮುಖ್ಯಮಂತ್ರಿ ಪರಿಹಾರ ನಿಧಿಗೆ ಜೈನ ಸಮುದಾಯದಿಂದ 1 ಲಕ್ಷ ದೇಣಿಗೆ
author img

By

Published : Apr 6, 2020, 7:17 PM IST

ಹಾಸನ: ಮಹಾವೀರರ ಜಯಂತಿ ನಿಮಿತ್ತ ನಗರದ ವಾಣಿವಿಲಾಸ ಶಿಕ್ಷಣ ಸಂಸ್ಧೆ ಆವರಣದಲ್ಲಿ ಜೈನ ಸಮುದಾಯದಿಂದ ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಶಾಲು, ಟವಲ್ ಹಾಗೂ ನಿತ್ಯ ಬಳಕೆ ಮಾಡುವ ವಸ್ತುಗಳನ್ನು ವಿತರಿಸಿದರು.

ನಂತರ ಮಾತನಾಡಿದ ಜೈನ ಸಮುದಾಯದ ಸದಸ್ಯ ವಿನಯ್, ಕೊರೊನಾ ಎಂಬ ಮಹಾಮಾರಿ ದೇಶದೆಲ್ಲಡೆ ಹರಡಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿರುವುದರಿಂದ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ದುಡಿಮೆ ಇಲ್ಲದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಂತವರನ್ನು ಗುರುತಿಸಿ ನಮ್ಮ ಸಮುದಾಯದಿಂದ ಕೈಲಾದಷ್ಟು ಸಹಾಯ ಮಾಡುತ್ತಿರುವುದಾಗಿ ಹೇಳಿದರು.

ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಯವರ ಪರಿಹಾರ ನಿಧಿಗೆ ಜೈನ ಸಮುದಾಯದ ವತಿಯಿಂದ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಲಾಯಿತು. ಸಮಾಜದ ಮುಖಂಡರು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಶಾಸಕ ಪ್ರೀತಂ ಜೆ ಗೌಡ ಹಾಗೂ ಅಪರ ಜಿಲ್ಲಾಧಿಕಾರಿಯವರಿಗೆ ಒಂದು ಲಕ್ಷ ರೂಗಳ ಚೆಕ್‍ ಹಸ್ತಾಂತರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.