ಗದಗ : ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ತಾಳಿ ಅಡವಿಟ್ಟು ಟಿವಿ ಕೊಡಿಸಿದ ಮಹಾತಾಯಿ ಕುರಿತು ಈಟಿವಿ ಭಾರತದಲ್ಲಿ ವರದಿ ಪ್ರಕಟವಾದ ನಂತರ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ.
ಜಿಲ್ಲೆಯ ರಡ್ಡೆರ ನಾಗನೂರ ಗ್ರಾಮದ ಕಸ್ತೂರಿ ಎಂಬ ಮಹಿಳೆ ಬಗ್ಗೆ ಜುಲೈ 30 ರಂದು "ತಾಳಿ ಅಡವಿಟ್ಟು ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಟಿವಿ ಕೊಡಿಸಿದ ಮಹಾತಾಯಿ" ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ವಿಸ್ತೃತ ವರದಿ ಪ್ರಸಾರ ಮಾಡಿತ್ತು.
ಬಳಿಕ ಆ ಮಹಿಳೆಗೆ ಸಹಾಯ ಮಾಡಲು ಅನೇಕ ದಾನಿಗಳು ಮುಂದಾಗಿದ್ದು, ಇಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೂಗೌಡ ಕೆಂಚನಗೌಡರು ₹10 ಸಾವಿರ ನಗದು ಹಾಗೂ ಸ್ಕೂಲ್ ಬ್ಯಾಗ್, ನೋಟ್‌ಬುಕ್ ನೀಡಿ ಸಹಾಯ ಮಾಡಿದ್ದಾರೆ.
ತಾಳಿ ಅಡವಿಟ್ಟು ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಟಿವಿ ಕೊಡಿಸಿದ ಮಹಾತಾಯಿ
ಇದರ ಜೊತೆಗೆ ಗದಗ ಯೂಥ್ ಕಾಂಗ್ರೆಸ್ ಕಮಿಟಿ ವತಿಯಿಂದ ₹10 ಸಾವಿರ ನಗದು ಹಣ ಸಹಾಯ ಮಾಡಿ ಮಹಿಳೆ ಕಸ್ತೂರಿಯವರಿಗೆ ಧೈರ್ಯ ತುಂಬಿದ್ದಾರೆ.