ETV Bharat / state

ಬರ್ತ್​ ಡೇ ಅಂದ್ರೆನೇ ಭಯ ಆಗ್ತಿದೆ, ಮೃತರ ಕುಟುಂಬಗಳಿಗೆ ಅಗತ್ಯ ಸಹಾಯ ಮಾಡುವೆ: ಯುವಕರ ಪೋಷಕರಿಗೆ ಯಶ್​ ಸಾಂತ್ವನ - ಸೂರಣಿ ಘಟನೆ

ಹುಟ್ಟುಹಬ್ಬದ ಹಿನ್ನೆಲೆ ಕಟೌಟ್​ ಹಾಕುವಾಗ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಯುವಕರ ಮನೆಗೆ ನಟ​ ಯಶ್ ಭೇಟಿ ನೀಡಿದ್ದರು. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಈ ರೀತಿಯ ಅಭಿಮಾನ ಬೇಡ. ಎಲ್ಲರೂ ಚೆನ್ನಾಗಿರಿ ಎಂದು ಸಲಹೆ ನೀಡಿದರು.

Yash Fans Death
Yash Fans Death
author img

By ETV Bharat Karnataka Team

Published : Jan 8, 2024, 7:39 PM IST

Updated : Jan 8, 2024, 10:06 PM IST

ನಟ ಯಶ್

ಗದಗ: ಜಿಲ್ಲೆಯ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿದ ಚಿತ್ರನಟ ಯಶ್,​ ವಿದ್ಯುತ್​ ಅವಘಡದಲ್ಲಿ ಮೃತಪಟ್ಟ ಯುವಕರ ಕುಟುಂಬದವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಮೃತ ಮೂವರು ಅಭಿಮಾನಿಗಳ ಮನೆಗೆ ತೆರಳಿದ ಅವರು, ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಗೆ ಧೈರ್ಯ ತುಂಬಿದರು.

ಗೋವಾದಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಯಶ್​, ನೇರವಾಗಿ ಕಾರಿನಲ್ಲಿ ಗದಗ ಜಿಲ್ಲೆಯ ಸೂರಣಗಿ ಗ್ರಾಮಕ್ಕೆ ಆಗಮಿಸಿದ್ದರು. ನೂಕು ನುಗ್ಗಲಿನ ನಡುವೆ ಮೃತ ಯುವಕರ ಮನೆ ಮನೆಗೆ ತೆರಳಿ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಸಾಂತ್ವನ ಹೇಳಿದರು. ಈ ವೇಳೆ ಪೋಷಕರು ತಮ್ಮ ನೋವನ್ನು ತೋಡಿಕೊಂಡರು.

ಅವರ ಆಗಮನ ಹಿನ್ನೆಲೆ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದ್ದುದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಗ್ರಾಮದ ಹಲವೆಡೆ ಬ್ಯಾರಿಕೇಡ್ ಅಳವಡಿಸಿದ್ದರು. ಸ್ಥಳದಲ್ಲಿ ಎಸ್​ಪಿ, ಡಿವೈಎಸ್ಪಿ, ಐದು ಜನ ಸಿಪಿಐ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಹಾಜರಿದ್ದರು.

ಸಾಂತ್ವನದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯಶ್, ಈ ರೀತಿ ಆಗಬಹುದು ಎಂಬ ಕಾರಣದಿಂದ ನಾನು ಸರಳವಾಗಿ ಹುಟ್ಟುಹಬ್ಬ ಆಚರಿಸಲು ತೀರ್ಮಾನಿಸಿದ್ದೆ. ಈಗ ಅದನ್ನೆಲ್ಲ ಮಾತನಾಡುವ ಸಮಯವಲ್ಲ. ಅವರ ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡುವೆ. ಏನೇ ಪರಿಹಾರ ಕೊಟ್ಟರು ಅವರ ಮಕ್ಕಳು ವಾಪಸ್ ಬರುವುದಿಲ್ಲ. ನಾನು ಇಲ್ಲಿ ಬಂದಿರುವುದು ಅವರ ತಂದೆ-ತಾಯಿಗಾಗಿ. ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡುವೆ. ಅಭಿಮಾನ ತೋರಿಸುವುದಾದರೆ ನಿಮ್ಮ ಬದುಕಲ್ಲಿ ಖುಷಿಯಾಗಿರಿ, ನಮ್ಮ ಬಗ್ಗೆ ಯೋಚನೆ ಮಾಡಬೇಡಿ. ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಇದೆಲ್ಲ ಬಿಟ್ಟುಬಿಡಿ. ಈ ರೀತಿ ಅಭಿಮಾನ ವ್ಯಕ್ತಪಡಿಸಬೇಕೆಂದು ಯಾರೂ ಇಷ್ಟ ಪಡುವುದಿಲ್ಲ. ಈಗ ನಾನು ಬರುವಾಗಲೂ ಬೈಕ್​​ನಲ್ಲಿ ಚೇಸ್ ಮಾಡಿಕೊಂಡು ಬರುತ್ತಿದ್ದರು. ನನಗೆ ಈ ರೀತಿಯ ಅಭಿಮಾನ ಬೇಡವೇ ಬೇಡ ಎಂದರು.

ಮೃತ ಯುವಕರ ಪೋಷಕರಿಗೆ ನಟ ಯಶ್​ ಸಾಂತ್ವನ

ಕಟೌಟ್ ಕಟ್ಟಬೇಡಿ ಎಂದು ಹೇಳಿದರೆ ಬೇಜಾರು ಮಾಡಿಕೊಳ್ತೀರಿ. ಮತ್ತೆ ಕರೊನಾ ಪ್ರಕರಣಗಳು ಹೆಚ್ಚುತ್ತಿವೆ ಎಂಬ ವರದಿಗಳಿಂದ ಈ ಬಾರಿ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೆ. ನಾನು ಗೋವಾದಲ್ಲಿದ್ದೆ. ಈ ಸುದ್ದಿ ಕೇಳಿದಾಗ ಬಹಳ ಬೇಜಾರ್ ಆಯಿತು. ಕಳೆದ ವರ್ಷ ಮನೆ ಬಳಿ ಬೆಂಕಿ ಹಂಚಿಕೊಂಡಿದ್ದರು. ಇದೀಗ ಈ ದುರ್ಘಟನೆ ಆಯಿತು. ಹಾಗಾಗಿ ನನಗೆ ಬರ್ತ್​ಡೇ ಅಂದ್ರೇನೇ ಭಯ ಬಂದು ಬಿಟ್ಟಿದೆ ಎಂದು ಯಶ್​ ಬೇಸರ ವ್ಯಕ್ತಪಡಿಸಿದರು.

ಬಳಿಕ ಸೂರಣಗಿ ಗ್ರಾಮದಿಂದ ಯಶ್ ಗದಗ ಜಿಮ್ಸ್ ಆಸ್ಪತ್ರೆಗೆ ತೆರಳಿ, ಕಟೌಟ್ ನಿಲ್ಲಿಸುವಾಗ ವಿದ್ಯುತ್ ತಂತಿ ತಗುಲಿ ಗಾಯಗೊಂಡಿರುವ ಯುವಕರ ಆರೋಗ್ಯವನ್ನು ವಿಚಾರಿಸಿದರು. ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಜುನಾಥ ಹಾಗೂ ಹನಮಂತಪ್ಪ ಅವರನ್ನು ಯಶ್ ಭೇಟಿಯಾಗಿ ಧೈರ್ಯ ತುಂಬಿದರು. ಇದೇ ವೇಳೆ ಗಾಯಾಳು ಯುವಕರ ಪೋಷಕರಿಗೂ ನಟ ಧೈರ್ಯ ತುಂಬಿದರು.

ಇದನ್ನೂ ಓದಿ: ಗದಗ: ಯಶ್‌ ಬರ್ತ್​ಡೇ ಕಟೌಟ್‌ ನಿಲ್ಲಿಸುತ್ತಿದ್ದಾಗ ದುರಂತ; ವಿದ್ಯುತ್ ತಗುಲಿ ಮೂವರು ಯುವಕರು ಸಾವು

Last Updated : Jan 8, 2024, 10:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.