ಗದಗ: ಕ್ಷುಲ್ಲಕ ಕಾರಣಕ್ಕೆ 2 ತಿಂಗಳ ಹಸುಗೂಸು ಬಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ಬಾಣಂತಿಯೋರ್ವಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಕಾಶಿ ವಿಶ್ವನಾಥ್ ನಗರದ ನಿವಾಸಿ ಪೂಜಾ ಕುನಸಿ (23) ಮೃತರು.
ಸೋಮವಾರ ಮನೆಯರೆಲ್ಲ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿದ್ದರಂತೆ. ಈ ವೇಳೆ ಮನೆಯಲ್ಲಿ ಓರ್ವ ಅಜ್ಜಿ ಮತ್ತು ಬಾಣಂತಿ ಮಾತ್ರ ಇದ್ದರು. ಇದ್ದಕ್ಕಿದ್ದಂತೆ ಈಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳಂತೆ. ತಕ್ಷಣ ಅಕ್ಕಪಕ್ಕದ ಮನೆಯವರು ನೇಣುಬಿಗಿದ ಸ್ಥಿತಿಯಲ್ಲಿದ್ದ ಆಕೆಯನ್ನ ರಕ್ಷಣೆ ಮಾಡಿದ್ದರು. ಬಳಿಕ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ, ಶುಕ್ರವಾರ ಕೊನೆಯುಸಿರೆಳದಿದ್ದಾಳೆ ಎಂದು ತಿಳಿದುಬಂದಿದೆ. ಗಂಡನ ಮನೆಗೆ ಹೋಗಬೇಕೆನ್ನುವುದು ಆಕೆಯ ಒತ್ತಾಯವಾಯವಾಗಿತ್ತಂತೆ. ಆದರೆ ಆಕೆ ಬಾಣಂತಿಯಾಗಿದ್ದರಿಂದ ಮೂರು ತಿಂಗಳ ಬಳಿಕ ಕಳಿಸುವುದಾಗಿ ತವರು ಮನೆಯವರು ಹೇಳಿದ್ದರಂತೆ. ಇದೇ ವಿಚಾರಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ರಾಜೀವ್ ಗಾಂಧಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.
ಇದನ್ನೂ ಓದಿ: ವೃತ್ತಿಯಲ್ಲಿ ಎಎಸ್ಐ.. ನಾಲ್ಕು ವರ್ಷದಿಂದ ಅನಾಥ ಶವಗಳ ಅಂತ್ಯಕ್ರಿಯೆ ನಡೆಸುತ್ತಿರುವ ಮಹಿಳಾ ಪೊಲೀಸ್!