ETV Bharat / state

ಮಹಿಳೆ ಮೇಲೆ ತಾ.ಪಂ - ಗ್ರಾಪಂ ಸದಸ್ಯರಿಂದ ಹಲ್ಲೆ: ಗೂಂಡಾವರ್ತನೆ ಆರೋಪ - Woman assaulted news

ಕಾಲಕಾಲೇಶ್ವರ ಗ್ರಾಮದ ಸುಮಿತ್ರಾ ಶಂಕ್ರಪ್ಪ ಹೂಗಾರ ಎಂಬುವವರ ಬೆಲೆಬಾಳುವ ಹೊಲದ ಮೇಲೆ ತಾಲೂಕು ಪಂಚಾಯಿತಿ ಸದಸ್ಯ ಶಶಿಧರ ಹೂಗಾರ ಹಾಗೂ ಅವನ ಸಹೋದರ ಕಳಕಪ್ಪ ಹೂಗಾರ ಅವರ ಕಣ್ಣು ಬಿದ್ದಿತ್ತು ಎನ್ನಲಾಗಿದೆ. ಕಳೆದ ಎರಡು ವರ್ಷದಿಂದ ತಮಗೆ ಹೊಲ ಮಾರಾಟ ಮಾಡುವಂತೆ ಮಹಿಳೆಯ ದುಂಬಾಲು ಬಿದ್ದಿದ್ದರು ಎಂಬ ಆರೋಪವೂ ಕೇಳಿ ಬಂದಿದೆ.

panchayat member
ತಾ.ಪಂ ಸದಸ್ಯ
author img

By

Published : May 11, 2020, 11:35 AM IST

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮದ ತಾಲೂಕು ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ ಶಶಿಧರ ಹೂಗಾರ ಹಾಗೂ ಗ್ರಾ.ಪಂ ಸದಸ್ಯ ಕಳಕಪ್ಪ ಹೂಗಾರ ಅದೇ ಗ್ರಾಮದ ಮಹಿಳೆಯೆ ಮತ್ತು ಆಕೆಯ ಗಂಡನ ಮೇಲೆ ಹಲ್ಲೆ ಮಾಡಿ ಗೂಂಡಾವರ್ತನೆ ಪ್ರದರ್ಶಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಾಲಕಾಲೇಶ್ವರ ಗ್ರಾಮದ ಸುಮಿತ್ರಾ ಶಂಕ್ರಪ್ಪ ಹೂಗಾರ ಎಂಬುವರ ಬೆಲೆಬಾಳುವ ಹೊಲದ ಮೇಲೆ ತಾಲೂಕು ಪಂಚಾಯಿತಿ ಸದಸ್ಯ ಶಶಿಧರ ಹೂಗಾರ ಹಾಗೂ ಅವನ ಸಹೋದರ ಕಳಕಪ್ಪ ಹೂಗಾರ ಅವರ ಕಣ್ಣು ಬಿದ್ದಿತ್ತು. ಕಳೆದ ಎರಡು ವರ್ಷದಿಂದ ತಮಗೆ ಹೊಲ ಮಾರಾಟ ಮಾಡುವಂತೆ ಮಹಿಳೆಯ ದುಂಬಾಲು ಬಿದ್ದಿದ್ದರಂತೆ. ಆದ್ರೆ ನಾವು ಮಾರಾಟ ಮಾಡುವುದಿಲ್ಲ. ಇರುವುದು ಒಂದೇ ಹೊಲ ಅದರಿಂದ ಉಪಜೀವನ ಸಾಗಿಸುತ್ತಿದ್ದೇವೆ ಅಂತ ಹೇಳಿದ್ದಾರೆ‌‌.

ಆದ್ರೆ ಶನಿವಾರ ಬೆಳಗ್ಗೆ ಸುಮಿತ್ರಾ ಅವರ ಮನೆಗೆ ಹೋಗಿ ತಾಪಂ ಸದಸ್ಯ ಶಶಿಧರ ಹೂಗಾರ, ಸುಮಿತ್ರಾಳ ಸೀರೆ ಎಳೆದಾಡಿ ಮಾನಹಾನಿ ಯತ್ನ ಹಾಗೂ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಕಳಕಪ್ಪ ಹೂಗಾರ, ಸುಭಾಶ್ ಹೂಗಾರ, ರೇಖಾ ಹೂಗಾರ, ಶೋಭಾ ಹೂಗಾರ, ಪ್ರೀತಿ ಹೂಗಾರ ಎಂಬುವವರು ಸುಮಿತ್ರಾ ಹೂಗಾರ ಅವರ ಗಂಡ ಶಂಕ್ರಪ್ಪ ಹೂಗಾರ ಹಾಗೂ ಅವರ ಮಗ ಪ್ರಶಾಂತ ಹೂಗಾರ ಅವರ ಮೇಲೆ ಬಡಿಗೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ‌ಹಲ್ಲೆ ಮಾಡಿರುವ ಆರೋಪದಡಿ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಕಲಂ 143, 147, 148, 323, 354, 504, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾ.ಪಂ ಸದಸ್ಯ ಕಳಕಪ್ಪ ಹೂಗಾರ ಆಶ್ರಯಮನೆಯ ಫಲಾನುಭವಿಯೊಬ್ಬರಿಗೆ 30 ಸಾವಿರ ಲಂಚ ಕೇಳಿದ ಆಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಕಾಲಕಾಲೇಶ್ವರ ಗ್ರಾಮಸ್ಥರನ್ನು ಸಣ್ಣ ಸಣ್ಣ ವಿಷಯಕ್ಕೂ ಧಮಕಿ ಹಾಕಿ, ಪೊಲೀಸ್ ಠಾಣೆಗೆ ಕರೆಯಿಸಿ, ಅಲ್ಲಿ ಅವರ ಪ್ರಭಾವ ಬಳಸಿ ಅವರಿಗೆ ಬಡಿಸುತ್ತಿದ್ದ ಎನ್ನುವ ಆರೋಪಗಳೂ ಸಹ ಇದೇ ವೇಳೆ ಕೇಳಿ ಬಂದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.