ETV Bharat / state

ಗದಗದಲ್ಲಿ ಆರ್ಭಟಿಸಿದ ವರುಣ.. ಸಿಡಿಲು ಬಡಿದು ಇಬ್ಬರು ದುರ್ಮರಣ - Two died due to thunderbolts

ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

Two died due to thunderbolts in Gadag
ಸಾಂದರ್ಭಿಕ ಚಿತ್ರ
author img

By

Published : Apr 17, 2022, 6:45 AM IST

ಗದಗ: ಬೇಸಿಯಲ್ಲೂ ವರುಣ ಅಬ್ಬರಿಸಿದ್ದಾನೆ. ಜಿಲ್ಲೆಯ ಶಿರಹಟ್ಟಿ ಪಟ್ಟಣದ ಹೊರವಲಯದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಿನ್ನೆ (ಶನಿವಾರ) ಸಂಜೆ ನಡೆದಿದೆ. ಮೃತರನ್ನು ಖಾನಾಪುರದ ಮಾಬುಸಾಬ ದೊಡ್ಡಮನಿ (55) ಹಾಗೂ ದನ ಮೇಯಿಸಲು ಹೋಗಿದ್ದ ಹರಿಪುರದ ನಿವಾಸಿ ಮುರುಗೇಶ ಹೊಸಮನಿ (40) ಎಂದು ಗುರುತಿಸಲಾಗಿದೆ.

Two died due to thunderbolts in Gadag
ಮಾಬುಸಾಬ ದೊಡ್ಡಮನಿ ಹಾಗೂ ಮುರುಗೇಶ ಹೊಸಮನಿ ಸಿಡಿಲಿಗೆ ಬಲಿಯಾದವರು

ನಗರದಾದ್ಯಂತ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಾಬುಸಾಬ ದೊಡ್ಡಮನಿ ಹರಿಪುರ ಹೊರವಲಯದಲ್ಲಿನ ಮಾವಿನ ತೋಟ ಕಾಯಲು ಹೋದಾಗ ಈ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್​​ ಕಲಗೌಡ ಪಾಟೀಲ, ಸಿಪಿಐ ವಿಕಾಸ ಲಮಾಣಿ, ಪಿಎಸ್​​ಐ ಪ್ರವೀಣ ಗಂಗೋಳ, ಕಂದಾಯ ನಿರೀಕ್ಷಕ ಮಹಾಂತೇಶ ಮುಗುದುಮ್​, ಗ್ರಾಮ ಲೆಕ್ಕಾಧಿಕಾರಿ ಪ್ರವೀಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿಜಯಪುರ: ಸಿಡಿಲು ಬಡಿದು ಇಬ್ಬರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.