ಗದಗ: ಕೊರೊನಾ ಭೀತಿಯಿಂದ ಲಾಕ್ಡೌನ್ ಮಾಡಿದ ಪರಿಣಾಮ ಅತಂತ್ರಕ್ಕೊಳಗಾದ ಬಡ ಕುಟುಂಬಗಳಿಗೆ ತಾತ್ಕಾಲಿಕವಾಗಿ ದಿನಸಿ ವಸ್ತುಗಳನ್ನು ಖರೀದಿಸಲು ಗ್ರಾಮದ ಸಾಹುಕಾರ ಕುಟುಂಬವೊಂದು 500 ರೂ. ಚೆಕ್ ವಿತರಣೆ ಮಾಡಿರುವ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ನಡೆದಿದೆ.
1 ವಾರದಿಂದ ಆಹಾರ ಧಾನ್ಯಗಳ ವಿತರಣೆ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಷ್ಟ್ರಾಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ ಅವರ ಕುಟುಂಬ ಗ್ರಾಮದ ಬಡ ಜನರ ಬೆನ್ನಿಗೆ ನಿಂತಿದೆ. ಅಷ್ಟೇ ಅಲ್ಲ, ಹೊಂಬಳ ಗ್ರಾಮದ ನೂರಾರು ಬಡ ಕುಟುಂಬಗಳಿಗೆ ಕಳೆದೊಂದು ವಾರದಿಂದ ಆಹಾರ ಧಾನ್ಯಗಳ ವಿತರಣೆ ಜೊತೆಗೆ ಅನೇಕ ವಸ್ತುಗಳನ್ನ ಧಾನ-ಧರ್ಮ ಮಾಡುವ ಮೂಲಕ ಆಸರೆಯಾಗುತ್ತಿದ್ದಾರೆ.
ಇಂದು ಸಹ ಗ್ರಾಮದಲ್ಲಿ ಅಂತ್ಯೋದಯ ಪಡಿತರ ಹೊಂದಿದ 285 ಬಡಕುಟುಂಬಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸ್ವಚ್ಛತಾ, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿ ಒಟ್ಟು 300ಕ್ಕೂ ಅಧಿಕ ಜನರಿಗೆ ತಲಾ 500 ರೂ. ಚೆಕ್ ವಿತರಣೆ ಮಾಡಿದರು.
ಇಂದಿನ ಚೆಕ್ ವಿತರಣೆಗೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಚಾಲನೆ ನೀಡಿದರು. ಜತೆಗೆ ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ ಅವರು ಎಲ್ಲರಿಗೂ ಚೆಕ್ ಪಡೆದುಕೊಂಡರು.