ಗದಗ: ಉಪ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳನ್ನೂ ತನ್ನದಾಗಿಸಿಕೊಳ್ಳಲಿದೆ. ಇದರಲ್ಲಿ ಕಾಂಗ್ರೆಸ್ ಷಡ್ಯಂತ್ರ, ಕುತಂತ್ರ ಏನೂ ನಡೆಯಲ್ಲ ಅಂತಾ ಆರೋಗ್ಯ ಸಚಿವ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.
ಗದಗನಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಗ್ರಾಫಿಕ್ಸ್ ಮಾಡೋ ಮೂಲಕ ಸ್ಲೋಗನ್ ಹಾಕಿ ಮತ ಹಾಕಬೇಡಿ ಅಂತ ಅಪಪ್ರಚಾರದ ಕೆಲಸ ಮಾಡ್ತಿದೆ. ಆದ್ರೆ ಸುಳ್ಳು ಸುದ್ದಿ ನೋಡುವಷ್ಟು ಪರಿಸ್ಥಿತಿಯಲ್ಲಿ ಜನರಿಲ್ಲ ಎಂದರು. ಕಾಂಗ್ರೆಸ್‌ಗೆ ಸೋಲಿನ ಭೀತಿ ಕಾಡುತ್ತಿದೆ, ಹೀಗಾಗಿ ಇಂಥ ಅಪಪ್ರಚಾರ ನಡೆಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಮತ್ತೆ ಮೈತ್ರಿಯಾಗುವ ಕುರಿತು ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಡಿಸೆಂಬರ್ 9ರ ನಂತರ ಗುಡ್ ನ್ಯೂಸ್ ಕೊಂಡುವಂಥದ್ದು ಏನೂ ಇಲ್ಲ. ಅವ್ರ ಸರ್ಕಾರ ರಚನೆ ಸಾಧ್ಯವೇ ಇಲ್ಲ. ಬಿಜೆಪಿ ಸರ್ಕಾರ ಬೀಳಬೇಕಾದ್ರೇ ಎಲ್ಲರೂ ಸೋಲಬೇಕು. ಆದ್ರೆ ಸೋಲುವ ಪ್ರಶ್ನೆಯೇ ಇಲ್ಲ. ಉಳಿದ ಅವಧಿಗೂ ಯಡಿಯೂರಪ್ಪ ಅವ್ರೇ ಸಿಎಂ ಆಗಿರ್ತಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.