ಗದಗ: ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರ ನರಗುಂದದ ಮನೆಯ ಕಂಪೌಂಡ್ ಬಳಿ ಸೋಮವಾರ ಹಾವು ಪ್ರತ್ಯಕ್ಷವಾಗಿದ್ದು, ಗೃಹ ರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ನರಗುಂದ ಪಟ್ಟಣದಲ್ಲಿರುವ ಸಚಿವರ ಮನೆಯ ಕಂಪೌಂಡ್‌ನಲ್ಲಿ ಕಂಡ 4 ಅಡಿ ಉದ್ದದ ನಾಗರ ಹಾವನ್ನು ಹೋಮ್‌ಗಾರ್ಡ್ ಸಿಬ್ಬಂದಿ ಬುಡ್ಡಾ ಸುರೇಬಾನ ಅವರು ಸೆರೆ ಹಿಡಿದು, ಸುರಕ್ಷಿತ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.
ಇದನ್ನೂ ಓದಿ: ಮಂಗಳಾದೇವಿ ರಸ್ತೆಗೆ ತುಳು ಲಿಪಿಯ ನಾಮಫಲಕ: ಮನವಿ ಕೊಟ್ಟ ಬಾಲಕಿಯಿಂದ ಉದ್ಘಾಟನೆ
ಇನ್ನೂ ಬುಡ್ಡಾ ಸುರೇಬಾನ ಅವರು ಸೋಮವಾರ ಒಂದೇ ದಿನ ವಿವಿಧ ಜಾತಿಯ ಮೂರು ಹಾವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.