ಗದಗ: ಅನುಮಾನಾಸ್ಪದ ರೀತಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ನ ನಿವೃತ್ತ ಅಧಿಕಾರಿ ಸಾವನ್ನಪ್ಪಿದ್ದಾರೆ.
ಗದಗನ ದಂಡಿನ ದುರ್ಗಮ್ಮ ಬಳಿಯ ಹೊಲವೊಂದರಲ್ಲಿ ನಿವೃತ್ತ ಅಧಿಕಾರಿ ಹನುಮಂತಪ್ಪ ಅವರ ಮೃತದೇಹ ಪತ್ತೆಯಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ನಲ್ಲಿ ಕೆಲಸ ಮಾಡ್ತಿದ್ದ ನೀರಲಗಿ ಗ್ರಾಮದ ಹನುಮಂತಪ್ಪ, ಕಳೆದ ಫೆಬ್ರವರಿಯಲ್ಲಿಸೇವೆಯಿಂದ ನಿವೃತ್ತರಾಗಿದ್ರು.
ಹನುಮಂತಪ್ಪ ಅವರ ಮೈಮೇಲಿದ್ದ ಉಂಗುರ, ಚೈನ್ ದೋಚಿ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.