ETV Bharat / state

ಗದಗ ಜಿ.ಪಂ ಅಧ್ಯಕ್ಷರಾಗಿ ಕೊಣ್ಣೂರಿನ ರಾಜೂಗೌಡ ಪಾಟೀಲ್​​​​ ಅವಿರೋಧ ಆಯ್ಕೆ

ಸಾಮಾನ್ಯ ಪುರುಷ ವರ್ಗಕ್ಕೆ ಮೀಸಲಿಡಲಾಗಿದ್ದ ಜಿ.ಪಂ ಅಧ್ಯಕ್ಷರ ಸ್ಥಾನಕ್ಕೆ ರಾಜೂಗೌಡ ಕೆಂಚನಗೌಡ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Rajugowda Patil elected as new Gadag GP president
ಗದಗ ಜಿ.ಪಂ ಅಧ್ಯಕ್ಷರಾಗಿ ಕೊಣ್ಣೂರಿನ ರಾಜೂಗೌಡ ಪಾಟೀಲ್​​​​ ಅವಿರೋಧ ಆಯ್ಕೆ
author img

By

Published : Jun 20, 2020, 12:45 AM IST

ಗದಗ: ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಾಗಿ ರಾಜೂಗೌಡ ಕೆಂಚನಗೌಡ್ರ ಪಾಟೀಲ್​​ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿನ್ನೆ ನಡೆದ ಜಿ.ಪಂ ಅಧ್ಯಕ್ಷರ ಆಯ್ಕೆ ಜಿ.ಪಂ ಅಧ್ಯಕ್ಷ/ಉಪಾಧ್ಯಕ್ಷರ ಚುನಾವಣೆಗಳ ಅಧ್ಯಕ್ಷಾಧಿಕಾರಿಗಳು ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಆಮ್ಲನ್ ಆದಿತ್ಯ ಬಿಸ್ವಾಸ್ ಘೋಷಿಸಿದರು.

ಗದಗ ಜಿ.ಪಂ ಅಧ್ಯಕ್ಷರಾಗಿ ಕೊಣ್ಣೂರಿನ ರಾಜೂಗೌಡ ಪಾಟೀಲ್​​​​ ಅವಿರೋಧ ಆಯ್ಕೆ

ಸಾಮಾನ್ಯ ಪುರುಷ ವರ್ಗಕ್ಕೆ ಮೀಸಲಿಡಲಾಗಿದ್ದ ಜಿ.ಪಂ ಅಧ್ಯಕ್ಷರ ಸ್ಥಾನಕ್ಕೆ ರಾಜೂಗೌಡ ಕೆಂಚನಗೌಡ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ನರಗುಂದ ತಾಲೂಕಿನ ಕೊಣ್ಣೂರು ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಇನ್ನು ಈ ಮೊದಲು ಇದ್ದ ಸಿದ್ದೇಶ್ವರ ಪಾಟೀಲ್ ಗದಗ ಜಿ.ಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ಸದಸ್ಯರ‌ ಪೂರ್ಣ ಬಹುಮತದೊಂದಿಗೆ ರಾಜೂಗೌಡ ಅವರು ಆಯ್ಕೆಯಾಗಿದ್ದಾರೆ.

ಇನ್ನು ಈ ಮೊದಲು ಅಧಿಕಾರ ಅವಧಿ ಹಂಚಿಕೆ ಒಪ್ಪಂದದ ಮೇರೆಗೆ ರಾಜೂಗೌಡ ಅವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಇನ್ನು ಇದೇ ವೇಳೆ ಮಾತನಾಡಿದ ಅವರು, ಗಡಿಯಲ್ಲಿ ವೀರ ಮರಣವಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಅಲ್ಲದೆ ಕೊರೊನಾದಿಂದಾಗಿ ಸಂಕಷ್ಟಕ್ಕೆ ‌ಒಳಗಾಗಿರುವ ರೈತರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಇನ್ನಷ್ಟು ಉದ್ಯೋಗಗಳನ್ನು ಸೃಷ್ಟಿಸಿ ಅವರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು. ಇನ್ನು ರೈತರಿಗೆ ಮತ್ತು ಜಿಲ್ಲೆಯ ಜನರಿಗೆ ಆದಷ್ಟು ಅಭಿವೃದ್ಧಿ ಪರ ಕೆಲಸಗಳಿಗೆ ಒತ್ತು ಕೊಡುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.