ETV Bharat / state

55 ವರ್ಷಗಳಿಂದ ಇದ್ದ ಸಣ್ಣ ಸೂರು ಆಸ್ಪತ್ರೆ ಮಾಲೀಕನಿಂದ ನೆಲಸಮ.. ಬೀದಿಗೆ ಬಿತ್ತು ವೃದ್ಧೆಯ ಬದುಕು! - ವೃದ್ಧೆಯ ಮನೆ ಧ್ವಂಸ,

ಗದಗ ನಗರದ ಮುಳಗುಂದ ನಾಕಾ ಬಳಿಯ ಖಾಸಗಿ ಆಸ್ಪತ್ರೆ ಮಾಲೀಕ, ವೃದ್ಧೆಯೊಬ್ಬರ ಗುಡಿಸಲು ಕೆಡವಿ ದರ್ಪ ತೋರಿರುವ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ಮಾಲೀಕನ ವಿರುದ್ಧ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Allegation against Hospital owner
ಮನೆ ಕಳೆದುಕೊಂಡು ಬೀದಿಗೆ ಬಿದ್ದ ವೃದ್ದೆ
author img

By

Published : Jul 4, 2021, 7:25 AM IST

ಗದಗ : ಆ ಹಿರಿ ಜೀವಕ್ಕೆ ಹಿಂದೆ ಮುಂದೆ ಅಂತ ಯಾರೂ ಇಲ್ಲ. ಪುಟ್ಟದೊಂದು ಗುಡಿಸಲು ನಿರ್ಮಿಸಿಕೊಂಡು ಇಳಿ ವಯಸ್ಸಿನಲ್ಲಿ ಜೀವನ ನಡೆಸುತ್ತಿದ್ದಳು. ಕಷ್ಟಪಟ್ಟು ದುಡಿದು ಬಂದ ಹಣದಿಂದ ಹೇಗೋ ಒಪ್ಪೊತ್ತಿನ ಊಟ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಳು. ಆದರೆ, ಅಂತಹ ನಿರ್ಗತಿಕ ಅಜ್ಜಿಯ ಮೇಲೆ ಖಾಸಗಿ ಆಸ್ಪತ್ರೆಯ ಮಾಲೀಕನೊಬ್ಬ ಅಂದಾ ದರ್ಬಾರ್ ನಡೆಸಿ, ಅವಳ ಪುಟ್ಟ ಗುಡಿಸಲು ನಾಶ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಗರದ ಮುಳಗುಂದ ನಾಕಾ ಬಳಿಯ ಎನ್.ಬಿ. ಪಾಟೀಲ್ ಖಾಸಗಿ ಆಸ್ಪತ್ರೆಯ ಮಾಲೀಕ ವೃದ್ಧೆಯ ಮೇಲೆ ದರ್ಪ ತೋರಿರುವ ಆರೋಪಿ. ಖಾಸಗಿ ಆಸ್ಪತ್ರೆಯ ಮುಂದೆ ಇರುವ ನಗರಸಭೆ ಜಾಗದಲ್ಲಿ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಯಮನಮ್ಮ ಎಂಬ ಅಜ್ಜಿ ವಾಸವಾಗಿದ್ದಳು. ಇದೀಗ ಆಸ್ಪತ್ರೆ ಮಾಲೀಕ ಎನ್.ಬಿ ಪಾಟೀಲ್, ಅಜ್ಜಿ ವಾಸವಾಗಿದ್ದ ಗುಡಿಸಲು ನೆಲಸಮ ಮಾಡಿ, ಆಕೆಯನ್ನು ಅಲ್ಲಿಂದ ಓಡಿಸಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

ಮನೆ ಕಳೆದುಕೊಂಡು ಬೀದಿಗೆ ಬಿದ್ದ ವೃದ್ಧೆ

ನಾನು ಹಲವಾರು ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದೇನೆ, ನನಗೆ ಯಾರು ತೊಂದರೆ ಕೊಟ್ಟಿಲ್ಲ. ಈಗ ಎನ್.ಬಿ ಪಾಟೀಲ್ ಆಸ್ಪತ್ರೆಯವರು ಪಾರ್ಕಿಂಗ್ ಸ್ಥಳಕ್ಕಾಗಿ ನನ್ನ ಗುಡಿಸಲು ಕೆಡವಿ ಹಾಕಿದ್ದಾರೆ ಎಂದು ಅಜ್ಜಿ ಕಣ್ಣೀರಿಟ್ಟಿದ್ದಾಳೆ.

ಓದಿ : ರಕ್ಷಕ್​ ಕಾರ್ಯಾಚರಣೆಯಲ್ಲಿ ಯೋಧ ಹುತಾತ್ಮ: ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಬಂದ ಪಾರ್ಥಿವ ಶರೀರ

ಯಮನಮ್ಮ ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿಗೆ ಬರುವ ರಸ್ತೆ ಪಕ್ಕದ ಜಾಗದಲ್ಲಿ ಹಲವಾರು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದಳು. ನಗರಸಭೆ ಅಧಿಕಾರಿಗಳು ಕೂಡಾ ಈಕೆಗೆ ತೊಂದರೆ ನೀಡಿಲ್ಲ. ಆದರೆ, ಖಾಸಗಿ ಆಸ್ಪತ್ರೆಯವರು ತಮ್ಮ ಲಾಭಕ್ಕಾಗಿ ಅಜ್ಜಿಯ ಗುಡಿಸಲು ನೆಲಸಮ ಮಾಡಿದ್ದಾರೆ. ಅವರಿಗೆ ಪಾರ್ಕಿಂಗ್ ವ್ಯವಸ್ಥೆ ಬೇಕಾದರೆ ಆಸ್ಪತ್ರೆಯ ಸ್ಥಳದಲ್ಲಿ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ನಗರಸಭೆಯ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಯಾಕೆ ಮಾಡಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಕೇಳಲು ಹೋದ ಸ್ಥಳೀಯರು ಹಾಗೂ ಮಾಧ್ಯಮದವರ ಮೇಲೆ ಆಸ್ಪತ್ರೆಯ ಮಾಲೀಕ ಹರಿಹಾಯ್ದಿದ್ದಾರೆ. ನಾನೇ ಮನೆಯನ್ನು ಕೆಡವಿ ಹಾಕಿದ್ದು, ಬೇಕಾದ್ರೆ ನೀವು ಕರೆದುಕೊಂಡು ಹೋಗಿ ಅಂತಾ ದಬ್ಬಾಳಿಕೆ ಮಾಡ್ತಿದ್ದಾರೆ.

ನಗರದ ಕ್ರಾಂತಿ ಸೇನಾ ಸಂಘಟನೆಯ ಸದಸ್ಯರು ವೃದ್ಧೆಯ ಬೆನ್ನಿಗೆ ನಿಂತಿದ್ದಾರೆ. ಮನೆ ತೆರವು ಮಾಡಿದ ಆಸ್ಪತ್ರೆಯವರ ಮೇಲೆ ನಗರಸಭೆ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಆಕೆಗೆ ಮನೆ ಕಟ್ಟಿಸಿಕೊಡದಿದ್ದರೆ ಸಂಘಟನೆಯ ವತಿಯಿಂದ ಭಿಕ್ಷೆ ಬೇಡಿ, ಅದೇ ಜಾಗದಲ್ಲಿ ಮನೆಯನ್ನು ಮರು ನಿರ್ಮಾಣ ಮಾಡಿಕೊಡುವುದಾಗಿ ಎಚ್ಚರಿಸಿದ್ದಾರೆ.

ಸ್ಥಳಕ್ಕೆ ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಮುಂದೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.