ETV Bharat / state

ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಪವಾಡವೆಂಬಂತೆ ಬದುಕುಳಿದ ಪವರ್​​ ಮ್ಯಾನ್​​

ವಿದ್ಯುತ್​ ದುರಸ್ತಿ ಕಾರ್ಯದ ವೇಳೆ ಪವರ್ ಮ್ಯಾನ್​​​ಗೆ ವಿದ್ಯುತ್​ ತಾಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Power Man who survived by accident by touching electricity
ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಪವಾಡವೆಂಬಂತೆ ಬದುಕುಳಿದ ಪವರ್​​ ಮ್ಯಾನ್​​
author img

By

Published : Jul 24, 2020, 11:48 PM IST

ಗದಗ: ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಗಿಡವನ್ನು ತೆರವುಗೊಳಿಸುವ ವೇಳೆ ದಿಢೀರ್ ವಿದ್ಯುತ್ ಸ್ಪರ್ಶಿಸಿದರೂ ಪವರ್​​​​ಮ್ಯಾನ್ ಓರ್ವ ಪವಾಡ ಸದೃಶ್ಯವಾಗಿ ಬದುಕುಳಿದ ಘಟನೆ ನಡೆದಿದೆ.

ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಕುಷ್ಟಗಿ ರಸ್ತೆಯ ದುರ್ಗಾದೇವಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಈ ಜಾಗದಲ್ಲಿ ಕರೆಂಟ್ ತಂತಿಯ ಮೇಲೆ ಗಿಡವೊಂದು ತಾಗಿತ್ತು. ಇದನ್ನು ತೆರವುಗೊಳಿಸಲು ವಿಠ್ಠಲ ಮಾಳೊತ್ತರ ಎಂಬ ಪವರ್​​​ಮ್ಯಾನ್ ಮತ್ತು ಇತರ ಸಿಬ್ಬಂದಿ ಹೋಗಿದ್ದರು.‌

ಹೋಗುವ ಮುನ್ನ ಕೆಇಬಿಯಲ್ಲಿ ವಿದ್ಯುತ್ ಕಡಿತಗೊಳಿಸಿ ಕಾರ್ಯಪ್ರವೃತ್ತರಾಗಿದ್ದರು. ಆದರೆ ಇನ್ನೇನು ಕೆಲಸ ಮುಗಿಸಿ ಮರಳಬೇಕು ಎನ್ನುವಷ್ಟರಲ್ಲಿ ವಿದ್ಯುತ್ ಹರಿದಿದೆ.

ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಪವಾಡವೆಂಬಂತೆ ಬದುಕುಳಿದ ಪವರ್​​ ಮ್ಯಾನ್​​

ಈ ವೇಳೆ ಯುವಕನಿಗೆ ವಿದ್ಯುತ್​ ತಾಕಿದ್ದು, ಕೆಲಕಾಲ ಸ್ಥಳಿಯರು ಸ್ಥಳದಲ್ಲಿ ಕಿರುಚಾಡಿದ್ದಾರೆ. ಬಳಿಕ ಕೆಲವು ಯುವಕರು ಏಣಿ ಮೂಲಕ ಆತನನ್ನು ಕೆಳಗಿಳಿಸಿದ್ದಾರೆ. ಯುವಕನಿಗೆ ವಿದ್ಯುತ್ ಸ್ಪರ್ಶಿಸುವ ಬಗ್ಗೆ ವಿಷಯ ಗೊತ್ತಾಗುತ್ತಿದ್ದಂತೆ ಕೆಇಬಿಯಲ್ಲಿ ಫ್ಯೂಜ್ ತೆಗೆದಿದ್ದಾರೆ. ಬಳಿಕ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಘಟನೆಯಲ್ಲಿ ಯುವಕ ಗಂಭೀರ ಗಾಯಗೊಂಡಿದ್ದು ಸ್ಥಿತಿ ಚಿಂತಾಜನಿಕವಾಗಿದೆ. ಯುವಕನ ಎದೆಭಾಗ, ಬೆನ್ನು ಸುಟ್ಟಿದೆ. ಸದ್ಯ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಕೆಇಬಿ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.