ಗದಗ: ಪತಿ ಇಜಾಜ್ ಶಿರೂರ ಎಂಬಾತನಿಂದ 23 ಬಾರಿ ಚಾಕು ಇರಿತಕ್ಕೊಳಗಾಗಿ ಹಲ್ಲೆಗೊಳಗಾಗಿದ್ದ ಗದಗದ ಅಪೂರ್ವ ಎಂಬ ಯುವತಿಯ ಮನೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬುಧವಾರ ಭೇಟಿ ನೀಡಿದರು. ನಗರದ ಹುಡ್ಕೋ ಕಾಲೋನಿಯ ನಿವಾಸಕ್ಕೆ ಆಗಮಿಸಿದ ಅವರು, ಸಾಂತ್ವನ ಹೇಳಿದರು. ಈ ವೇಳೆ ಯುವತಿ, ಕೊಲೆ ಭಯದ ಆತಂಕ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾರೆ.
'ನನ್ನನ್ನು ಮೋಸ ಮಾಡಿ ಮದುವೆಯಾಗಿ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾನೆ. ಜೊತೆಗೆ ಮತಾಂತರ ಮಾಡಿಯೂ ಹಿಂಸಿಸಿದ್ದಾನೆ. ನಾನು ಕೊಲೆಯಾಗಿದ್ರೆ ನನ್ನ ಮಗು ಅನಾಥವಾಗುತ್ತಿತ್ತು. ನನ್ನ ಮಗುವಿಗಾಗಿಯಾದ್ರೂ ನಾನು ಬದುಕಬೇಕು. ಅದಕ್ಕೆ ನನ್ನ ಕುಟುಂಬಕ್ಕೆ ರಕ್ಷಣೆ ಬೇಕು' ಎಂದು ಅವರು ವಿನಂತಿಸಿಕೊಂಡಿದ್ದಾರೆ.
ಇನ್ನೂ ಕಿರಾತಕ ಪತಿ ಇಜಾಜ್ ಶಿರೂರಗೆ ಜಾಮೀನು ಸಿಗುತ್ತೆ ಅನ್ನೋ ವಿಷಯ ಕೇಳಿ ಅಪೂರ್ವ ಶಾಕ್ ಆಗಿದ್ದಾರೆ. ಅಲ್ಲದೇ ಜಾಮೀನು ಸಿಕ್ಕರೆ ಮತ್ತೆ ನಮ್ಮನ್ನು ಕೊಲ್ಲುತ್ತಾನೆ ಅನ್ನೋ ಭಯದಲ್ಲಿ ಅವರ ಕುಟುಂಬ ಇದೆ. ನಿಮ್ಮ ಕುಟುಂಬದ ಜೊತೆಗೆ ನಾವು ಇರ್ತೇವೆ ಎಂದು ಮುತಾಲಿಕ್ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: ಕೈ ನಾಯಕರಿಂದ ಗುತ್ತಿಗೆದಾರನ ಕುಟುಂಬಸ್ಥರಿಗೆ ಸಾಂತ್ವನ, ಉದ್ಯೋಗದ ಭರವಸೆ
ಈಶ್ವರಪ್ಪ ರಾಜೀನಾಮೆಗೆ ಆಗ್ರಹ: ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪ ನೈತಿಕತೆ ಇದ್ರೆ, ತಕ್ಷಣ ರಾಜೀನಾಮೆ ನೀಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು.