ಗದಗ: ಕಳೆದ ಕೆಲವು ದಿನಗಳಿಂದ ಗದಗ ಜಿಲ್ಲಾದ್ಯಂತ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಗೆ ಲಕ್ಷ್ಮೇಶ್ವರ ತಾಲೂಕಿನ ಅಡರಗಟ್ಟಿಯಲ್ಲಿ ಮನೆಯ ಗೋಡೆ ಕುಸಿದಿದೆ. ಜಿಲ್ಲಾದ್ಯಂತ ಸುಮಾರು 25 ಕ್ಕೂ ಹೆಚ್ಚು ಮನೆಗಳಿಗೂ ಹಾನಿಯಾಗಿರುವ ವರದಿಯಾಗಿದೆ.
ಮಳೆಯ ಅಬ್ಬರಕ್ಕೆ ಮನೆಗಳು ಛಾವಣಿ ಸಹಿತ ಕುಸಿದ ಬೀಳುತ್ತಿರುವ ಘಟನೆಗಳೂ ನಡೆದಿವೆ. ತಾಲೂಕಿನ ಅಡರಕಟ್ಟಿ ಗ್ರಾಮದ ಶಾಂತವ್ವ ಹಡಪದ ಎಂಬವವರ ಮನೆಗೆ ಮಳೆಯಿಂದ ಹಾನಿಯಾಗಿದ್ದು, ನಿನ್ನೆ ರಾತ್ರಿ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.