ಗದಗ: ಗದಗದ ಜಿಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್ನ ಪಕ್ಕದಲ್ಲಿರುವ ಹಾಸ್ಟೆಲ್ನಲ್ಲಿ 9 ಮಂದಿ ವೈದ್ಯಕೀಯ ವಿಧ್ಯಾರ್ಥಿಗಳು ನಡುರಾತ್ರಿ ಬರ್ತಡೇ ಪಾರ್ಟಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವೈದ್ಯಕೀಯ ವಿಧ್ಯಾರ್ಥಿಗಳು ನಡುರಾತ್ರಿ ಡಿಜೆ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಹಾಸ್ಟೆಲ್ ವಾರ್ಡನ್ ಡಾ. ಜಿ.ಎಂ ರಾಜು ಅವರಿಗೆ ಮಾಹಿತಿ ತಿಳಿದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಪೊಲೀಸರಿಗೂ ಕರೆ ಮಾಡಿ ಎಚ್ಚರಿಕೆ ಕೊಡಿಸಿದ್ದಾರೆ ಎಂಬ ಮಾಹಿತಿಯಿದೆ.
ಏಪ್ರಿಲ್ 21 ಹಾಗೂ 22ರ ಮಧ್ಯರಾತ್ರಿ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.