ಗದಗ : ಕೊರೊನಾ ಹಿನ್ನೆಲೆ ಭಾರತವೇ ಬಂದ್ ಆಗಿದೆ. ಈ ನಡುವೆ ನಗರದಲ್ಲಿ ಮಾಂಸ ಮಾರಾಟ ನಿಷೇಧ ಎಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ್ ಹೇಳಿಕೆಯ ನಡುವೆಯೂ ನಗರದಲ್ಲಿ ಮಾಂಸ ಮಾರಾಟ ಎಗ್ಗಿಲ್ಲದೆ ನಡೆದಿದ್ದು, ಜನರು ಸರತಿ ಸಾಲಿನಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಚಿಕನ್ ಖರೀದಿಸ್ತಾ ಇದ್ದಾರೆ.
ಸಹಜವಾಗಿ ಇಂದು ಮಾರುಕಟ್ಟೆಯಲ್ಲಿ ಚಿಕನ್ ಮಾರಾಟ ನಡೆದಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ, ಮದ್ಯ, ಮಾಂಸ, ಮೀನು ಮಾರಾಟಕ್ಕೆ ನಿಷೇಧವಿದೆ ಎಂದಿದ್ದರು. ಆದರೆ ಭಾನುವಾರ ಖುಲ್ಲಂಖುಲ್ಲಾ ಚಿಕನ್ ವ್ಯಾಪಾರ ಸಹಜವಾಗಿಯೇ ನಡೆದಿದೆ.
ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳ ಬೇಕಿತ್ತಲ್ಲವಾ..? ಅದು ಸಾಧ್ಯವಿಲ್ಲ ಯಾಕಂದ್ರೆ ಲಾಕ್‌ಡೌನ್ ಮಾರ್ಗದರ್ಶಿಯಲ್ಲಿ ದಿನಸಿಯಂತೆ ಮಾಂಸವನ್ನೂ ಅಗತ್ಯ ವಸ್ತು ಎಂದು ಪರಿಗಣಿಸಲಾಗಿದೆ. ಹೀಗಾಗಿ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಾಂಸ ಮಾರಾಟಕ್ಕೆ ನಾಲ್ಕು ದಿನದಿಂದಲೂ ಅವಕಾಶ ನೀಡಿವೆ. ಆದರೆ ಅಚಾತುರ್ಯದಿಂದಲೋ, ಮಾಹಿತಿ ಕೊರತೆಯಿಂದಲೋ ಸಚಿವರು ಮಾಂಸ ಮಾರಾಟ ನಿಷೇಧಿಸಿದೆ ಎಂದು ಹೇಳಿದ್ದರು.