ETV Bharat / state

ಮಾಡಿದ ಸಣ್ಣ ತಪ್ಪಿಗೆ, ಆತ್ಮಹತ್ಯೆ ಮಾಡಿಕೊಂಡನಾ ಕುರಿಗಾಯಿ? - ಹಿರೇವಡ್ಡಟ್ಟಿ ಕುರಿಗಾಯಿ ಸಾವು

ಬೇರೆಯವರ ಜಮೀನಿನಲ್ಲಿ ಕುರಿ ಮೇಯಿಸಿದ್ದಕ್ಕೆ ಮನನೊಂದು ಕುರಿಗಾಯಿಯೊರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

author img

By

Published : May 3, 2020, 4:30 PM IST

ಗದಗ: ರೈತರೊಬ್ಬನ ಜಮೀನಿನ ಬೆಳೆ ಮೇಯಿಸಿದ್ದಕ್ಕೆ ಮನನೊಂದು ಕುರಿಗಾಹಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ.

ತಾಮ್ರಗುಂಡಿ ನಿವಾಸಿ ಕುಮಾರ ವಡ್ಡಟ್ಟಿ(20) ಮೃತ ಕುರಿಗಾಯಿ. ಕುಮಾರ್,​ ಹಿರೇವಡ್ಡಟ್ಟಿ ಗ್ರಾಮದ ದೇವಪ್ಪ ಹೊಂಬಳ ಎಂಬ ರೈತನ ಜಮೀನಿನಲ್ಲಿದ್ದ ಹುಣಸೆ ಗಿಡಗಳನ್ನು ಮೇಯಿಸಿದ್ದ, ಇದಕ್ಕೆ ಪ್ರತಿಯಾಗಿ ರೈತ ಕುರಿಗಳನ್ನು ತೆಗೆದುಕೊಂಡು ಹೋಗಿ ಬೆಳೆ ನಷ್ಟ ಇಲ್ಲವೆ ಕುರಿಗಳನ್ನು ಕೊಡುವಂತೆ ಬೇಡಿಕೆಯಿಟ್ಟಿದ್ದನೆಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ.

ಈ ಘಟನೆಯಿಂದ ಭಯಗೊಂಡು ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.